ಕರಾವಳಿ

ಜಯಲಲಿತಾ ಅವರ ದಕ್ಷಿಣ ಕನ್ನಡ ನಡುವಿನ ನಂಟು ಬಗ್ಗೆ ಪ್ರಸ್ತಾಪಿಸಿದ ಎಸ್.ಪಿ.ಕೆ.ಕಲ್ಕೂರ

Pinterest LinkedIn Tumblr

jayalalitha-childhood_pics

ಮಂಗಳೂರು : ತಮಿಳರ ‘ಅಮ್ಮ’ ಎಂದೇ ಖ್ಯಾತರಾದ ತಮಿಳುನಾಡಿನ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ‌ ಅವರಿಗೂ ದಕ್ಷಿಣ ಕನ್ನಡ ಜಿಲ್ಲೆಗೂ ಅವಿನಾಭಾವ ನಂಟು‌ ಇತ್ತು‌ ಎಂಬುದು ತಿಳಿದುಬಂದಿದೆ.

1961ರಲ್ಲಿ ತೆರೆಕಂಡ ಶ್ರೀಶೈಲ ಮಹಾತ್ಮೆ ಕಪ್ಪು ಬಿಳುಪು ಕನ್ನಡ ಚಿತ್ರದ ಮೂಲಕ ಬಾಲನಟಿಯಾಗಿ ಜಯಲಲಿತಾ ಚಿತ್ರರಂಗ ಪ್ರವೇಶಿಸಿದ್ದರು. ಈ ಚಿತ್ರದ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಪ್ರಖ್ಯಾತ ನಿರ್ದೇಶಕ‌ ಆರೂರು ಪಟ್ಟಾಬಿ. ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದು ಜಯಲಲಿತಾ ತಾಯಿ ಕಲಾವಿದೆ ‘ಸಂಧ್ಯಾ’.

pradeep_kumar_kalkura pradeep_kumar_kalkura_2

ಎಸ್. ಪ್ರದೀಪಕುಮಾರ ಕಲ್ಕೂರ

ಈ ಚಿತ್ರದಲ್ಲಿ ಬರುವ‌ ಒಂದು ಹಾಡು ಅನುಪಮ ಭಾಗ್ಯವಿದೇ ಕಂಡೆನು ನಾ ಪರಶಿವನಾ ಚಿನ್ಮಯ, ತನ್ಮಯ ನಾನಾದೆ ‌ಇದನ್ನು ಹಾಡಿದರು‌ ಆರೂರು ಪಟ್ಟಾಭಿಯವರ ಪತ್ನಿ ಶ್ರೀಮತಿ ಸಿ.ಎಸ್. ಸರೋಜಿನಿ.

ತಮಿಳುನಾಡು – ತುಳುನಾಡು ನಡುವಿನ ಈ ಅಪೂರ್ವ ಬಾಂಧವ್ಯವನ್ನು ನೆನಪಿಸಿಕೊಂಡವರು ಆರೂರು ಪಟ್ಟಾಭಿಯವರ ಮೊಮ್ಮಗ ಹಾಗೂ ಪ್ರಸ್ತುತ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷ‌ ಎಸ್. ಪ್ರದೀಪಕುಮಾರ ಕಲ್ಕೂರ. ಕಲ್ಕೂರ‌ ಅವರು ಜಯಲಲಿತಾ ನಿಧನದ ಬಗ್ಗೆ ತನ್ನ ಸಂತಾಪವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Comments are closed.