ರಾಷ್ಟ್ರೀಯ

ಲಂಚಾವತಾರ! ಜಿಎಸ್ ಟಿ ಕಮಿಷನರ್ ಸೇರಿ 9 ಮಂದಿ ಸಿಬಿಐ ಬಲೆಗೆ

Pinterest LinkedIn Tumblr


ನವದೆಹಲಿ: ಕೇಂದ್ರ ಸರಕಾರ ನೂತನವಾಗಿ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತಂದಿದ್ದು, ಬೆಳವಣಿಗೆಯೊಂದರಲ್ಲಿ ಸಿಬಿಐ ಶನಿವಾರ ಜಿಎಸ್ ಟಿ ಕಮಿಷನರ್(ಕಾನ್ಪುರ್), ಮೂವರು ಸೂಪರಿಟೆಂಡೆಂಟ್(ಕಾನ್ಪುರ್) ಸೇರಿದಂತೆ ಒಟ್ಟು ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿದೆ.

ಸಿಬಿಐ ಮೂಲಗಳ ಪ್ರಕಾರ, ಈ ಜಿಎಎಸ್ ಟಿ ಅಧಿಕಾರಿಗಳು ಕಂಪನಿಗಳಿಂದ ಲಂಚವನ್ನು ಪಡೆದಿರುವುದಾಗಿ ತಿಳಿಸಿದೆ. ಇಲಾಖೆಗೆ ತುಂಬದ ಹಣದ ರಕ್ಷಣೆಗಾಗಿ ಈ ಜಿಎಸ್ ಟಿ ಅಧಿಕಾರಿಗಳು ಲಂಚ ಪಡೆದಿದ್ದರು.

ಈ ಹಣವನ್ನು ಅಧಿಕಾರಿಗಳಿಗೆ ವ್ಯವಸ್ಥಿತವಾಗಿ ಹವಾಲಾದ ಮೂಲಕ (ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕ) ವರ್ಗಾಯಿಸಲಾಗಿದೆ ಎಂದು ವರದಿ ವಿವರಿಸಿದೆ.

ಸಿಬಿಐ ದಾಖಲಿಸಿರುವ ಎಫ್ಐಆರ್ ಪ್ರತಿ ತನಗೆ ಲಭ್ಯವಾಗಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದ್ದು, ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಮಂದಿ ಅಧಿಕಾರಿಗಳು ಅಕ್ರಮ ಗಳಿಕೆ ಸಂಪಾದಿಸಿರುವುದಾಗಿ ಕಾನ್ಪುರದಲ್ಲಿ ಹಾಲಿ ಜಿಎಸ್ ಟಿ ಕಮಿಷನರ್ ಆಗಿರುವ ಸನ್ಸಾರ್ ಚಾಂದ್ ತಿಳಿಸಿದ್ದಾರೆ.

ಶಿಶು ಸೋಪ್ ಅಂಡ್ ಕೆಮಿಕಲ್ಸ್ ಪ್ರೈ ಲಿ., ಎಸ್ ಐಆರ್ ಪಾನ್ ಮಸಾಲಾ ಮತ್ತು ರಿಮ್ಜಿಹಿಮ್ ಇಸ್ಪಾಟ್ ಲಿಮಿಟೆಡ್ ಕಂಪನಿಗಳಿಂದ ಅಧಿಕಾರಿಗಳು ಲಂಚ ಪಡೆದಿರುವುದಾಗಿ ತನಿಖಾಧಿಕಾರಿಗಳು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

-ಉದಯವಾಣಿ

Comments are closed.