ಕರಾವಳಿ

ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಬೇದ ನಿಲ್ಲಿಸಲು ೨ ತಿಂಗಳು ಗಡುವು; ಇಲ್ಲವಾದಲ್ಲಿ ಮಠಕ್ಕೆ ಮುತ್ತಿಗೆ: ಉಡುಪಿಯಲ್ಲಿ ಜಿಗ್ನೇಶ್

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಸ್ವಾಭಿಮಾನಿ ಸಂಘರ್ಷ ಸಮಾವೇಷದಲ್ಲಿ ಮಾತನಾಡಿದ ಜಿಗ್ನೇಶ್ ಮೇವಾನಿ ಗುಜರಾತ್ ಉನಾ ಚಳುವಳಿ ಮುಖಂಡರ ಹೈಲೆಟ್ಸ್ ಇಲ್ಲಿದೆ.

udui_swabhimani_samavesha-5

ದೇಶದಲ್ಲಿ ಗುಜಾರಾತ್ ಮಾಡೆಲ್ ಬಗ್ಗೆ ಚರ್ಚೆಯಾಗುತ್ತಿದೆ, ಆದರೆ ಗುಜರಾತ್ ನ 1590 ಜಾತಿಗಳು ಇನ್ನು ಅಸ್ಪೃಶ್ಯತೆಯನ್ನು ಆಚರಿಸುತ್ತಿದೆ. ಗುಜರಾತಿನಲ್ಲಿ ಇನ್ನು ಮಲ ಹೊರುವ ಪದ್ದತಿ ಚಾಲ್ತಿಯಲ್ಲಿದೆ. ಗುಜರಾತ್ ಮಾಡೆಲ್ ಎನ್ನುವುದು ದಲಿತರ ವಿನಾಶದ ಮಾಡೆಲ್ ಎಂಬುದನ್ನು ಅರ್ಥೈಸಿಕೊಳ್ಳಬೇಕು.

udui_swabhimani_samavesha-1 udui_swabhimani_samavesha-2 udui_swabhimani_samavesha-3 udui_swabhimani_samavesha-4  udui_swabhimani_samavesha-6 udui_swabhimani_samavesha-7 udui_swabhimani_samavesha-8 udui_swabhimani_samavesha-9 udui_swabhimani_samavesha-10 udui_swabhimani_samavesha-11 udui_swabhimani_samavesha-12

ಅಂಬಾನಿ, ಅದಾನಿಗೆ ಬೇಕಾದಷ್ಡು ಜಮೀನು ನೀಡುತ್ತ್ತೀರಿ, ಆದರೆ ದಲಿತರಿಗೆ ಯಾಕೆ ಭೂಮಿ ಕೊಡುತ್ತಿಲ್ಲ. ಹಸುವಿನ ಬಾಲವನ್ನು ನೀವೆ ಇಟ್ಟುಕೊಳ್ಳಿ ದಲಿತರಿಗೆ ಭೂಮಿ ಕೊಡಿ ಇದು ನಮ್ಮ ಹೋರಾಟ ಎಂದ ಜಿಘ್ನೇಷ್ ಕರಾವಳಿಯನ್ನು ಕೋಮವಾದಿಗಳ ಪ್ರಯೋಗ ಶಾಲೆಯನ್ನಾಗಲು ಬಿಡಬೇಡಿ. ಇದನ್ನು ತಡೆಯಲು ಸಿದ್ಧರಾಗಿ. ಪ್ರತಿ ಸಂದರ್ಭದಲ್ಲೂ ಬಲಿಪಶುಗಳಾಗುತ್ತಿರುವುದು ದಲಿತರು. ಮುಂದಿನ ದಿನಗಳಲ್ಲಿ ಉನಾ ಮಾದರಿ ಹೋರಾಟ ಕರ್ನಾಟಕದಲ್ಲಿಯೂ ನಡೆಯಲಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಬೇದ ನಿಲ್ಲಬೇಕು. ಇದಕ್ಕಾಗಿ ಎರಡು ತಿಂಗಳು ಕಾಲಾವಕಾಶ ನೀಡಲಾಗುವುದು. ನಿಷೇಧ ಮಾಡದೆ ಇದ್ದರೆ ಎಲ್ಲರೂ ಒಗ್ಗೂಡಿ ಮಠಕ್ಕೆ ಪ್ರವೇಶ ಮಾಡಲಾಗುವುದು. ಉಡುಪಿಯಲ್ಲಿ ಜಿಗ್ನೇಶ್ ಮೇವಾನಿ ಹೇಳಿಕೆ.

ಈ ಸಂದರ್ಭ ಹಲವು ಪ್ರಗತಿಪರ ಚಿಂತಕರು ಭಾಗಿಯಾಗಿದ್ದರು.

 

Comments are closed.