ಕರಾವಳಿ

ಕರ್ತವ್ಯ ಲೋಪದಡಿಯಲ್ಲಿ ಉಡುಪಿಯ ಇಬ್ಬರು ಅಬಕಾರಿ ಇನ್ಸ್‌ಪೆಕ್ಟರ್ ಸಸ್ಪೆಂಡ್..!

Pinterest LinkedIn Tumblr

ಉಡುಪಿ: ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ ಮಣಿಪಾಲದ ಕಂಟ್ರಿ ಇನ್ ಆ್ಯಂಡ್ ಸೂಟ್ ಹೊಟೇಲ್ ನಲ್ಲಿರುವ ಬಾರ್ ಪರವಾನಿಗೆಯನ್ನು ಉಡುಪಿ ಅಬಕಾರಿ ಇಲಾಖೆ ರದ್ದುಗೊಳಿಸಿದೆ. ಈ ದಾಳಿಯ ವೇಳೆ ಕರ್ತವ್ಯ ಲೋಪ ಎಸಗಿರುವ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

????????????????????????????????????
(ಕುಂದಾಪುರ ಅಬಕಾರಿ ನಿರೀಕ್ಷಕಿ ಶುಭದಾ ಸಿ ನಾಯಕ್)

ಹೊಟೇಲಿನ ಆರನೆ ಮಹಡಿಯಲ್ಲಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು ದೊರೆತ ಮಾಹಿತಿಯಂತೆ ಅಬಕಾರಿ ಇಲಾಖಾ ಪೆ ನೀಡುಗರು ಲೀಸ್ ತಂಡವು ಆ .27 ರಂದು ಹೊಟೇಲ್ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.

ಈ ದಾಳಿಯ ವೇಳೆ ಪ್ರಕರಣವನ್ನು ದಾಖಲಿಸದೆ ಕರ್ತವ್ಯ ಲೋಪ ಎಸಗಿದ್ದ ಕುಂದಾಪುರ ಅಬಕಾರಿ ನಿರೀಕ್ಷಕಿ ಶುಭದಾ ಸಿ ನಾಯಕ್ ಹಾಗೂ ಉಡುಪಿ ನಿರೀಕ್ಷಕಿ ಜ್ಯೋತಿ ಅವರನ್ನು ಅಮಾನುತಗೊಳಿಸಲಾಗಿದೆ. ಈ ಕುರಿತು ಅಬಕಾರಿ ಡಿವೈಎಸ್ಪಿ ವಿನೋಬ್ ತನಿಖೆ ನಡೆಸಿ ವರದಿ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಜಿಲ್ಲಾಧಿಕಾರಿ ನಾಗೇಶ್ ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.

Comments are closed.