ಕರಾವಳಿ

ಹುಸೈನಬ್ಬ ಸಾವು ಪ್ರಕರಣ; ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಬಂಧನ: ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಸರ್ಕಾರ ಇದೆಯೋ‌ ಇಲ್ಲವೋ ಗೊತ್ತಾಗ್ತಾ ಇಲ್ಲ. ಹುಸೆನಬ್ಬ ಸಾವು ಪ್ರಕರಣದಲ್ಲಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿ ಹಾಗೂ ‌ಪೊಲೀಸ್ ಮೇಲೆ ಒತ್ತಡ ಹಾಕಲಾಗಿದೆ. ನಿಮ್ಮ ಪುರುಷಾರ್ಥದಿಂದ ಅಧಿಕಾರ  ಸಿಕ್ಕಿಲ್ ಲ.ಕಾಂಗ್ರೆಸ್ ಮಾಡಿದ ಪಾಪಕೃತ್ಯದಿಂದ ಸಿಕ್ಕಿದ್ದು.ನಮ್ಮ ಕಾರ್ಯಕರ್ತರು ಸತ್ತರೆ ಪರಿಹಾರ‌ ಕೊಡೊ ಬಗ್ಗೆ ಆಲೋಚನೆ ಮಾಡಲ್ಲ.ಅದ್ರೆ ಕಬೀರನಿಗೆ ಕೊಡ್ತೀರಾ. ನೀವು ವಿರೋಧ ಪಕ್ಷದಲ್ಲಿ‌ ಕೂರಬೇಕಿತ್ತು ಅದ್ರೂ ಹಿಂಬಾಗಿಲಿನಿಂದ ಅಧಿಕಾರ ಪಡಿದಿದ್ದೀರಿ. ಕರಾವಳಿ ಜಿಲ್ಲೆಯಲ್ಲಿ  ಕಾಂಗ್ರೆಸ್ ಹಿಂದೂ ದಮನ ನೀತಿ ಮಾಡಿದ್ರಿ. ಅದಕ್ಕೆ ಜನ ನಿಮಗೆ ಉತ್ತರ ಕೊಟ್ಟಿದ್ದಾರೆ ಎಂದು ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂದಿಸಿದಂತೆ ಬಿಜೆಪಿ ಹಾಗೂ  ಹಿಂದೂ ಸಂಘಟನೆಗಳಿಂದ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಪೆರ್ಡೂರಿನ ಘಟನೆಗೂ ಹಿಂದೂ ಕಾರ್ಯಕರ್ತರಿಗೂ ಏನೂ ಸಂಭಂಧಿವಿಲ್ಲ. ಕಾನೂನಿನಂತೆ ಕೆಲಸ ಮಾಡಿದ್ದೇವೆ. ಪೊಲೀಸರ ಒತ್ತಡದ ಮೂಲಕ‌ ಕೆಲಸ ಮಾಡೊ ಪರಿಸ್ಥಿತಿ ನಡೀತಾ ಇದೆ.ಅಲ್ಪ ಸಂಖ್ಯಾತರ ವೋಟಿನ‌ ಮೆಲೆ ಕಣ್ಣಿರುವಂತದ್ದು. ಇವತ್ತು ಪೂಜೆ ಪುನಸ್ಕಾರ ಮಾಡೊ‌ ಮುಖ್ಯಮಂತ್ರಿಗಳೆ ಗೋ‌ಹತ್ಯೆ ಕಾನೂನು‌ ಜಾರಿಗೆ ತರಲು ಅಗ್ರಹ ಮಾಡಿ. ಕೇಸರಿ ಶಾಲು ಹಾಕಿದ್ರೆ ನಮ್ ಮೆಲೆ ದೌರ್ಜನ್ಯ ನಡೆಸ್ತೀರಾ..ನಮ್ಮ ಮೈಯಲ್ಲೆ‌ ಕೇಸರಿ ನಮ್ಮನ್ನ ಸುಟ್ಟು ಹಾಕ್ತೀರಾ..ಎಂದು ಸರ್ಕಾರಕ್ಕೆ ಕರಂದ್ಲಾಜೆ ಪ್ರಶ್ನಿಸಿದರು.

ದನಗಳ್ಳತನ ತಡೆಯಲು ಹೋದ ಪೊಲೀಸರ ರಕ್ಷಣೆ ಮಾಡಬೇಕು. ಹುಸೆನಬ್ಬನಿಗೆ ಹೃದಯ ಸಂಭಂಧಿ‌ ಕಾಯಿಲೆ ಇದ್ದು ಅದರಿಂದಲೇ ಸಾವು ಸಂಭವಿಸಿರಬಹುದು. ಮರಣೊತ್ತರ ಪರೀಕ್ಷೆ ಇನ್ನು ಬಂದಿಲ್ಲ.ಅದಕ್ಕೂ ಮೊದಲೆ ಕೊಲೆ ಪ್ರಕರಣ ದಾಖಲಿಸಿದ್ದು ಹೇಗೆಂದು ಪ್ರಶ್ನಿಸಿದ‌ ಅವರು ಮೊದಲು ಹಿಂದೂ ಕಾರ್ಯಕರ್ತರನ್ನು ಬಂಧನ ನಿಲ್ಲಿಸಿ. ಇದು ಹೋರಾಟದ ಪ್ರಾರಂಭ‌ ಮಾತ್ರ ಎಂದು ಕಿಡಿ ಕಾರಿದರು.

ಅಸಹಜ ಸಾವು ಅಂತಾ ದಾಖಲಾಗಿದೆ. ಯಾವ ಕಾರಣಕ್ಕೆ  ನಮ್ಮ ಕಾರ್ಯಕರ್ತರನ್ನ  ಬೇರೆ ಬೇರೆ ಸೆಕ್ಷನ್ ಅಡಿಯಲ್ಲಿ ಕಾರ್ಯಕರ್ತರನ್ನ ಬಂಧಿಸುತ್ತಿದ್ದಾರೆ ಅನ್ನೊದು ಗೊತ್ತಗುತ್ತಿಲ್ಲ. ರಾಜ್ಯ ಸರ್ಕಾರ ಹಿಂದುಗಳನ್ನ ಟಾರ್ಗೆಟ್ ಮಾಡಿ ಬಂಧನ ಮಾಡಿಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ‌ ಹುಸೆನಬ್ಬ ಸಾವನ್ನಾಪ್ಪಿರುವುದರಿಂದ ಸಹಜವಾಗಿ ಸಿಐಡಿ ತನಿಖೆಗೆ ಹೋಗುತ್ತೆ. ಆದ್ರೆ ಸಿಐಡಿ ಯಿಂದ ನ್ಯಾಯ ಸಿಗುತ್ತೆ ಅನ್ನೊ ವಿಶ್ವಾಸ ಇಲ್ಲ. ಅದ್ರು ನಾವು ಪೊರೆನ್ಸಿಕ್ ರಿಪೊರ್ಟ್ ಬರೋ ತನಕ ಕಾಯ್ತೀವಿ. ಹೃದಯಘಾತದಿಂದ ಹುಸೆನಬ್ಬ ಸತ್ತಿದ್ರೆ ಯಾರು ಅಪರಾಧಿ ಅಗುವುದಕ್ಕೆ ಸಾಧ್ಯವಿಲ್ಲ. ಪೊಲೀಸರು ಮತ್ತು ನಮ್ಮ ಕಾರ್ಯಕರ್ತರು ಕಾನೂನಿನಂತೆ‌ ಕೆಲಸ ಮಾಡಿದ್ದು ದನಗಳ್ಳರನ್ನು ಹಿಡಿಯುವ ಕೆಲಸ ಮಾಡಿದ್ದಾರೆಂದು ರಾಜ್ಯ ಸರ್ಕಾರದ ವಿರುದ್ದ ಸಂಸದೆ ಶೋಭಾ ವಾಗ್ದಾಳಿ ನಡೆಸಿದರು.

ಕಳೆದ 20 ದಿನದಲ್ಲಿ ಮಂತ್ರಿ ಮಂಡಲ ಮಾಡುವುದರಲ್ಲೆ ಮುಖ್ಯ ಮಂತ್ರಿ, ಉಪ‌ಮುಖ್ಯ ಮಂತ್ರಿ ಕಾಲ‌ ಕಳೆಯುತ್ತಿದ್ದಾರೆ. ಇನ್ನೂ ಗೊಂದಲ ಬಗೆ ಹರಿದಿಲ್ಲ,ಇನ್ನೂ ಅಸಮಾಧಾನ ತಾಂಡವವಾಡುತ್ತಿದೆ. ಈ ಸರ್ಕಾರ ಬಹಳ‌ ನಡೆಯುತ್ತೆ,ರಾಜ್ಯದ ಜನರ ಸೇವೆ ಮಡುತ್ತೆ ,ನಮ್ಮ ಕಣ್ಣೀರನ್ನ ಒರೆಸುತ್ತೆ ಅನ್ನೋ ವಿಶ್ವಾಸ ‌ನಮಗಿಲ್ಲ. ಮಂತ್ರಿ ಯಾರು ಅಗಬೇಕು, ಯಾವ ಖಾತೆ ಯಾರಿಗೂ ಹೋಗಬೇಕು ಅನ್ನುವಂತಹ ಗೊಂದಲ‌ ಹೊರತು,ರಾಜ್ಯದಲ್ಲಿ‌ ಜನರ  ಕಣ್ಣಿರು ಒರೆಸುವಂತಹ, ರೈತರ ನೆರವಿಗೆ ಧಾವಿಸುವ ಕೆಲಸ‌ ಮಾಡುವುಂತದ್ದು ಈ ಸರ್ಕಾರದಿಂದ ಸಾಧ್ಯವಿಲ್ಲ. ಅದಷ್ಟು‌ ಬೇಗನೇ ಈ  ಸರ್ಕಾರ ಬಿದ್ದು ಹೋಗುತ್ತೆ ಅನ್ನೊದನ್ನ‌ ಜನ‌ ಮಾತಡುವ ಸ್ಥಿತಿ ಇವರ ನಡವಳಿಕೆ‌ ತೋರಿಸುತ್ತೆ.

ಸರ್ಕಾರ ಒಂದು‌ ಕೋಮಿನ ಜನರ ಓಲೈಕೆ  ಮಾಡುತ್ತಿದೆ. ದನಗಳ್ಳರು ಸತ್ರೆ ಪರಿಹಾರ ನೀಡುತ್ತಾರೆ.ಮಾಡಿದ ಪಾಪದ ಕರ್ಮಕ್ಕೆ ಕಾಂಗ್ರೇಸ್  ಅಧಿಕಾರ ಕಳೆದುಕೊಂಡಿದೆ. ಈಗ ಹಿಂಬಾಗಿಲಿಂದ ಬಂದು ಸರ್ಕಾರ ಮಾಡ್ತಿದೆ. ಪೆರ್ಡೂರು ಘಟನೆಗೂ ಸಂಘಪರಿವಾರಕ್ಕೆ ಯಾವ ಸಂಬಂಧ ಇಲ್ಲ. ಹೃದಯಾಘಾತದಿಂದ ಸತ್ರೆ ಭಜರಂಗಳ ಹೊಣೆಯಾ? ಪೊಲಿಸ್ ಅಧಿಕಾರಿಗಳ  ಸರ್ಕಾರ  ಒತ್ತಡ ಹೇರ್ತಿದೆ. ದ.ಕ, ಉಡುಪಿ ಸೂಕ್ಷ್ಮ ಜಿಲ್ಲೆಗಳು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ್ರೆ ಸಮಸ್ಯೆ ಆಗ್ತಿರಲಿಲ್ಲ. ನಿಮಗೆ ಕಾಯ್ದೆ ತರುವ ತಾಕತ್ತಿಲ್ಲ. ಗೋ ಹತ್ಯೆ ಆಗ್ಬೆಕು ಅಂತ ಮುಸಲ್ಮಾನರೂ ಹೇಳಲ್ಲ. ಕೆಲ ಕೋಮುವಾದಿಗಳು ಹೇಳ್ತಾರೆ ಅಷ್ಟೇ.ಕಾಯ್ದೆ ಜಾರಿಗೆ ತನ್ನಿ ಸಮಸ್ಯೆ ಬಗೆಹರಿಯುತ್ತೆ ಎಂದರು.

ಪೊಲೀಸರೇ ಕೋಮುಭಾವನೆ ಬಿಡಿ, ಕಾನೂನು ಬದ್ದ ಕೆಲಸ ಮಾಡಿ. ಸರ್ಕಾರ ಬರುತ್ತೆ ಹೋಗುತ್ತೆ, ಬಿಜೆಪಿ ಸರ್ಕಾರ ಬಂದೇ ಬರುತ್ತೆ. ದನಗಳ್ಳತನ ತಡೆದ ಪೊಲೀಸರನ್ನು ರಕ್ಷಿಸಿ ಅವರನ್ನು ಶಿಕ್ಷಿಸೋದಲ್ಲ. ಭಜರಂಗದಳದ ಕಾರ್ಯಕರ್ತರ ಬಂಧನ ನಿಲ್ಲಿಸಿ. ಪೊಲೀಸರು ಕರೆದದ್ದಕ್ಕೆ ಭಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ರು. ದನಗಳ್ಳರನ್ನು ತಡೆಯಿರಿ ಹಾಗೂ ಹಿಡಿಯಿರಿ‌.ನಾವು ಪೊಲೀಸರ ಜೊತೆ ಇದ್ದೇವೆ. ಶವ ಪರೀಕ್ಷಾ ವರದಿ ಬೇಗ ಬರಲಿ, ಆದರೆ ವರದಿ ಪ್ರಾಮಾಣಿಕವಾಗಿರಲಿ ಎಂದು ಅವರು ಹೇಳಿದರು.

ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೂಪರ ಸಂಘಟನೆಗಳ ಅಮಾಯಕರನ್ನು ಬಂಧಿಸಲಾಗುತ್ತಿದೆ.ಅಕ್ರಮ ಗೋ ಸಾಗಾಟಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ವಿಫಲ.ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರ ಆಕ್ರೋಶ‌.ಪ್ರತಿಭಟನೆಯಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಭಾಗಿಯಾಗಿದ್ದು ಪ್ರತಿಭಟನಾ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.