
ಮಂಗಳೂರು, ಫೆಬ್ರವರಿ, 16 : ಜೆ.ವಿ ಪ್ರೊಡಕ್ಷನ್ ಲಾಂಛನದಲ್ಲಿ ವಿ. ಹೃದಯ್ ಅರ್ಪಿಸುವ ಜೆ.ವಿ ಮನೋರಂಜನ್ ನಿರ್ದೇಶನದಲ್ಲಿ ವಿನಯ್ ಕುಮಾರ್ ಜೆವಿ ಮತ್ತು ಸುದರ್ಶನ್ ಜೆ.ವಿ ನಿರ್ಮಾಣದಲ್ಲಿ ತಯಾರಾದ ತುಳುವಿನ 87ನೇ ಸಿನಿಮಾ ಬಲೇ ಪುದರ್ ದೀಕ ಈ ಪ್ರೀತಿಗ್ ಮಂಗಳೂರಿನ ಜ್ಯೋತಿ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ.
ಎಸ್‌ಡಿಎಂ ಕಾಲೇಜ್‌ನ ನಿರ್ದೇಶಕ ಡಾ. ದೇವರಾಜ್ ಅವರು ದೀಪ ಬೆಳಗಿಸುವ ಮೂಲಕ ಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳುವಿನಲ್ಲಿ ಪ್ರೇಕ್ಷಕರು ಬಯಸುವ ಹಾಸ್ಯ ಸಿನಿಮಾಗಳ ಜತೆಗೆ ಸಮಾಜಕ್ಕೆ ಸಂದೇಶ ನೀಡುವಂತಹ ಸದಭಿರುಚಿಯ ಸಿನಿಮಾಗಳು ಬರಲಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕರಾದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಸೂರಜ್ ಶೆಟ್ಟಿ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಚಿತ್ರದ ನಾಯಕಿ ನಟಿ ಅನ್ವಿತಾ ಸಾಗರ್, ಖ್ಯಾತ ನಟರಾದ ಭೋಜರಾಜ್ ವಾಮಂಜೂರು, ಪ್ರಕಾಶ್ ಶೆಟ್ಟಿ ಸುರತ್ಕಲ್, ಪ್ರೇಮ್ ಶೆಟ್ಟಿ ಸುರತ್ಕಲ್, ಪ್ರಮುಖರಾದ ಮನೋರಂಜನ್, ಸುದರ್ಶನ್, ವಿನಯ ಕುಮಾರ್, ಪ್ರಜ್ವಲ್, ಯೋಗೀಶ್ ಶೆಟ್ಟಿ ಜಪ್ಪು, ಸೂರಜ್ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಬಲೇ ಪುದರ್ ದೀಕ ಈ ಪ್ರೀತಿಗ್ ಸಿನಿಮಾವು ಮಂಗಳೂರಿನಲ್ಲಿ ಜ್ಯೋತಿ, ಬಿಗ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ತೆರೆಕಂಡಿದೆ.
Comments are closed.