ಕರಾವಳಿ

ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾದರೆ ಎನು ತೊಂದರೆ ಗೋತ್ತೆ..?

Pinterest LinkedIn Tumblr

ಆರೋಗ್ಯಯುತ ಮೂಳೆಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂಗಿಂತ ಅರ್ಧದಷ್ಟನ್ನು ಮಾತ್ರ ವಯಸ್ಕ ಭಾರತೀಯರು ಸೇವಿಸುತ್ತಾರೆ ಎಂದು ಜಾಗತಿಕ ಆಹಾರಕ್ರಮದ ಕ್ಯಾಲ್ಸಿಯಂ ಸೇವನೆಯ ಜಾಗತಿಕ ನಕ್ಷೆ ತಿಳಿಸಿದೆ. ಮನುಷ್ಯನ ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯವಾಗಿದ್ದು ದೇಹಕ್ಕೆ ಬೇಕಾದ ಶಕ್ತಿಯ ಶೇಕಡಾ 30ರಿಂದ 35 ಭಾಗದಷ್ಟು ಒದಗಿಸುತ್ತದೆ. ದೇಹದಲ್ಲಿ ಕಡಿಮೆ ಮೂಳೆ ಸಾಂದ್ರತೆ ಆಸ್ಟಿಯೊಪೊರೋಸಿಸ್ ಮತ್ತು ಮುರಿದ ಎಲುಬುಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೂಳೆಗಳು ಬಹುತೇಕ ಕ್ಯಾಲ್ಸಿಯಂನಿಂದ ಕೂಡಿದೆ. ಆದ್ದರಿಂದ ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳು ಅಗತ್ಯ. ಬರೆಯ ಕ್ಯಾಲ್ಸಿಯಂ ಇದ್ದರೆ ಸಾಲದು, ಇತರ ಪೋಷಕಾಂಶಗಳೂ ಬೇಕು. ಇದರಲ್ಲಿ ಪೊಟ್ಯಾಶಿಯಂ, ಫಾಸ್ಪರಸ್, ಸತು ಮೊದಲಾದವು ಕ್ಯಾಲ್ಸಿಯಂ ಅಂಶವನ್ನು ಮೂಳೆ ಹೀರಿಕೊಳ್ಳಲು ಸಹಾಯ ಮಾಡುತ್ತವೆ

ಹಸಿರು ಸೊಪ್ಪು ಮತ್ತು ಎಲೆಗಳು ಕ್ಯಾಲ್ಸಿಯಂ ಅಂಶವನ್ನು ಮೂಳೆಗಳು ಹೀರಿಕೊಳ್ಳಲು ಅಗತ್ಯವಾದ ಪೋಷಕಾಂಶವೆಂದರೆ ವಿಟಮಿನ್ ಕೆ. ಇದು ಹಸಿರು ಎಲೆ ಮತ್ತು ಸೊಪ್ಪುಗಳಲ್ಲಿ ಹೇರಳವಾಗಿದ್ದು ವಾರದ ಕೆಲವು ಹೊತ್ತಿನಲ್ಲಾದರೂ ಸಾಕಷ್ಟು ಪ್ರಮಾಣದಲ್ಲಿ ಸೊಪ್ಪುಗಳನ್ನು ಸೇವಿಸಬೇಕು.

ಅಕ್ರೋಟು ಅಥವಾ ಕಂದುಕಾಯಿಯಲ್ಲಿ ಉತ್ತಮ ಪ್ರಮಾಣದ ಸತು (Zinc) ಲಭ್ಯವಿದ್ದು ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುತ್ತವೆ.

ಕಿತ್ತಳೆ, ಮೂಸಂಬಿ ಮೊದಲಾದ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಮೂಳೆಗಳು ದೃಢವಾಗಲು ಸಹಕರಿಸುತ್ತವೆ. ಆಗಾಗ ಈ ಹಣ್ಣುಗಳನ್ನು ಸೇವಿಸುತ್ತಿರುವುದು ಉತ್ತಮ.

ವಿವಿಧ ಒಣಫಲಗಳು ಮ್ಯಾಂಗನೀಸ್, ಪೊಟ್ಯಾಶಿಯಂ ಮತ್ತು ಫಾಸ್ಪರಸ್ ಹೆಚ್ಚಿರುವ ಒಣಫಲಗಳನ್ನು ಆಗಾಗ ತಿನ್ನುತ್ತಿರುವುದರಿಂದ ಮೂಳೆಗಳು ದೃಢವಾಗುತ್ತವೆ. ನಮ್ಮ ಬಡವರ ಬಾದಾಮಿ ಶೇಂಗಾಬೀಜ ಇದಕ್ಕೆ ಉತ್ತಮ ಆಯ್ಕೆಯಾಗಿದೆ. ಅಂತೆಯೇ ಬಾದಾಮಿ, ಒಣ ಪೀಚ್ ಹಣ್ಣುಗಳಲ್ಲೂ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ನಮ್ಮ ಶರೀರದಿಂದ ಕ್ಯಾಲ್ಸಿಯಂ ಮೂತ್ರದ ಮೂಲಕ ವ್ಯರ್ಥವಾಗಿ ಹೊರಹೋಗದಂತೆ ತಡೆಯುತ್ತದೆ.

ಸಾಲ್ಮನ್ ಮೊದಲಾದ ಮೀನುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದೆ. ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ವಾರಕ್ಕೊಮ್ಮೆ ಮೀನಿನ ಊಟ ಮೂಳೆಗಳಿಗೆ ಉತ್ತಮವಾಗಿದೆ.

ದಿನಕ್ಕೆರಡು ಬಾಳೆಹಣ್ಣು ತಿನ್ನುವುದರಿಂದ ಉತ್ತಮ ಪ್ರಮಾಣದ ಪೊಟ್ಯಾಶಿಯಂ ದೇಹಕ್ಕೆ ಲಭ್ಯವಾಗುತ್ತದೆ. ವಿಶೇಷವಾಗಿ ವ್ಯಾಯಾಮದ ಬಳಿಕ ಸೇವಿಸುವ ಆಹಾರದಲ್ಲಿ ಕನಿಷ್ಟ ಒಂದಾದರೂ ಬಾಳೆಹಣ್ಣಿರಲಿ.

ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಆಗಾಗ ಇವನ್ನು ಕೊಂಚವಾಗಿ ಸೇವಿಸುವ ಮೂಲಕ ಮೂಳೆಗಳ ಸಾಂದ್ರತೆ ಹೆಚ್ಚುತ್ತದೆ.

ಮನುಷ್ಯ ಆಯಸ್ಸಿನ ವಿವಿಧ ಹಂತಗಳಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ವಿಭಿನ್ನವಾಗಿರುತ್ತದೆ. ಹದಿಹರೆಯದಲ್ಲಿ ಕ್ಯಾಲ್ಸಿಯಂ ಸೇವನೆ ಪ್ರಮಾಣ ಅಧಿಕವಾಗಿ ದೇಹಕ್ಕೆ ಬೇಕಾಗುತ್ತದೆ. ಹಾಲು, ಮೊಸರು, ಬೆಣ್ಣೆ, ಖನಿಜ ಪದಾರ್ಥಗಳನ್ನು ಸೇವಿಸಿದರೆ ಕ್ಯಾಲ್ಸಿಯಂ ಸೇವನೆ ಪ್ರಮಾಣ ಹೆಚ್ಚಾಗುವುದು.ಎಳ್ಳು ತಿಂದರೆ ಸತು ಮತ್ತು ಕ್ಯಾಲ್ಸಿಯಂ ಅಂಶ ದೇಹಕ್ಕೆ ದೊರೆಯುತ್ತದೆ.

ಮೃದ್ವಂಗಿಗಳು ಸಮುದ್ರಾಹಾರಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಅದರಲ್ಲೂ ಮೃದ್ವಂಗಿಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಮೃದ್ವಂಗಿಗಳಲ್ಲಿ ಸತುವಿನಂಶ ಮಾತ್ರವಲ್ಲ ಇತರ ಖನಿಜಾಂಶಗಳು ಕೂಡ ಇರುವುದರಿಂದ ಇದು ಆರೋಗ್ಯವನ್ನು ವೃದ್ಧಿಸುತ್ತದೆ. ನೆಲಗಡಲೆ ನೆಲೆಗಡಲೆಯಲ್ಲಿ ಆರೋಗ್ಯಕರವಾದ ಕೊಲೆಸ್ಟ್ರಾಲ್ ಮತ್ತು ಸತುವಿನಂಶವಿದೆ. ಆದ್ದರಿಂದ ಸತುವಿನಂಶ ಕಡಿಮೆಯಾದರೆ ಪ್ರತಿನಿತ್ಯ ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಸತುವಿನಂಶ ದೊರೆಯುತ್ತದೆ.

ಅಣಬೆಯಲ್ಲಿ ಸತುವಿನಂಶ ಮಾತ್ರವಲ್ಲದೆ ಕ್ಯಾಲ್ಸಿಯಂ , ವಿಟಮಿನ್ ಬಿ2, antibiotic, ವಿಟಮಿನ್ ಡಿ ಇದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Comments are closed.