ಕರಾವಳಿ

ನ.3ರಿಂದ “ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ” ಆರಂಭ

Pinterest LinkedIn Tumblr

ಮಂಗಳೂರು, ಅಕ್ಟೋಬರ್.26: ಪ್ರಧಾನಿಯವರ ಕನಸಿನ ಯೋಜನೆ ಸ್ವಚ್ಛ ಭಾರತ‌ ಅಭಿಯಾನವನ್ನುಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಶನ್ನ ವತಿಯಿಂದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ಎಂಬ ಹೆಸರಿನಲ್ಲಿ ನಾಲ್ಕನೇ ಹಂತದ ಸ್ವಚ್ಛತಾ ಅಭಿಯಾನ ನ.3ರಿಂದ ಆರಂಭಗೊಳ್ಳಲಿದ್ದು, ನಾಲ್ಕು ಆಯಾಮಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ಮಿಶನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ತಿಳಿಸಿದ್ದಾರೆ.

ರಾಮಕೃಷ್ಣ ಮಠದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಚ್ಛತಾ ಅಭಿಯಾನ ಕಳೆದ ಎರಡೂವರೆ ವರುಷಗಳಿಂದ ಮಂಗಳೂರಿನಲ್ಲಿ ಉತ್ತಮ ಜನ ಸ್ಪಂದನೆ ದೊರೆತಿದೆ.

ಜನರಿಂದ ಜನರಿಗಾಗಿ ಜನರೇ ಮಾಡುವ ಕಾರ್ಯಕ್ರಮ ಎಂಬ ಭಾವಜಾಗೃತವಾದುದರ ಪರಿಣಾಮ‌ ಇಂದು ಯಶಸ್ವಿಯಾಗಿ ನಾಲ್ಕನೇ ಹಂತಕ್ಕೆ ಮುನ್ನಡಿಯಿಡುತ್ತಿದೆ. ನ.3ರಿಂದ 5ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ 4ನೇ ಹಂತದ ಸ್ವಚ್ಛತಾ ಕಾರ್ಯ ಆರಂಭಗೊಳ್ಳಲಿದೆ. ‘ಸ್ವಚ್ಛ ಗ್ರಾಮ: ಸ್ವಚ್ಛ ದಕ್ಷಿಣ ಕನ್ನಡ’ ಕಾರ್ಯಕ್ರಮದಡಿ ಜಿಲ್ಲೆಯ ಸುಮಾರು ನೂರು ಗ್ರಾಮಗಳಲ್ಲಿ 1 ಸಾವಿರ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡುವ ಗುರಿ ಹೊಂದಲಾಗಿದ್ದು, ನ. 3ರಂದು ಬೆಳಗ್ಗೆ 10ಕ್ಕೆ ಚಾಲನೆಗೊಳ್ಳಲಿದೆ ಎಂದು ಹೇಳಿದರು.

ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಹಿನ್ನಲೆಯಲ್ಲಿ ಶಾಲಾವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯಕುರಿತಂತೆ‌ಅರಿವು ಮೂಡಿಸಬೇಕೆಂಬ ಆಶಯದೊಂದಿಗೆ ಸುಮಾರು ನೂರು ಶಾಲೆಗಳಲ್ಲಿ ಒಟ್ಟು‌ಐನೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ಶಾಲೆಯಿಂದ ನೂರು ಮಕ್ಕಳಿಗೆ ಶುಚಿತ್ವದಕುರಿತು ವಿಶೇಷ ತರಬೇತಿ ನೀಡಲಾಗುವುದು. ಅದರಲ್ಲಿ ಮೊದಲ ಐದು ವಿದ್ಯಾರ್ಥಿಗಳನ್ನು ಸ್ವಚ್ಛ ಭಾರತ‌ಅಂಬಾಸಡರ್‌ಎಂದು ಗುರುತಿಸಿ ಗೌರವಿಸಿ ಸಮ್ಮಾನಿಸಲಾಗುವುದು.

ಜೊತೆಗೆರಾಷ್ಟ್ರನಿರ್ಮಾಣದಲ್ಲಿ‌ಅವರು ಪಾತ್ರವಹಿಸುವಂತೆ ಪ್ರೇರೇಪಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿಶೇಷವಾಗಿ ತರಬೇತುಗೊಳಿಸಲಾಗುವುದು. ಇದರ ಪೂರ್ಣಪ್ರಮಾಣದ ಅನುಷ್ಟಾನಕ್ಕಾಗಿ ನಿತ್ಯಕಾರ್ಯ ನಿರ್ವಹಿಸುವ ನುರಿತತರಬೇತುದಾರರುಕೈ ಜೋಡಿಸಲಿದ್ದಾರೆ. ಇದುಜಾಗೃತಿಕಾರ್ಯಕ್ರಮವಾದರೂ ಒಂದಿಷ್ಟು ಶ್ರಮದಾನ, ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. . ಈ ಕಾರ್ಯಕ್ರಮಕ್ಕೆ ನ. 4ರಂದು ಬೆಳಗ್ಗೆ 9.30ಕ್ಕೆ ಚಾಲನೆ ದೊರೆಯಲಿದೆ ಎಂದು ಸ್ವಾಮಿ ಜಿತಕಾಮಾನಂದ ತಿತಿಳಿಸಿದರು.

ಸ್ವಚ್ಛ ಮಂಗಳೂರು – ನಿತ್ಯಜಾಗೃತಿ :ಕಸಹೆಕ್ಕುವ ಕಾರ್ಯದೊಂದಿಗೆಜಾಗೃತಿಕಾರ್ಯವೂ ಆಗಬೇಕೆಂಬ ಹಿನ್ನಲೆಯಲ್ಲಿ ಈ ಬಾರಿ ಮಂಗಳೂರು ನಗರದ ಸುಮಾರು ‌ಐವತ್ತು ಸಾವಿರ ಮನೆಗಳನ್ನು ಸಂಪರ್ಕಿಸಬೇಕೆಂಬ ಗುರಿ ಹೊಂದಲಾಗಿದೆ. ಈ ಜಾಗೃತಿ‌ಅಭಿಯಾನವು ಪ್ರತಿದಿನವೂ ಸಾಯಂಕಾಲ ಐದುಗಂಟೆಯಿಂದ ಏಳು ಗಂಟೆಯತನಕ ನಡೆಯಲಿದೆ. ಇದಕ್ಕಾಗಿ ಸುಮಾರು‌ಅರವತ್ತು ತಂಡಗಳನ್ನು ಗುರುತಿಸಲಾಗಿದೆ.

ಮನೆಮನೆ ಭೇಟಿ ನೀಡಿ ಸ್ವಚ್ಛತೆಯ‌ಅರಿವುಮೂಡಿಸುವಕರಪತ್ರ ನೀಡುವುದು, ತ್ಯಾಜ್ಯ ನಿರ್ವಹಣೆಯಕುರಿತುತರಬೇತಿ ನೀಡುವುದು, ಪುಟ್ಟ ಸಭೆಗಳನ್ನು ಆಯೋಜಿಸಿ ಸ್ವಚ್ಛತೆಯಲ್ಲಿ ಸಾರ್ವಜನಿಕರುಕೈಜೋಡಿಸುವಂತೆ ವಿನಂತಿಸುವುದು, ಸಮುದಾಯದ‌ಅಭಿವೃದ್ಧಿಕಾರ್ಯದಲ್ಲಿ ಗುರಿತಿಸಿಕೊಳ್ಳುವಂತೆ ಪ್ರೇರೇಪಿಸುವುದು ಸೇರಿದಂತೆ ಸುಮಾರು‌ಇಪ್ಪತ್ತು ಆಂಶಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. 5ರಂದು ಬೆಳಗ್ಗೆ 9 ಗಂಟೆಗೆ ಕಾಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇದಲ್ಲದೇ ‘ಸ್ವಚ್ಛ ಭಾರತ-ಶ್ರಮದಾನ’ ಪ್ರತಿ ರವಿವಾರ ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಸುಮಾರು 40 ವಾರಗಳ ಕಾಲ ನಡೆಯಲಿದೆ ಎಂದು ಸ್ವಾಮಿ ಜಿತಕಾಮಾನಂದ ವಿವರಿಸಿದರು.

3ನವೆಂಬರ್ 2017 ಶುಕ್ರವಾರದಂದುಬೆಳಿಗ್ಗೆ 10 ಗಂಟೆಗೆಸ್ವಚ್ಛದಕ್ಷಿಣಕನ್ನಡ‌ಅಭಿಯಾನಕ್ಕೆ ಮಠದ‌ ಆವರಣದಲ್ಲಿ ಚಾಲನೆ ದೊರೆಯಲಿದೆ. ಕೇಂದ್ರ ಸಚಿವರಾದ ರಮೆಶ್‌ಜಿಗ ಜಿಣಗಿ ಮುಖ್ಯ‌ಅಭ್ಯಾಗತರಾಗಿ ಆಗಮಿಸಿ ಸ್ವಚ್ಛ ದಕ್ಷಿಣಕನ್ನಡ‌ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಯಾಗಿ ಡಿ ಆರ್ ಪಾಟೀಲ್ ಪೂರ್ವ ಶಾಸಕರು,ಗದಗ್‌ ಇವರು‌ ಆಗಮಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಡಾ. ಎಂ ಆರ್‌ರವಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಮಹರಾಜ್ ಸಾನಿಧ್ಯ ವಹಿಸಲಿದ್ದಾರೆ. ದಕ್ಷಿಣಕನ್ನಡಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 1000 ಜನ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.

4 ನವೆಂಬರ್ 2017 ಶನಿವಾರದಂದು ಬೆಳಿಗ್ಗೆ 9.30 ಕ್ಕೆ ಸ್ವಚ್ಛ ಮನಸ್ಸು‌ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ರಾಮಕೃಷ್ಣ ಮಿಶನ್ನಿನ ಟ್ರಸ್ಟಿಗಳು ಹಾಗೂ ಕೋಲ್ಕತ್ತ‌ಅದೈತ‌ಆಶ್ರಮದ‌ಅಧ್ಯಕ್ಷರಾದ ಪೂಜ್ಯ ಸಾಮಿ ಮುಕ್ತಿದಾನಂದಜಿ ಮಹರಾಜ್ ಚಾಲನೆ ನೀಡಲಿದ್ದಾರೆ. ಮುಖ್ಯ‌ಅಭ್ಯಾಗತರಾಗಿರಾಜಕೋಟ್‌ರಾಮಕೃಷ್ಣ ಮಠದ‌ಅಧ್ಯಕ್ಷರಾದ ಸ್ವಾಮಿ ಸರ್ವಸ್ಥಾನಂದಜಿ‌ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಬೆಂಗಳೂರಿನಿಂದ ಪ್ರೋ. ರಘೋತ್ತಮ್‌ರಾವ್ ಭಾಗವಹಿಸಲಿದ್ದಾರೆ. ಸ್ವಾಮಿಜಿತಕಾಮಾನಂದಜಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು. ಅಂದು‌ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಸ್ವಚ್ಛ ಮನಸ್ಸುಕಾರ್ಯಾಗಾರಜರುಗಲಿದೆ.

5 ನವೆಂಬರ್ 2017 ಭಾನುವಾರದಂದು ಬೆಳಿಗ್ಗೆ 9 ಗಂಟೆಗೆ ಸ್ವಚ್ಛ ಮಂಗಳೂರು ಅಭಿಯಾನ ಉದ್ಘಾಟನೆಗೊಳ್ಳಲಿದೆ. ಸನ್ಮಾನ್ಯಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್ ಹೆಗ್ಡೆ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ. ಸಂಸದರಾದ ಶ್ರೀ ನಳಿನಕುಮಾರ್ ಕಟೀಲು ಮುಖ್ಯ‌ಅಭ್ಯಾಗತರಾಗಿರುತ್ತಾರೆ.

ರಾಮಕೃಷ್ಣ ಮಿಶನ್ನಿನ ಟ್ರಸ್ಟಿಗಳಾದ ಸ್ವಾಮಿ ಮುಕ್ತಿದಾನಂದಜಿಮಹರಾಜ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಡಾ. ಎನ್ ವಿನಯ ಹೆಗ್ಡೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವ ನೀರೀಕ್ಷೆಯಿದೆ. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಉಪಸ್ಥಿತರಿರುತ್ತಾರೆ ಎಂದು ಸ್ವಾಮಿ ಜಿತಕಾಮಾನಂದ ಕಾರ್ಯಕ್ರಮದ ಕುರಿತು ವಿವರ ನೀಡಿದರು

ಪತ್ರಿಕಾಗೋಷ್ಠಿಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಸಂಚಾಲಕ ಸ್ವಾಮಿ ಏಕಗಮ್ಯಾನಂದ, ಮಠದ ಹಿತೈಷಿಗಳಾದ ಎಂ. ಆರ್. ವಾಸುದೇವ, ಉಮಾನಾಥ ಕೋಟೆಕಾರ್, ಜಿಪಂ ಉಪ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.

Comments are closed.