ಕರಾವಳಿ

ಗಾಣಿಗ ಸಂಗಮ – 2018 : ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

Pinterest LinkedIn Tumblr

ಮಂಗಳೂರು : ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್‌ಬುಕ್ ಗ್ರೂಪ್ ತಂಡದ ವತಿಯಿಂದ ನಗರದ ಪುರಭವನದ ದಿ. ನಾಗೇಶ್ ಗಾಣಿಗ ವೇದಿಕೆಯಲ್ಲಿ 3ನೇ ವರ್ಷದ ಗಾಣಿಗ ಸಂಗಮ 2018 ಇತ್ತೀಚಿಗೆ ನಡೆಯಿತು.

ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಓಬಿಸಿ ಮೋರ್ಚಾ ಇದರ ಉಪಾಧ್ಯಕ್ಷರು ಜನಾರ್ಧನ ಆರ್ಕುಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲೋಕಸಭಾ ಸದಸ್ಯರು ದಕ್ಷಿಣ ಕನ್ನಡ ಶ್ರೀ ನಳಿನ್ ಕುಮಾರ್ ಕಟೀಲ್, ಕೃಷ್ಣ ಜೆ.ಪಾಲೆಮಾರ್, ವಿಶ್ವನಾಥ್ ಎಸ್.ಎ, ಡಾ| ಭರತ್ ಶೆಟ್ಟಿ, ಶ್ರೀ ರಾಘವೇಂದ್ರ ಕೆ.ವಿ, ಯತೀಶ್ ಬೈಕಂಪಾಡಿ, ಪ್ರವೀಣ್ ಕುತ್ತಾರ್, ಸಂತೋಷ್ ಕುಮಾರ್ ತುಪ್ಪೆಕಲ್ಲು, ದುರ್ಗಾಪ್ರಸಾದ್ ಎಮ್.ಆರ್, ನಾಗೇಶ್ ಕಲ್ಲಡ್ಕ, ಶ್ರೀಮತಿ ಸೌಮ್ಯ ಜೆ, ಶ್ರೀ ಮದನ್ ಮತ್ತಿತರು ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಕರ್ನಾಟಕದ ವೇಗದ ಮಹಿಳಾ ಚಿತ್ರಗಾರ್ತಿ ಕುಮಾರಿ ಶಬರಿ ವೈ ಗಾಣಿಗ, ಅಂತರಾಷ್ಟ್ರೀಯ ಪವರ್ ಲಿಪ್ಟಿಂಗ್ ಕ್ರೀಡಾಪಟು ವಿಶ್ವನಾಥ ಬಿ. ಗಾಣಿಗ, ಕಿರುತೆರೆ ಹಾಗೂ ಕನ್ನಡ ಚಲನಚಿತ್ರ ನಟಿ ಪ್ರಣತಿ ಆರ್ ಗಾಣಿಗ, ಅತೀ ಕಿರಿಯ ಮಹಿಳಾ ಸ್ಯಾಕ್ಸ್‌ಪೋನ್ ವಾದಕಿ ಶಾಲ್ಮಿಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ತಾಲೂಕು ಸಂಘದ ಅಧ್ಯಕ್ಷರಾದಂತಹ ನಾರಾಯಣ ಸಫಲ್ಯ, ಗಾಣಿಗ ಸಮಾಜದ ಹಿರಿಯ ವ್ಯಕ್ತಿಗಾಳಾದ ಬಿ.ಎಮ್. ಕಮಾಲಾಕ್ಷ, ರಾಜೀವ ಮೆಂಡನ್ ಹಾಗೂ ಬಾಲ ಕಲಾವಿದೆ ಚಿತ್ರಾಲಿ ತೇಜ್‌ಪಾಲ್ ಮುತಾಂದವರನ್ನು ಸನ್ಮಾನಿಸಲಾಯಿತು.

ಗಾಣಿಗ ಸಂಗಮ -2018 ನೃತ್ಯ ಸ್ಪರ್ದೆಯಲ್ಲಿ ಸಭ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಆಧ್ಯ ಅಶ್ವಿನ್ ಮತ್ತು ಪ್ರಶಂ ಎಚ್.ಎಸ್, ದ್ವೀತಿಯ ಪ್ರಧಾನ್ ಪುತ್ತೂರ್, ಜೂನಿಯರ್ ವಿಭಾಗದಲ್ಲಿ ಪ್ರಥಮ ಆತ್ಮೀ ಕರ್ಕೇರ, ದ್ವೀತಿಯ ಬೇವಿಕ ಮತ್ತು ಸೀನಿಯರ್ ವಿಭಾಗದಲ್ಲಿ ಪ್ರಧಮ ಐಶ್ವರ್ಯ ಸುವರ್ಣ, ದ್ವೀತಿಯ ಮಾಯಾಕ್ಷಿ ಹಾಗೂ ಸಮೂಹ ನೃತ್ಯ ಸ್ಪರ್ದೆಯಲ್ಲಿ ಪ್ರಥಮ ಆರಾಧ್ಯ ಡಾನ್ಸ್ ಕ್ರೂವ್, ದ್ವೀತಿಯ ಡಾನ್ಸ್ಂಗ್ ಸ್ಟಾರ್ ಎಡಪದವು , ತೃತೀಯ ಎಫ್.ಡಿ. ಕ್ರೂವ್ ಪ್ರಶಸ್ತಿ ಪಡೆದರು.

ಇದೇ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಸಹಾಯಸ್ಥವನ್ನು ಕೂಡ ನೀಡಲಾಯಿತು. ಜಗದೀಶ್ ಗಾಣಿಗ ಸ್ವಾಗತಿಸಿದರು. ಅನುರಾಗ್ ಆರ್ ಬಂಗೇರ ಹಾಗೂ ಜೀತೇಶ್ ಉಳಿಯ ಕಾರ್ಯಕ್ರಮ ನಿರೂಪಿಸಿದ್ದರು.

Comments are closed.