ಕರಾವಳಿ

ಐಫೋನ್ ಹಿಂಬದಿಯಲ್ಲಿ ಸಿಂಬಲ್‌ಗಳನ್ನು ಯಾಕೆ ಹಾಕಿರುತ್ತಾರೆ.. ಗೋತ್ತೆ..?

Pinterest LinkedIn Tumblr

ಆಪೆಲ್ ಕಂಪೆನಿಯ ಉತ್ಪನ್ನಗಳನ್ನು ತೆಗೆದುಕೊಳ್ಳುವುದೆಂದರೆ ಕೆಲವರಿಗೆ ಸ್ಟೇಟಸ್ ಪ್ರಶ್ನೆ. ಐಫೋನ್, ಮ್ಯಾಕ್‌ಬುಕ್ ಕೆಲವರಿಗೆ ಅಗತ್ಯವಿಲ್ಲದಿದ್ದರೂ ಅದನ್ನು ತೆಗೆದುಕೊಂಡು ತಾವು ಭಿನ್ನ ಎಂಬುದನ್ನು ತೋರಿಸಿಕೊಳ್ಳುತ್ತಾರೆ. ಐಫೋನ್ ಆಗಲಿ ಮ್ಯಾಕ್‌ಬುಕ್ ಆಗಲಿ ಕೈಗೆ ಬಂದರೆ ಅದನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸಲಿಕ್ಕೆ ಹೋಗಲ್ಲ. ಅದರ ಸ್ರ್ಕೀನ್, ಆಪ್ಸ್ ಅತ್ತಿಂದಿತ್ತ ತಿರುಗಿಸಿ ಒಂದೆರಡು ಸಲ ಮಾತ್ರ ನೋಡಿರುತ್ತೇವೆ. ಐಫೋನ್ ಮತ್ತು ಮ್ಯಾಕ್‌ಬುಕ್ ಹಿಂಬದಿಯಲ್ಲಿ ಕೆಲವೊಂದು ಸಿಂಬಲ್‌ಗಳನ್ನು ಹಾಕಿರುತ್ತಾರೆ ಅದು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣವೇ?

1. ಈ ಕೆಳಗೆ ಚಿತ್ರದಲ್ಲಿ ನೋಡುತ್ತಿದ್ದೀರಲ್ಲವೇ ಅದೇ ಸಿಂಬಲ್‌‌ಗಳ ಬಗ್ಗೆ ನಾವು ಮಾತನಾಡುತ್ತಿರುವುದು
2. ಇದೇನಿದು ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನಿಸುವ ಈ ಅಕ್ಷರಗಳು ಅಂತಾರಾಷ್ಟ್ರೀಯ ವ್ಯಾಪಾರಿ ಮಾನದಂಡಗಳಿಗೆ ಸೂಚನೆ
3. ಇದರಲ್ಲಿನ “FC” ಎಂಬ ಚಿನ್ಹೆಯಲ್ಲಿ ಇನ್ನೊಂದು C ಸಹ ಇದೆ, ಅಂದರೆ ಐಫೋನ್ Federal Communications Commission (FCC) ಮಾನದಂಡಗಳಿಗೆ ಅನುಗುಣವಾಗಿದೆ ಎಂದರ್ಥ
4. ಈ ಫೋನ್ ಸಂಪೂರ್ಣವಾಗಿ ಕೆಲಸ ನಿಲ್ಲಿಸಿದ ಬಳಿಕ ಬಿಸಾಕಬಹುದು, ಆದರೆ ಮರುಬಳಕೆ ಸಾಧ್ಯವಿಲ್ಲ ಎಂದರ್ಥದ ಚಿನ್ಹೆ
5. “CE” (Conformité Européenne) ಎಂದರೆ ಯೂರೋಪ್ ಯೂನಿಯನ್‌ನಲ್ಲಿ ಇದನ್ನು ಮಾರಾಟ ಮಾಡಬಹುದು ಎಂದರ್ಥ

6. ಇಲ್ಲಿ ಕಾಣಿಸುತ್ತಿರುವ ಸಂಖ್ಯೆ ಯೂರೋಪಿನ ಮಾರ್ಕರ್‌ದು. ಇದನ್ನು ಅನುಮೋದಿಸಿದವರ ಸಂಖ್ಯೆ ಇದು.
7. ಇದೊಂದು “ಅಲರ್ಟ್ ಸಿಂಬಲ್” ಆಗಿದ್ದು ಈ ಡಿವೈಸ್ ಒಂದು ಅಥವಾ ಹಲವು ಸದಸ್ಯ ರಾಷ್ಟ್ರಗಳ ವೈರ್‌ಲೆಸ್ ನಿಬಂಧನೆಗಳಿಗೆ ಒಳಪಟ್ಟಿಲ್ಲ ಎಂದರ್ಥ.
8. ಆಪೆಲ್‌ನ ಮ್ಯಾಕ್‌ಬುಕ್ (0682 ಹೊರತುಪಡಿಸಿ) ಎಲ್ಲಾ ಚಿನ್ಹೆಗಳ ಜತೆಗೆ ಇನ್ನೂ ಎರಡನ್ನು ಒಳಗೊಂಡಿದೆ.
9. Voluntary Control Council for Interference(VCCI) ಎಂಬುದು ಜಪಾನಿನ ನಿಯಂತ್ರಣ ಏಜೆನ್ಸಿ. ಈ ಡಿವೈಸ್‌ ಹೊರ ಸೂಸುವ ರೇಡಿಯೋ ತರಂಗಾಂತರಗಳು (RF) ಗುಣಮಟ್ಟಕ್ಕೆ ಅನುಗುಣವಾಗಿದೆ ಎಂದರ್ಥ.
10. ಈ ಎಲಕ್ಟ್ರಾನಿಕ್ ಉಪಕರಣ ಬಳಕೆಗೆ ಸುರಕ್ಷಿತ ಎಂಬುದನ್ನು ಸೂಚಿಸುವ ಆಸ್ಟ್ರೇಲಿಯಾದ Regulatory Compliance Mark (RCM) ಚಿನ್ಹೆ

Comments are closed.