ಕರಾವಳಿ

‘ಸರಸ’ಕ್ಕೆ ಬರುವಂತೆ ಕರೆಯುತ್ತಿದ್ದ ‘ಕರವೇ’ ಗೌರಾವಧ್ಯಕ್ಷನಿಗೆ ವಿವಾಹಿತೆ ನೀಡಿದ್ದು ಗೂಸಾ!

Pinterest LinkedIn Tumblr

ಉಡುಪಿ: ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ವಿವಾಹಿತ ಮಹಿಳೆಗೆ ತನ್ನ ಜೊತೆ ಬಂದು ಸಹಕರಿಸು ಎಂದು ನಿತ್ಯವೂ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಎಂದು ಗುರುತಿಸಿಕೊಂಡ ವ್ಯಕ್ತಿಯೋರ್ವನಿಗೆ ಮಹಿಳೆ, ಆಕೆ ಪತಿ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಉಡುಪಿ ಜಿಲ್ಲಾ ಕರವೇ ಗೌರವಾಧ್ಯಕ್ಷ ಎನ್ನಲಾದ ಶಿರ್ವ ಗ್ರಾಮದ ಪಂಜಿಮಾರಿನ ಸಂತೋಷ್ ಶೆಟ್ಟಿ ಎಂಬಾತ ಆರೋಪಿಯಾಗಿದ್ದು ಸದ್ಯ ಶಿರ್ವ ಪೊಲೀಸರ ಅತಿಥಿಯಾಗಿದ್ದಾನೆ.

ಪಂಜಿಮಾರಿನಲ್ಲಿ‌ ಫ್ಯಾನ್ಸಿ‌ ಸ್ಟೋರ್‌ ನಡೆಸುತ್ತಿರುವ ಮಹಿಳೆಯೋರ್ವರ ಮೊಬೈಲ್ ನಂಬರ್ ಅದ್ಯೆಗೋ ಪಡೆದ ಸಂತೋಷ್ ಈತ ಕೆಲ ದಿನಗಳಿಂದ ಆಕೆಗೆ ಕರೆ‌ಮಾಡಿ ಅಶ್ಲೀಲವಾಗಿ ಮಾತನಾಡಿ ತನ್ನೊಂದಿಗೆ ಬರುವಂತೆ ಪೀಡಿಸುತ್ತಿದ್ದ ಅಷ್ಟೆ ಅಲ್ಲದೇ ಇನ್ನು ಮುಂದುವರಿದು ಲಾಡ್ಜ್ ರೂಮ್ ಬುಕ್ ಮಾಡುವೆ ನೀನು ಬರಬೇಕು, ಇಲ್ಲವಾದಲ್ಲಿ ಎತ್ತಾಕಿಕೊಂಡು ಹೋಗುವೆ ಎಂದು ಕರೆ ಮಾಡಿ ಬೆದರಿಸುತ್ತಿದ್ದ.

ಈತನ ನಿರಂತರ ಕಾಟದಿಂದ ಬೇಸತ್ತ ಮಹಿಳೆ ಈ ವಿಚಾರ ಪತಿಗೆ ತಿಳಿಸಿದ್ದು ಈತನನ್ನು ಖೆಡ್ಡಾಗೆ ಬೀಳಿಸಲು ಒಂದೊಳ್ಳೆ ಉಪಾಯ ಮಾಡುತ್ತಾರೆ. ಮಹಿಳೆಯು ಆರೋಪಿ ಸಂತೋಷ್‌ಗೆ ಕರೆ ಮಾಡಿ ಹೋಟೆಲ್‌ ರೂಂಗೆ ಬರಲು ತಾನು ಸಿದ್ದ ಎಂದು ತನ್ನ ಫ್ಯಾನ್ಸಿ ಸ್ಟೋರ್​ಗೆ  ಕರೆಸಿಕೊಂಡಿದ್ದಾಳೆ. ಆ ವೇಳೆ ಅಲ್ಲಿದ್ದ ಮಹಿಳೆ ಮತ್ತು ಆಕೆಯ ಪತಿ ಈತನಿಗೆ ಗೂಸಾ ನೀಡಿ ಶಿರ್ವ ಪೊಲೀಸರಿಗೆ ದೂರು ನೀಡಿದ್ದಾರೆ.

Comments are closed.