ಕರಾವಳಿ

ರಕ್ತ ಭೇದಿ , ಅಮಶಂಕೆ ನಿವಾರಣೆಗೆ ಮಜ್ಜಿಗೆಯಲ್ಲಿ ಕರಿಬೇವಿನ ಪುಡಿ ಬೆರೆಸಿ ಸೇವಿಸಿ

Pinterest LinkedIn Tumblr

ಪಲ್ಯಕ್ಕೆ,ಸಾರಿಗೆ ವಗ್ಗರಣೆ ಹಾಕುವಾಗ ಮನೆಯಲ್ಲಿ ಕರಿಬೇವು ಇಲ್ಲದಿದ್ದರೆ ,ಪಕ್ಕದ ಮನೆಯಿಂದ ತರುತ್ತೇವೆ. ಆದರೆ, ತಿನ್ನುವಾಗ ಮಾತ್ರ ಕರಿಬೇವನ್ನು ತೆಗೆದು ಪಕ್ಕಕ್ಕಿಟ್ಟು ತಿನ್ನುತ್ತೇವೆ. ಕರಿಬೇವು ಬಿಸಾಡ ಬೇಕಾದ ಎಲೆಯಲ್ಲ.ಕರಿಬೇವಿನಲ್ಲಿ ಅನೇಕ ಔಷದೀಯ ಗುಣಗಳಿವೆ. ಹೇಳಬೇಕೆಂದರೆ,ಕರಿಬೇವಿನ ಗಿಡದಿಂದ ಬರುವ ಗಾಳಿಯೂ ಸಹ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಇತ್ತೀಚೆಗೆ ನಡೆಸಿದ ಸಂಶೋಧನೆಗಳ ಪ್ರಕಾರ, ವಾತಾವರಣದಲ್ಲಿರುವ ಕಾಲುಷ್ಯವನ್ನು ನಿವಾರಿಸುವ ಗುಣ ಕರಿಬೇವಿನ ಗಿಡಕ್ಕಿದೆಯಂತೆ. ಕರಿಬೇವಿನ ಎಲೆಗಳು,ತೊಗಟೆ,ಬೇರು,ಬೀಜಗಳು,ಹೂಗಳು… ಹೀಗೆ ಎಲ್ಲದರಲ್ಲೂ ಅನೇಕ ಔಷದೀಯ ಗುಣಗಳಿವೆ. ಕರಿ ಬೇವು ಉದರಕ್ಕೆ, ಕರುಳಿಗೆ ಬಲವನ್ನು, ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ, ಆಹಾರ ಪದಾರ್ಥಗಳ ರುಚಿ ಹೆಚ್ಚಿಸುತ್ತದೆ. ಅಜೀರ್ಣವನ್ನು ನಿವಾರಿಸಿ ಹಸಿವನ್ನು ಹೆಚ್ಚಿಸುತ್ತದೆ. ಇನ್ನೂ ಹೇಳಬೇಕೆಂದರೆ….

ಅಲರ್ಜಿಯನ್ನು ಉಂಟುಮಾಡುವ ವ್ಯಾದಿಗಳನ್ನು, ಉಬ್ಬಸ ನಿವಾರಿಸುವಲ್ಲಿ ಸಹಕರಿಸುತ್ತದೆ. ಕೆಲವರಿಗೆ ಬೆಳಿಗ್ಗೆ ಎದ್ದಾಕ್ಷಣ ಸೀನುಗಳು ಬರುವುದು, ಮೂಗು ಮುಚ್ಚಿಕೊಳ್ಳುವುದು, ನೆಗಡಿ ಮುಂತಾದ ತೊಂದರೆಗಳಿಂದ ನರಳುತ್ತಿರುತ್ತಾರೆ. ಅಂತಹವರು ಪ್ರತಿ ನಿತ್ಯವೂ ಊಟ ಮಾಡುವಾಗ ಮೊದಲ ತುತ್ತಿಗೆ ಕರಿಬೇವಿನ ಪುಡಿಯನ್ನು ಬೆರೆಸಿ ತಿನ್ನುವುದರಿಂದ ಆಯಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಗರ್ಭಿಣಿಯರಿಗೆ ರಕ್ತದ ಕೊರತೆಯಿರುತ್ತದೆ. ಅಂತಹವರು ಇತರೆ ಔಷದಗಳೊಂದಿಗೆ ಕರಿಬೇವಿನ ಪುಡಿಯನ್ನು ಆಹಾರದೊಂದಿಗೆ ಸೇವಿಸುವುದು ಉತ್ತಮ.

ರಕ್ತ ಭೇದಿ,ಆಮಶಂಕೆ ಭೇದಿ ಆಗುತ್ತಿರುವಾಗ ಬರೀ ಕರಿಬೇವಿನ ಪುಡಿಯನ್ನು ಉಪಯೋಗಿಸುವುದರ ಬದಲು ಮಜ್ಜಿಗೆಯಲ್ಲಿ ಬೆರೆಸಿ ಎರಡು ಅಥವಾ ಮೂರು ಬಾರಿ ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಗ್ಯಾಸ್ ಟ್ರಬಲ್, ಹೊಟ್ಟೆಯುಬ್ಬರವಿದ್ದು ಅಪಾನವಾಯು ಹೋಗುತ್ತಿದ್ದರೆ ಅಂತಹವರು ಆಗಾಗ್ಗೆ ಕರಿಬೇವನ್ನು ಉಪಯೋಗಿಸಬೇಕು. ಮೂಲವ್ಯಾದಿಯಿಂದ ನರಳುತ್ತಿರುವವರಿಗೆ ಕರಿಬೇವು ಸೇವನೆ ಉತ್ತಮ ಫಲಿತಾಂಶ ನೀಡುತ್ತದೆ, ಗಿಡದ ತೊಗಟೆಯನ್ನು ಚೆನ್ನಾಗಿ ಅರೆದು, ತುರಿಕೆ,ಬೊಕ್ಕೆಗಳ ಮೇಲೆ ಬಳಿದು ಆರಿದನಂತರ ಸ್ನಾನ ಮಾಡಿದರೆ ಗುಣವಾಗುತ್ತವೆ. ಕ್ಯಾನ್ಸರ್ ವ್ಯಾದಿಗೂ ಸಹಕಾರಿಯೆಂದು ಇತ್ತೀಚೆಗೆ ನಡೆಸಿದ ಸಂಶೋಧನೆಗಳಲ್ಲಿ ತಿಳಿದು ಬಂದಿದೆ.

ಕರಿಬೇವಿನ ಪುಡಿ ಮಾಡುವ ವಿಧಾನ :
(ಆದಷ್ಟು ಹೆಚ್ಚು ಕರಿ ಬೇವಿನ ಸೊಪ್ಪನ್ನು ಹಾಕಬೇಕು) ಜೀರಿಗೆ,ಧನಿಯಾ, ಒಣಗಿಸಿದ ಕರಿಬೇವಿನ ಎಲೆಗಳು ಈ ಮೂರನ್ನೂ ಪ್ರತ್ಯೇಕವಾಗಿ ತುಪ್ಪದಲ್ಲಿ ಹುರಿದುಕೊಳ್ಳಬೇಕು. ನುಣ್ಣಗೆ ಪುಡಿಮಾಡಬೇಕು. ನಂತರ ಅದಕ್ಕೆ ಸರಿಹೊಂದುವಷ್ಟು ಉಪ್ಪು ಹಾಗು ಖಾರ ಬೆರೆಸಿ ಬಾಟ್ಲಿಯಲ್ಲಿ ಹಾಕಿಟ್ಟುಕೊಳ್ಳಬೇಕು. ಉಪಾಹಾರ, ಊಟ ಮಾಡುವಾಗ ಈ ಪುಡಿಯನ್ನು ಬೆರೆಸಿ ತಿನ್ನಬೇಕು, ಒಳ್ಳೆಯ ಫಲಿತಾಂಶ ಲಭಿಸುತ್ತದೆ.

Comments are closed.