ಕರಾವಳಿ

ಕರಾವಳಿಯಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ : ವಿದ್ಯುತ್‌ದೀಪಗಳ ಅಲಂಕಾರದಿಂದ ಕಂಗೋಳಿಸುತ್ತಿರುವ ಚರ್ಚ್‌ಗಳು

Pinterest LinkedIn Tumblr

aholy-saviour-church_1

ಮಂಗಳೂರು,ಡಿಸೆಂಬರ್. 25: ಏಸು ಕ್ರಿಸ್ತರ ಜನ್ಮದಿನದ ಹಬ್ಬವಾದ ‘ಕ್ರಿಸ್ಮಸ್’ನ ಮುಂಚಿನ ದಿನವಾದ ಶನಿವಾರ ರಾತ್ರಿಯನ್ನು ಕ್ರೈಸ್ತರು ಕ್ರಿಸ್ಮಸ್ ಜಾಗಕರಣೆಯ ಮೂಲಕ ಸಂಭ್ರಮಿಸಿದರು.ಈ ಪ್ರಯುಕ್ತ ನಗರದ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನಡೆದವು.

bejai-church_2 bejai-church_3 bejai-church_4 bejai-church_5 bendur_wel_church_2 bendur_wel_church_3 bendur_wel_church_4 bendur_wel_church_5

ಬಲಿ ಪೂಜೆಯ ಬಳಿಕ ಕ್ರೈಸ್ತಬಾಂಧವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಕೇಕ್ ಗಳನ್ನು ಹಂಚಿಕೊಂಡರು. ಚರ್ಚ್ಗಳಲ್ಲಿ ರಾತ್ರಿ ವೇಳೆ ಜರಗಿದ ವಿಶೇಷ ಪ್ರಾರ್ಥನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು.

bendur_wel_church_6 bendur_wel_church_7 bendur_wel_church_8 bendur_wel_church_9 bendur_wel_church_10 bendur_wel_church_11 bendur_wel_church_12 bishop_house_2

ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚರ್ಚ್‌ಗಳ ಆವರಣದಲ್ಲಿ ಮತ್ತು ಕ್ರೈಸ್ತರ ಮನೆಯ ಆವರಣದಲ್ಲಿ ಆಕರ್ಷಕ ಕ್ರಿಬ್‌ಗಳನ್ನು (ಗೋದಲಿ) ನಿರ್ಮಿಸಲಾಗಿತ್ತು. ತಾರೆ (ನಕ್ಷತ್ರ)ಗಳನ್ನು ನೇತು ಹಾಕಲಾಗಿತ್ತು. ಕ್ರಿಸ್ಮಸ್ ಗೀತೆಗಳು (ಕ್ಯಾರೊಲ್ಸ್) ಆಚರಣೆಗೆ ವಿಶೇಷ ಕಳೆ ನೀಡಿತ್ತು. ಕ್ರಿಸ್ಮಸ್ ತಾತಾ ‘ಸಾಂತಾಕ್ಲಾಸ್’ ಆಗಮನ ವಿಶೇಷ ಆಕರ್ಷಣೆಯಾಗಿತ್ತು.

bishop_house_3 bishop_house_4 bishop_house_5 bishop_house_6 holy-saviour-church_2 holy-saviour-church_3 holy-saviour-church_5 holy-saviour-church_6 holy-saviour-church_7 holy-saviour-church_8 holy-saviour-church_9 holy-saviour-church_10

ಮಂಗಳೂರಿನ ರೊಝಾರಿಯೊ ಕೆಥೆಡ್ರಲ್ನಲ್ಲಿ ನಡೆದ ಸಂಭ್ರಮದ ಬಲಿ ಪೂಜೆಯಲ್ಲಿ ಧರ್ಮ ಪ್ರಾಂತದ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಸಂದೇಶ ನೀಡಿದರು. ಕೆಥೆಡ್ರಲ್‌ನ ಪ್ರಧಾನ ಗುರು ಫಾ. ಜೆ.ಬಿ. ಕ್ರಾಸ್ತಾ ಮತ್ತಿತರ ಗುರುಗಳು ಉಪಸ್ಥಿತರಿದ್ದರು.

rosario-church_21 rosario-church_20

rosario-church_19 rosario-church_18 rosario-church_17 rosario-church_16 rosario-church_15 rosario-church_14 rosario-church_13 rosario-church_12 rosario-church_11 rosario-church_10 rosario-church_9 rosario-church_8

rosario-church_7 rosario-church_6 rosario-church_5 rosario-church_4 rosario-church_3 rosario-church_2

ಇಂದು (ರವಿವಾರ) ಕ್ರಿಸ್ಮಸ್ ಹಬ್ಬದ ಆಚರಣೆ ನಡೆಯಲಿದೆ. ಚರ್ಚ್ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ನಡೆಯಲಿದೆ. ಕ್ರಿಸ್ಮಸ್ ವಿಶೇಷ ತಿಂಡಿ ಕುಸ್ವಾರ್ ವಿನಿಮಯ ಮತ್ತು ವಿತರಣೆ ನೇರವೇರಲಿದೆ. ಕ್ರೈಸ್ತ ಭಾಂಧವರ ಮನೆಗಳಲ್ಲಿ ಹಬ್ಬದ ಭೋಜನ ನಡೆಯಲಿದೆ.

Comments are closed.