ಕರಾವಳಿ

ವಾರದಲ್ಲಿ 2-3 ಸಲ ಇದನ್ನ ಸೇವಿಸುವುದರಿಂದ ದೇಹದಲ್ಲಾಗುವ ಬದಲಾವಣೆ..ಕಾಣಿರಿ…?

Pinterest LinkedIn Tumblr
ದಾಳಿಂಬೆ ಭೂಮಿ ಮೇಲೆ ದೊರಕುವ ಅತ್ಯದ್ಬುದ ಹಣ್ಣುಗಳಲ್ಲಿ ಒಂದು. ಅದರ ಲಾಭಗಳು ಅನನ್ಯ. ದಾಳಿಂಬೆಯ ರಸವನ್ನು ವಾರಕ್ಕೆ 2-3 ದಿನ ಅಥವಾ ದಿನವೂ ಸೇವಿಸುವುದರಿಂದ ದೇಹಕ್ಕೆ ತುಂಬ ಲಾಭಗಳಿವೆ..ನೋಡಿ.
 1. ರಕ್ತವನ್ನು ಶುದ್ದಿ ಗೊಳಿಸುತ್ತದೆ
ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ‘ನಿಮ್ಮ ರಕ್ತ ಶುದ್ದಿಯಾಗಲು ಸಹಕಾರಿಯಾಗಿದೆ. ದಾಳಿಂಬೆ ಬೀಜಗಳು ನಿಮ್ಮ ರಕ್ತವನ್ನು ಶುದ್ಧಿಗೊಳಿಸಿ ಉತ್ತಮವಾಗಿ ರಕ್ತ ಪರಿಚಲನೆಯಾಗುವಂತೆ ಮಾಡುತ್ತದೆ.
2. ಸ್ವತಂತ್ರ ರಾಡಿಕಲ್ಗಳಿಂದ ನಮ್ಮನ್ನು ರಕ್ಷಿಸುತ್ತದೆ
ದಾಳಿಂಬೆಯಲ್ಲಿ ಆಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ ಮತ್ತು ಇದರಿಂದಾಗಿ ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ, ಪರಿಸರದಲ್ಲಿನ ಹಾನಿಕಾರಕ ಜೀವಾಣುಗಳ ಕಾರಣದಿಂದಾಗಿ ಫ್ರೀ ರಾಡಿಕಲ್ಗಳು ರೂಪುಗೊಳ್ಳುತ್ತವೆ. ಇದನ್ನು ದಾಳಿಂಬೆ ರಸ ಇದನ್ನು ತಡೆಗಟ್ಟುತ್ತದೆ.
3.ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ
ದಾಳಿಂಬೆಯನ್ನು ಸೇವಿಸುವುದರಿಂದ ಲೈಂಗಿಕ ಸಮಸ್ಯೆ ದೂರವಾಗುವುದು, ಗಂಡಸರಿಗಾಗಲಿ ಅಥವಾ ಹೆಂಗಸರಿಗಾಗಲಿ ಇದು ಲೈಂಗಿಕ ಶಕ್ತಿಯನ್ನು ನೀಡುತ್ತದೆ.
4. ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಸಂಶೋಧನೆಯ ಪ್ರಕಾರ ದಿನವೂ ದಾಳಿಂಬೆ ರಸವನ್ನು ಕುಡಿದರೆ ಜ್ಞಾಪಕಶಕ್ತಿ ಹೆಚ್ಚಾಗುವುದೆಂದು ತಿಳಿದು ಬಂದಿದೆ.
5 ಬಿ.ಪಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ದಾಳಿಂಬೆಯಲ್ಲಿ ಪ್ಯುನಿಕ್ ಆಸಿಡ್ ಅಂಶ ಹೇರಳವಾಗಿದೆ. ಇದು ರಕ್ತದಲ್ಲಿ ಚೋಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಬಿ ಪಿ ಯನ್ನು ನಿಯಂತ್ರಿಸುತ್ತದೆ.
ದಾಳಿಂಬೆ ರಸವು ಇನ್ನು ಅನೇಕ ಲಾಭಗಳನ್ನು ನೀಡುತ್ತದೆ. ದಿನವೂ ಕುಡಿಯಲು ಆಗದಿದ್ದರೆ ವಾರಕ್ಕೆ 2ಬಾರಿ ಆದರೂ ಕುಡಿದರೆ ನಿಮ್ಮ ದೇಹಕ್ಕೆ ಬಹುಮುಖ್ಯವಾಗಿ ಬೇಕಾಗುವ ವಿಟಮಿನ್ಸ್ಗಳು ದೊರೆಯುತ್ತದೆ.

Comments are closed.