ಕೆಲವರು ಕಣ್ಣು ಮುಚ್ಚಿಕೊಳ್ಳುವುದಷ್ಟೇ ತಡ ಕೂಡಲೆ ನಿದ್ದೆಗೆ ಜಾರಿಬಿಡುತ್ತಾರೆ. ಕೆಲವರು ಮಾತ್ರ ಹಾಸಿಗೆಯಲ್ಲಾ ಉರುಳಾಡಿದರೂ ನಿದ್ದೆ ಬರಲ್ಲ. ಏನು ಮಾಡಿದರೂ…ಎಷ್ಟೇ ಪ್ರಯತ್ನಿಸಿದರು ನಿದ್ರಾದೇವಿ ಆವಾಹನೆಯಾಗಲ್ಲ. ಅಂತವರಿಗಾಗಿಯೇ ಈ ವಿಶೇಷ ಸುದ್ದಿ.
ಕೆಲವರು ತಿಂದ ಕೂಡಲೆ ಒಂದೈದು ನಿಮಿಷಕ್ಕೆಲ್ಲಾ ಹಾಸಿಗೆಗೆ ಹೊರಳುತ್ತಿದ್ದಂತೆ ನಿದ್ದೆಗೆ ಜಾರುತ್ತಾರೆ. ಬಹಳಷ್ಟು ಮಂದಿಗೆ ತಿಂದ ಕೂಡಲೆ ಒಂದೈದತ್ತು ನಿಮಿಷಕ್ಕೆಲ್ಲಾ ಗಡದ್ದಾಗಿ ನಿದ್ದೆ ಮಾಡಬೇಕು ಅನ್ನಿಸುತ್ತದೆ. ಇದಕ್ಕೆ ಕಾರಣ ಆಹಾರ ಪದಾರ್ಥಗಳಲ್ಲಿನ ನಿದ್ರೆಭರಿಸುವ ಗುಣಗಳ ವಿಟಮಿನ್‌ಗಳಿರುತ್ತವೆ. ನಿದ್ದೆ ಬರದೆ ಇರುವಂತಹವರು ಈ ಆಹಾರ ಪದಾರ್ಥಗಳನ್ನು ತಿಂದರೆ ಕೂಡಲೆ ನಿದ್ದೆ ಬರುತ್ತದೆ ಎನ್ನುತ್ತಿದ್ದಾರೆ ವೈದ್ಯರು. ಹಾಗಿದ್ದರೆ ಆ ಆಹಾರ ಪದಾರ್ಥಗಳು ಯಾವುವು.
ಮೀನು, ಬೀನ್ಸ್, ಮೊಸರು, ಸೊಪ್ಪು ತಿಂದರೆ ಒಳ್ಳೆಯ ನಿದ್ದೆ ಬರುತ್ತದೆಂದು ನ್ಯೂಟ್ರಿಷನ್‍ಗಳು ಹೇಳುತ್ತಿದ್ದಾರೆ. ಬೀನ್ಸ್, ಬಟಾಣಿ, ಹುರುಳಿಯಂತಹ ತರಕಾರಿಗಳಲ್ಲಿ ವಿಟಮಿನ್ ಬಿ6, ಬಿ12 ಜೊತೆಗೆ ಫೋಲಿಕ್ ಆಸಿಡ್ ಹೆಚ್ಚಾಗಿರುತ್ತದೆ. ಈ ಬಿ ವಿಟಮೀನ್ ನಮಗೆ ಒಳ್ಳೆಯ ನಿದ್ದೆ ಬರುವಂತೆ ಮಾಡುತ್ತದಂತೆ. ಸೊಪ್ಪುಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಇದು ಸಹ ನಿದ್ದೆಗೆ ಜಾರಲು ಔಷಧಿಯಾಗಿ ಕೆಲಸ ಮಾಡುತ್ತದೆ. ಅದೇ ರೀತಿ ಕೊಬ್ಬಿನಂಶ ಇಲ್ಲದ ಮೊಸರಿನಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ ಹೆಚ್ಚಾಗಿರುತ್ತದೆ. ಮೊಸರಿನಲ್ಲಿನ ಕ್ಯಾಲ್ಸಿಯಂ, ಮೆಗ್ನಿಷಿಯಂಗಳ ಪ್ರಭಾವದಿಂದ ಅತ್ಯಂತ ಬೇಗ ನಿದ್ದೆಗೆ ಜಾರುತ್ತಾರೆಂದು ವೈದ್ಯರು ಹೇಳುತ್ತಿದ್ದಾರೆ.
ಆದಕಾರಣ ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿ ವಿಟಮಿನ್ ಇರುವ ಆಹಾರಪದಾರ್ಥಗಳು, ಎರಡು ದಿನಗಳಿಗೊಮ್ಮೆ ಸೊಪ್ಪುಗಳನ್ನು ತೆಗೆದುಕೊಳ್ಳುವುದರ ಜತೆಗೆ ಮೊಸರು ತಿನ್ನುವ ಮೂಲಕ ನಿದ್ರಾಹೀನತೆಯಿಂದ ದೂರ ಇರಬಹುದು ಎಂದು ವೈದ್ಯರು ಸೂಚಿಸುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ನಿದ್ದೆ ಬರುತ್ತಿಲ್ಲ ಎಂದು ಏನೇನೋ ಮಾಡಲು ಹೋಗಬೇಡಿ. ಒಮ್ಮೆ ಈ ಆಹಾರ ಪದಾರ್ಥಗಳನ್ನು ಪ್ರಯತ್ನಿಸಿ. ಕಣ್ತುಂಬ ನಿದ್ದೆ ಮಾಡಿ. ಆರೋಗ್ಯದಿಂದಿರಿ.