ಕರಾವಳಿ

ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಖಾಲಿ ಸ್ಥಾನಗಳಿಗೆ ನೇಮಕ : ಅರ್ಜಿ ಆಹ್ವಾನ

Pinterest LinkedIn Tumblr

ಮ0ಗಳೂರು ನವೆಂಬರ್ 18 : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಆಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದ್ದು, ಸದ್ರಿ ವ್ಯವಸ್ಥಾಪನಾ ಸಮಿತಿಯ ಕೆಲವು ಸದಸ್ಯರುಗಳ ರಾಜೀನಾಮೆಯಿಂದ ಹಾಗೂ ಅನ್ಯತಾ ಕಾರಣಗಳಿಂದಾಗಿ ಖಾಲಿ ಉಂಟಾಗಿರುತ್ತದೆ. ವ್ಯವಸ್ಥಾಪನಾ ಸಮಿತಿಯ ಖಾಲಿ ಸ್ಥಾನಗಳನ್ನು ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಅಧಿನಿಯಮ ಅನ್ವಯ ರಿಕ್ತಾ ಸ್ಥಾನಗಳನ್ನು ಭರ್ತಿ ಮಾಡುವ ಸಲುವಾಗಿ ಆಸಕ್ತಿಯುಳ್ಳ ಭಕ್ತಾದಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.

ದೇವಸ್ಥಾನಗಳ ವಿವರ ಇಂತಿವೆ:

ಶ್ರೀ ಮುಂಡಿತ್ತಾಯ ದೈವಸ್ಥಾನ, ಬೊಂಡಂತಿಲ, ಮಂಗಳೂರು ತಾಲೂಕು – ಪ.ಜಾ/ಪ.ಪಂ:1,
ಶ್ರೀ ಮಲರಾಯ ದೈವಸ್ಥಾನ, ಬಂಡಿಕೊಟ್ಟಿಗೆ, ಉಳ್ಳಾಲ, ಮಂಗಳೂರು ತಾಲೂಕು – ಪ.ಜಾ/ಪ.ಪಂ:1,
ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಧರೆಗುಡ್ಡೆ, ಮಂಗಳೂರು ತಾಲೂಕು, ಮಹಿಳೆ 1, ಸಾಮಾನ್ಯ -1,
ಶ್ರೀ ಮುಖ್ಯಪ್ರಾಣ ದೇವಸ್ಥಾನ, ಅಡ್ಡೂರು, ಮಂಗಳೂರು ತಾಲೂಕು – ಸಾಮಾನ್ಯ-1,
ಶ್ರೀ ಮುಂಢಿತ್ತಾಯ ದೈವಸ್ಥಾನ, ಕಣ್ಣೂರು, ಮಂಗಳೂರು ತಾಲೂಕು- ಮಹಿಳೆ – 1,
ಶ್ರೀ ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ದೇವಸ್ಥಾನ, ಮಲೆಬೆಟ್ಟು, ಕೊಯ್ಯತ್ತಾರು, ಬೆಳ್ತಂಗಡಿ- ಸಾಮಾನ್ಯ-1,
ಅಂಗಾಜ (ಪಾಲಿಂಜೆ) ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕುರಿಯಾ, ಪುತ್ತೂರು ತಾಲೂಕು- ಮಹಿಳೆ -1,
ಮೊಗ್ರು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪುತ್ತೂರು ತಾಲೂಕು- ಪ.ಜಾ/ಪ.ಪಂ-1,
ಶ್ರೀ ಸರ್ವೆ ಸುಬ್ರಾಯ ದೇವಸ್ಥಾನ, ಪುತ್ತೂರು ತಾಲೂಕು.-ಸಾಮಾನ್ಯ-2,
ಶ್ರೀ ಅಗಳಿ ಸದಾಶಿವ ದೇವಸ್ಥಾನ, ಕಾೈಮಣ, ಪುತ್ತೂರು ತಾಲೂಕು-ಸಾಮಾನ್ಯ-1,
ಶ್ರೀ ಯಜ್ಯಮೂರ್ತಿ ದೇವಸ್ಥಾನ, ಬಳ್ಪ, ಸುಳ್ಯ ತಾಲೂಕು-ಪ.ಜಾ/ಪ.ಪಂ-1, ಮಹಿಳೆ-1, ಸಾಮಾನ್ಯ-2

ಆದುದರಿಂದ ಆಸಕ್ತ ಭಕ್ತಾದಿಗಳು ನಿಗಧಿತ ಅರ್ಜಿ ನಮೂನೆ 1 (ಬಿ) ಯಲ್ಲಿ ಭರ್ತಿ ಮಾಡಿ ಈ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 6 ರ ಸಂಜೆ 5.30 ರ ಒಳಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದ.ಕ.ಮಂಗಳೂರು ಇಲ್ಲಿಗೆ ಸ್ವೀಕೃತವಾಗುವಂತೆ ಸಲ್ಲಿಸಬೇಕು. ನಿಗಧಿತ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಆಯುಕ್ತರು, ಹಿಂ.ಧಾ.ಸಂ.ಮತ್ತು ಧ.ದತ್ತಿ ಇಲಾಖೆ, ಹಾಗೂ ಪದನಿಮಿತ್ತ ಕಾರ್ಯದರ್ಶಿ, ಜಿಲ್ಲಾ ಧಾರ್ಮಿಕ ಪರಿಷತ್, ದ.ಕ ಮಂಗಳೂರು ದೂರವಾಣಿ ಸಂಖ್ಯೆ: 0824-2220576 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Comments are closed.