ಮಂಗಳೂರು, ಫೆಬ್ರವರಿ.25 : ಯೋಗಕ್ಕೆ ಇಂದು ಭಾರತವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ವಿಶೇಷ ಗೌರವ ಲಭಿಸಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್‌ಕಟೀಲ್ ಹೇಳಿದ್ದಾರೆ.
ಅವರು ಮಂಗಳೂರಿನಲ್ಲಿ ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನ (ರಿ) ಇದರ ಅಶ್ರಯ ದಲ್ಲಿ ಬಾನುವಾರ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಫದೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದೇಶದಲ್ಲೂ ಅತೀ ಹೆಚ್ಚು ಜನರು ತಮ್ಮ ದೈನಂದಿನ ಚಟುವಟಿಕೆಯಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡತ್ತಿರುವುದು ವಿಶೇಷ ವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗ ಪರಂಪರೆಯನ್ನು ವಿಶ್ವಯೋಗ ದಿನಾಚರಣೆ ಆಚರಿಸುವ ಮುಖೇನವಾಗಿ ಜಗತ್ತಿಲ್ಲಿಯೇ ಯೋಗಕ್ಕೆವಿಶ್ವಮಾನ್ಯತೆ ಸಿಗುವಲ್ಲಿ ಕಾರಣೀಭೂತರಾಗಿದ್ದಾರೆ. ಬಾಬಾ ರಾಮ್‌ದೇವ್‌ರವರ ಪತಂಜಲಿ ಯೋಗ ಶಿಕ್ಷಣದ ಮುಖಾಂತರ ಯೋಗ ಜನಜನಿತವಾಗಿದೆ ಎಂದರು.
ಮುಖ್ಯಅತಿಥಿಯಾಗಿ ಗೊಪಾಲಕೃಷ್ಣ ದೇಲಂಪಾಡಿ, ಹಿರಿಯ ಯೋಗ ಸಾಧಕರು, ಸಮಾರಂಭದ ಅಧ್ಯಕ್ಷತೆಯನ್ನು, ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಏಕನಾಥ ಬಾಳಿಗ ವಹಿಸಿದರು. ಸಮಾರಂಭದಲ್ಲಿ ಎಂ.ಎಸ್.ಗುರುರಾಜ್, ಮೋನಪ್ಪ ಶೆಟ್ಟಿ, ಧನಂಜಯ ಕೆ, ಚಂದ್ರಶೇಖರ ಶೆಟ್ಟಿ, ಭಾರತಿ ಶೆಟ್ಟಿ, ಶೇಖರ್ ಕಡ್ತಲ ಉಪಸ್ಥಿತಿಯಿದ್ದರು.
ಕಾರ್ಯದಶಿ ದಿವಾಕರ ಸಾಮಾನಿ ಸ್ವಾಗತಿಸಿ, ಯೋಗೀಶ್ ಶೆಟ್ಟಿ ಕಾವೂರು ವಂದಿಸಿದರು. ಶ್ರೀಮತಿ ವಿನಯ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 185 ಕ್ಕೂ ಹೆಚ್ಚು ಸ್ಫರ್ಧಾಳುಗಳು ಭಾಗವಹಹಿಸಿದರು.