ಕರಾವಳಿ

ಕುಂದೇಶ್ವರದ ಅಶ್ವಥ್ಥ ಮರದ ಕೆಳಗೆ ಫೋಟೋ ಎಸೆಯಬೇಡಿ- ನಿಮ್ಮಲ್ಲಿನ ಹೆಚ್ಚಿನ ಹಣ ಹಾಕಿರಿ..!

Pinterest LinkedIn Tumblr

ಉಡುಪಿ: ಎಲ್ಲೆಲ್ಲೂ ಈಗ ಹಣದ್ದೇ ಮಾತು. ಬ್ಲ್ಯಾಕ್ ಮನಿ. ವೈಟ್ ಮನಿಯದ್ದೇ ಸುದ್ದಿ. ಇದೇ ಹಣದ ವಿಚಾರವನ್ನಿಟ್ಟುಕೊಂಡು ಹಲವು ವರ್ಷಗಳ ಒಂದು ಜಟಿಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟಿದೆ ಇಲ್ಲೊಂದು ಸಂಘಟನೆ. ಆ ಸಂಘವಾದ್ರೂ ಯಾವುದು…? ಅವರು ಮಾಡಿದ್ದಾದರೂ ಏನು ಅನ್ನೋದಕ್ಕೆ ಈ ರಿಪೋರ್ಟ್ ಓದಿ.

kundapura_note_photo-issue-2 kundapura_note_photo-issue-1 kundapura_note_photo-issue-10 kundapura_note_photo-issue-8 kundapura_note_photo-issue-7 kundapura_note_photo-issue-6 kundapura_note_photo-issue-3 kundapura_note_photo-issue-4 kundapura_note_photo-issue-9 kundapura_note_photo-issue-5

ಇದು ಪುರಾಣ ಪ್ರಸಿದ್ದ ಕುಂದಾಪುರದ ಕುಂದೇಶ್ವರ ದೇವಸ್ಥಾನದ ನಾಗಬನ ಹಾಗೂ ಅಶ್ವಥ್ಥಕಟ್ಟೆ. ನಿತ್ಯ ದೇವಳಕ್ಕೆ ಆಗಮಿಸುವ ನೂರಾರು ಜನರು ಇಲ್ಲಿಗೆ ಬಂದು ಕೈಮುಗಿದು, ಮರಕ್ಕೆ ಪ್ರದಕ್ಷಿಣೆ ಹಾಕಿ ಹೋಗುವ ಸಂಪ್ರದಾಯವಿದೆ. ಆದ್ರೇ ಇಲ್ಲೊಂದು ಸಮಸ್ಯೆ ಕಳೆದ ಕೆಲವಾರು ವರ್ಷಗಳಿಂದ ಕಾಡ್ತಿತ್ತು. ಏನು ಅಂತೀರಾ….ಕೆಲವ್ರು ಮನೆಯಲ್ಲಿನ ಕೆಲವು ದೇವರ ಪೋಟೋಗಳು, ವಿಗ್ರಹಗಳನ್ನು ತಂದು ಈ ಅಶ್ವಥ್ಥ ಮರದ ಕೆಳಗೆ ಹಾಕಿ ಹೋಗ್ತಾ ಇದ್ರು. ಇದರಿಂದ ಫೋಟೋ ಗಾಜುಗಳು ಒಡೆದು ಕಾಲಿಗೆ ಚುಚ್ಚಿ ಹಲವರು ಗಾಯಗೊಂಡಿದ್ದು ಮಾತ್ರವಲ್ಲದೇ ಪರಿಸರದ ಸ್ವಚ್ಚತೆಗೂ ಇದು ಕುಂದುಂಟು ಮಾಡಿತ್ತು. ಇಲ್ಲಿ ಫೋಟೋ ಹಾಕದಂತೆ ಹಲವಾರು ಬಾರೀ ಕುಂದೇಶ್ವರ ಫ್ರೆಂಡ್ಸ್ ಸಂಘಟನೆಯವರು ಫೋಟೋ ಹಾಕದಂತೆ ಸೂಚನಾ ಫಲಕಗಳನ್ನು ಹಾಕಿದ್ರೂ ಫೋಟೋ ತಂದು ಹಾಕುವುದು ಮಾತ್ರ ನಿಂತಿರಲಿಲ್ಲ. ಅದಕ್ಕೆ ಐಡಿಯಾ ಮಾಡಿದ ಕುಂದಾಪುರ ಫ್ರೆಂಡ್ಸ್ ಸದಸ್ಯರು ಇಗೊಂದು ವಿಭಿನ್ನ ಬೋರ್ಡ್ ಹಾಕಿದ್ದಾರೆ.

ಫೋಟೋ ಹಾಕದಂತೆ ಹಲವಾರು ಬಾರೀ ಎಚ್ಚರಿಕೆ ನೀಡಿದ್ದಾಯ್ತು, ಸೂಚನ ಫಲಕ ಹಾಕಿದ್ದಾಯ್ತು. ಆದ್ರೇ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಅದಕ್ಕೆ ಇವರು ಒಂದು ಆಲೋಚನೆ ಮಾಡಿದ್ರು. ಹೇಗೂ ಈಗ ಎಲ್ಲೆಡೆ ಹಣದ ವಿಚಾರವೇ ಜಾಸ್ಥಿಯಾ‌ಇದೆ. ಅದೇ ವಿಚಾರವನ್ನಿಟ್ಟುಕೊಂಡು ಒಂದು ಸೂಚನಾ ಫಲಕ ಹಾಕಿದ್ರೇ ಹೇಗೆ ಅನ್ನೋ ಯೋಚನೆ ಮಾಡ್ತಾರೆ. ಇತ್ತ ಕಪ್ಪು ಹಣ ಹೊರಗೆ ಬರಲಿ ಅನ್ನೋದು ಒಂದೆಡೆಯಾದ್ರೇ ಈ ಪರಿಸರಕ್ಕೆ ಫೋಟೋ ಎಸೆಯಬೇಡಿ ಅನ್ನೋ ಪರಿಕಲ್ಪನೆಯಲ್ಲಿ ಒಂದು ಬ್ಯಾನರ್ ಬರೆಸ್ತಾರೆ. ಇಲ್ಲಿ ದೇವರ ಫೋಟೋಗಳನ್ನು ಹಾಗೂ ವಿಗ್ರಹ ಹಾಕಬೇಡಿ…ಹಾಕುವ ಮನಸಿದ್ರೇ ನಿಮ್ಮಲ್ಲಿರುವ ಹೆಚ್ಚಿನ ಹಣವನ್ನು ಚೀಲದಲ್ಲಿ ತುಂಬಿ ಇಲ್ಲಿಗೆ ಹಾಕಿ ಅನ್ನೋ ಬರಹವನ್ನು ಬರೆಸಿದ್ರು…ಅದನ್ನು ನಾಗಬನದ ಎದುರು ಅಳವಡಿಸಿ ಬಿಟ್ರು. ವಿಭಿನ್ನ ಬರಹದ ಈ ಬ್ಯಾನರ್ ಸದ್ಯ ಎಲ್ಲರ ಆಕರ್ಷಣೆಗೂ ಕಾರಣವಾಗಿದೆ.

ಒಟ್ಟಿನಲ್ಲಿ ಕುಂದೇಶ್ವರ ಫ್ರೆಂಡ್ಸ್ ಅವರ ಬ್ಯಾನರ್ ಅಳವಡಿಕೆ ಕಾರ್ಯ ನಿಜಕ್ಕೂ ವಿಭಿನ್ನವಾಗಿದೆ. ಕಪ್ಪು ಹಣ ಹೊರಗೆ ಬರುತ್ತೋ ಬಿಡುತ್ತೋ…ಇಲ್ಲಿ ರಾತ್ರೋರಾತ್ರಿ ತಂದು ಹಾಕುವ ಫೋಟೋಗಳಿಗೆ ಕಡಿವಾಣ ಬೀಳಲಿ ಅನ್ನೋದು ಇವರ ಉದ್ದೇಶ.

—————————————
ವರದಿ- ಯೋಗೀಶ್ ಕುಂಭಾಸಿ

Comments are closed.