ಕರಾವಳಿ

ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್

Pinterest LinkedIn Tumblr

ಮಂಗಳೂರು, ಮಾರ್ಚ್. 30: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿ, ಶ್ರೀ ಕ್ಷೇತ್ರ ಕದ್ರಿಗೆ ಭೇಟಿ ನೀಡಿದರು.

ಮೂಡುಬಿದಿರೆಯ ವಿದ್ಯಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು,ಬಳಿಕ ಮಂಗಳೂರಿಗೆ ಆಗಮಿಸಿ ನಗರದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭ ಆಡಳಿತ ಮಂಡಳಿಯ ಪ್ರಮುಖರು ಮತ್ತು ಸದಸ್ಯರು ಸೋನು ನಿಗಮ್ ಅವರನ್ನು ಸ್ವಾಗತಿಸಿದರು. ಇದೇ ವೇಳೆ ನೂರಾರು ಅಭಿಮಾನಿಗಳು ಸೋನು ನಿಗಮ್ ಅವರನ್ನು ನೋಡಲು ಅಲ್ಲಿ ಮುಗಿಬಿದ್ದರು.

Comments are closed.