ಉಡುಪಿ: ಜಿಲ್ಲೆಯ ಕಾಪು ತಾಲೂಕು ಪುರಸಭಾ ಕಾಮಗಾರಿ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ದಾಸಪ್ಪ, ಉಮೇಶ ಚಿತ್ರದುರ್ಗ ಮೂಲದ ಕಾರ್ಮಿಕರು ದುರ್ದೈವಿಗಳು.
ನೂತನ ಒಳಚರಂಡಿ ನಿರ್ಮಾಣ ಕ್ಕೆ ತೋಡಿದ್ದ ಹೊಂಡವಾದ್ದರಿಂದ ಮತ್ತು ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲವಾದ್ದರಿಂದ ಘನವಾಹನ ಸಂಚಾರದ ವೇಳೆ ಮಣ್ಣು ಕುಸಿದು ಈ ಘಟನೆ ಸಂಭವಿಸಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.