
ಉಡುಪಿ: ಅದಾನಿ ಮಾಲಿಕತ್ವದ ಉಡುಪಿ ಪವರ್ ಕಾರ್ಪೊರೆಶನ್ ಉಷ್ಣ ವಿದ್ಯುತ್ ಸ್ಥಾವರದ ಉತ್ಪಾದನೆ ಸ್ಥಗಿತಗೊಂಡಿದೆ ಎನ್ನಲಾಗಿದೆ. ಕಳೆದ ಎಂಟು ದಿನಗಳಿಂದ ಎರಡು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿದ್ದು ಸರಕಾರದಿಂದ ಹಣ ಪಾವತಿಯಾಗದ ಹಿನ್ನಲೆ ಈ ಸ್ಥಗಿತಗೊಂಡಿದೆ.
ಸರಕಾರವು ಸುಮಾರು ೭೦೦ ಕೋಟಿ ಹಣ ಬಾಕಿ ಇರಿಸಿರುವ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿಯಿದ್ದು ಗುಲ್ಬಾರ್ಗದ ಜೆಸ್ಕಾಂ,ಹುಬ್ಬಳ್ಳಿ ಹೆಸ್ಕಾಂ,ಮೈಸೂರಿನ ಚೆಸ್ಕಾಂ ನಿಂದ ಹಣ ಬಾಕಿಯಿದೆ ಎನ್ನಲಾಗಿದೆ. ಹಣ ಬಾಕಿಯಿರುವ ಕಾರಣದಿಂದ ಕಲ್ಲಿದ್ದಲು ಖರೀದಿಸಲು ಹಿನ್ನಡೆ. ಕಲ್ಲಿದ್ದಲು ಇಲ್ಲದಿರುವುದರಿಂದ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ. ಕೆ ಪಿ ಟಿ ಸಿ ಎಲ್ ಗೆ ಅದಾನಿ ಸಂಸ್ಥೆಯಿಂದ ಬಾಕಿ ಪವಾತಿಸುವಂತೆ ಪತ್ರ ಬರೆದಿದ್ದರೂ ಕೂಡ ಸ್ಪಂದನೆ ಇಲ್ಲ ಎನ್ನಲಾಗಿದೆ.
೧೪ ನೇ ತಾರೀಖಿನಂದು ೧ ನೇ ಘಟಕ ಸ್ಥಗಿತ, ೧೭ ನೇ ತಾರೀಖಿಗೆ ಎರಡನೇ ಘಟಕವು ಸ್ಥಗಿತಗೊಂಡಿದೆ.
Comments are closed.