ಮೆಡಿಕಲ್ ಮತ್ತು ಡೆಂಟಲ್ ಕೋರ್ಸ್ಗಳಿಗೆ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೇ ‘ ನೀಟ್ಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಕ್ಸಾಮ್ 24×7.ಕಾಮ್ ನೂತನ ಕೋಚಿಂಗ್ ವಿಧಾನವನ್ನು ಆರಂಭಿಸಿದೆ.
ವಿಶ್ವದ ಅತ್ಯಂತ ಜನಪ್ರೀಯ ಮಾಧ್ಯಮವಾದ ವಾಟ್ಸ್ಆಪ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಆರಂಭಿಸಿದೆ. ತಮ್ಮ ಹೆಸರನ್ನು ನೋಂದಾಯಿಸಿರುವ ವಿದ್ಯಾರ್ಥಿಗಳಿಗೆ ಪ್ರತೀ ವಾರ ನೀಟ್ನ 30 ಪ್ರಶ್ನೆಗಳನ್ನು ಕಳುಹಿಸಲಾಗುವುದು.
ಮೂರು ದಿನಗಳ ಬಳಿಕ ಆ ಪ್ರಶ್ನೆಗಳಿಗೆ ಉತ್ತರವನ್ನು ಕಳುಹಿಸಲಾಗುವುದು. ಜೊತೆಗೆ ನೀಟ್ಗಾಗಿಯೇ ತಯಾರಿಸಿರುವ ವಿಡಿಯೋ ಗಳನ್ನು ಕಳುಹಿಸಲಾಗುವುದು. ಈ ಕೋಚಿಂಗ್ ಎಪ್ರಿಲ್ ಕೊನೆಯವರೆಗೆ ಮುಂದುವರೆಯಲಿದೆ. ಮೇ 1ರಂದು ನೀಟ್ನ 3 ಮೋಡೆಲ್ ಪೇಪರ್ಗಳನ್ನು ಸರಿಯುತ್ತರದೊಂದಿಗೆ ಕಳುಹಿಸಲಾಗುವುದು.
ಇದಲ್ಲದೇ 10ನೇ ತರಗತಿಯ ಮೋಡೆಲ್ ಪ್ರಶ್ನೆಪತ್ರಿಕೆಗಳು ಹಾಗೂ ಪಿಯುಸಿಯ ಮೋಡೆಲ್ ಪ್ರಶ್ನೆ ಪತ್ರಿಕೆಗಳು ಸರಿಯುತ್ತರದೊಂದಿಗೆ ಆಸಕ್ತರಿಗೆ ಕಳುಹಿಸಲಾಗುವುದು. ಈ ಎಲ್ಲಾ ಪ್ರಶ್ನೆಪತ್ರಿಕೆಗಳು ಎಕ್ಸಾಮ್24×7.ಕಾಮ್ನಲ್ಲಿ ಉಚಿತವಾಗಿ ಲಭ್ಯವಿದೆ.
ಪುಸ್ತಕ ತಮ್ಮ ಹೆಸರು, ಕಾಲೇಜು ಹೆಸರು ಹಾಗೂ ತಮ್ಮ ವಿಳಾಸವನ್ನು 9663366772ಗೆ ವಾಟ್ಸ್ಆಪ್ ಮಾಡುವ ಮೂಲಕ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಎಕ್ಸಾಮ್24×7.ಕಾಮ್ ಕಛೇರಿಯನ್ನು / 7760077722 ನಲ್ಲಿ ಸಂಪರ್ಕಿಸಲು ಕೋರಲಾಗಿದೆ.