ಕರಾವಳಿ

‘ಜನಸ್ನೇಹಿ’ ಶೀರೂರು ಶ್ರೀ ಗಳ ನಿಧನಕ್ಕೆ ಕಸಾಪ ಅಧ್ಯಕ್ಷ ಕಲ್ಕೂರ ತೀವ್ರ ಸಂತಾಪ

Pinterest LinkedIn Tumblr

ಮಂಗಳೂರು : ಗುರುವಾರ ‌ಅಸ್ತಂಗತರಾದ‌ ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠದ ಯತಿಗಳಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀ ಪಾದರ ನಿಧನಕ್ಕೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರಕಲ್ಕೂರ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಪರ್ಯಾಯದ ಸಂದರ್ಭ ಮಂಗಳೂರಿನ ಸಾರ್ವಜನಿಕರಿಂದ ಪೌರಸನ್ಮಾನ ಸ್ವೀಕರಿಸಿದ್ದ ಶೀರೂರು ಶ್ರೀಗಳು ವೈವಿಧ್ಯಮಯವಾಗಿ ಶ್ರೀ ಕೃಷ್ಣನ ವಿಗ್ರಹವನ್ನು ಅಲಂಕರಿಸಿ ಭಕ್ತಾದಿಗಳೆಲ್ಲರ ಮನೆ-ಮನಗಳಲ್ಲಿ ಒಂದುರೀತಿಯಕ್ರಾಂತಿಯನ್ನೇ‌ಉಂಟುಮಾಡಿದ್ದರು. ಉಡುಪಿ ರಥಬೀದಿಯನ್ನು ವಾಹನ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ‌ ಇವರದಾಗಿತ್ತು. ಸದಾ ಒಂದಿಲ್ಲೊಂದು ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಶ್ರೀ ಪಾದರು‌ಓರ್ವ ‘ಜನಸ್ನೇಹಿ’ ಸ್ವಾಮೀಜಿಯಾಗಿದ್ದರು. ಅವರ‌ ಅಗಲಿಕೆಯಿಂದ ತುಂಬಾ ದುಃಖವಾಗಿದೆ‌ ಎಂದು ಕಲ್ಕೂರ ತಮ್ಮ ಸಂತಾಪವನ್ನು ವ್ಯಕ್ತಪಡಿಸಿರುವರು.

Comments are closed.