ಕರಾವಳಿ

ಇಲ್ಯಾಸ್ ಕೊಂದವರ ಲೆಕ್ಕ ಚುಕ್ತಾ ಮಾಡ್ತೇವೆ” : ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್

Pinterest LinkedIn Tumblr

ಮಂಗಳೂರು, ಜನವರಿ.15: ಕೆಲದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಇಲ್ಯಾಸ್‌ನ ಹಂತಕರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಲ್ಯಾಸ್ ಕೊಂದವರ ಲೆಕ್ಕ ಚುಕ್ತಾ ಮಾಡ್ತೇವೆ” ಪ್ರತೀಕಾರ ತೀರಿಸಿಯೇ ತೀರುತ್ತೇವೆ ಎಂದು ಅಕ್ರೋಶ ವ್ಯಕ್ತಪಡಿಸಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನಗರದಲ್ಲಿ ಮತ್ತೊಂದು ಗ್ಯಾಂಗ್‌ವಾರ್ ನಡೆಯುವ ಸೂಚನೆಯನ್ನು ನೀಡಿದೆ.

ಅದರಲ್ಲಿ ಇದು ಇಲ್ಯಾಸ್ ಹುಡುಗರ ಮಾತು. ಎಂಬ ಉಲ್ಲೇಖವಿದೆ. “ಮಲಗಿದ್ದವರ ಮೇಲೆ ದಾಳಿ ನಡೆಸಲು ನಾಚಿಕೆಯಾಗುವುದಿಲ್ಲವೇ” ಎಂದು ಪ್ರಶ್ನಿಸಲಾಗಿದೆ. “ದೇವರ ದಯೆಯಿಂದ ನಾಯಿ ಸತ್ತ ರೀತಿಯಲ್ಲಿ ನಿಮ್ಮನ್ನೂ ಸಾಯಿಸುತ್ತೇವೆ. ನಮಗೆ ಸಮಯವಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ” ಎಂಬ ಎಚ್ಚರಿಕೆ ಸಂದೇಶವಿದೆ.

ಸಬ್‌ಜೈಲಿನಲ್ಲಿ ಇಲ್ಯಾಸ್ ಬಂಟನೋರ್ವ ಆಡಿಯೋ ಕ್ಲಿಪ್ ರವಾನಿಸಿದ್ದಾನೆ ಎನ್ನಲಾಗುತ್ತಿದ್ದು ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೌಡಿಗಳ ಚಲನವಲಗಳ ಮೇಲೆ ನಿಗಾ ಇರಿಸಿದೆ ಎಂದು ತಿಳಿದುಬಂದಿದೆ.

ಕಳೆದ ಆರು ತಿಂಗಳುಗಳಿಂದ ಜಿಲ್ಲೆಯಲ್ಲಿ ರೌಡಿಗಳ ಮಧ್ಯೆ ಬೀದಿಕಾಳಗ, ಗ್ಯಾಂಗ್‌ವಾರ್ ಮಾಮೂಲಾಗಿದ್ದು ಈಗಾಗಲೇ ೬ಕ್ಕೂ ಹೆಚ್ಚು ಕುಖ್ಯಾತ ರೌಡಿಗಳು ವಿರೋಧಿ ಪಡೆಗೆ ಬಲಿಯಾಗಿದ್ದಾರೆ. ಈ ಮಧ್ಯೆ ಹಿಂದೂ ಸಂಘಟನೆಗಳ ಮುಖಂಡರನ್ನೂ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಜಿಲ್ಲೆ ಇನ್ನೇನು ಸಹಜಸ್ಥಿತಿಗೆ ಮರಳುತ್ತದೆ ಅನ್ನುವಾಗ ಮತ್ತೆ ನಟೋರಿಯಸ್ ರೌಡಿಶೀಟರ್ ಇಲ್ಯಾಸ್ ಹತ್ಯೆಯಾಗಿರುವುದು ಜಿಲ್ಲೆಯಲ್ಲಿ ಭಯಗ್ರಸ್ಥ ವಾತಾವರಣ ಸೃಷ್ಟಿಸಿದೆ. ಇಲ್ಯಾಸ್ ಟಾರ್ಗೆಟ್ ಗ್ಯಾಂಗ್ ಕಟ್ಟಿಕೊಂಡಿದ್ದು, ಆತನ ಜೊತೆ ಹಲವಾರು ಮಂದಿ ಕ್ರಿಮಿನಲ್‌ಗಳು ಇದ್ದಾರೆ. ತಮ್ಮ ತಂಡದ ನಾಯಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಸಹಚರರ ಕಣ್ಣು ಕೆಂಪಗಾಗಿಸಿದೆ. ಈ ಹಿನ್ನೆಲೆಯಲ್ಲಿ ಪ್ರತೀಕಾರ ತೀರಿಸುವುದಾಗಿ ಪಣತೊಟ್ಟಿದ್ದು ನಗರದಲ್ಲಿ ಜನರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.

Comments are closed.