ಕರಾವಳಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಂಡ ಕುಡಿದು ಅವಂತಾರ ತಂದ ಕೋತಿ ಮಹಾಶಯ.

Pinterest LinkedIn Tumblr

drunk_monkey_pic

ವಿಜಯಪುರ : ಮರದಿಂದ ಮರಕ್ಕೆ ಜಿಗಿದು ಜನರನ್ನು ರಂಜಿಸುವುದು ಕೋತಿಗಳ ಅಲ್ಲಿನ ಜನ್ಮ ಸಿದ್ದ ಹಕ್ಕು. ಅಂಥದ್ರಲ್ಲಿ ಅದೇ ಕೋತಿಗಳು ಹೆಂಡ ಕುಡಿದರೆ ಪರಿಸ್ಥಿತಿ ಹೇಗಿರಬೇಡ! ಹೌದು ವಿಜಯಪುರದಲ್ಲಿ ಹೆಂಡ ಕುಡಿದ ಕೋತಿಗಳು ಮನಬಂದಂತೆ ಕುಣಿದು ಕುಪ್ಪಳಿಸುತ್ತಿವೆ. ಅಷ್ಟಕ್ಕೂ ಮಂಗಗಳ ತುಂಟಾಟ ನಡೆಯುತ್ತಿರುವುದುದು ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ.

ವಿಜಯಪುರ ಡಿಸಿ ಕಚೇರಿ ಹಿಂಭಾಗದ ಪಾರ್ಕಿಂಗ್ ಜಾಗದಲ್ಲಿ ಕೋತಿಗಳದ್ದೇ ದರ್ಬಾರ್. ಕುಡಿದು ಬಿಸಾಡಿದ ಬಾಟೆಲ್ ಹಿಡಿದು ಚೇಷ್ಟೇ ಮಾಡುತ್ತವೆ. ಇನ್ನೂ ಅಲ್ಲಿ ನಿಲ್ಲಿಸಿದ್ದ ಬೈಕ್ ಏರಿ ಪೋಸ್ ಕೊಡುತ್ತವೆ. ಕೇಬಲ್ ವೈರ್’ಗಳಿಗೆ ಜೋತು ಬಿದ್ದು ಸರ್ಕಸ್, ಸ್ಟಂಟ್. ಇನ್ನೂ ಮರಿ ಕೋತಿಗಳು ಕೂಡ ನಾವೇನ್ ಕಮ್ಮಿಯೆಂದು ಅತ್ತಿಂದಿತ್ತ ಜಿಗಿದು ಚೇಷ್ಠೆ ಮಾಡುತ್ತವೆ. ಯಾರಾದರೂ ಹತ್ತಿರ ಬಂದರೆ ಗುರ್ ಎಂದು ಗದರುತ್ತವೆ.

ಅಷ್ಟಕ್ಕೂ ಕೋತಿಗಳ ಸ್ಟಂಟ್ ಈ ಮಟ್ಟದಲ್ಲಿರಲು ಕಾರಣ ಮಧ್ಯದ ನಶೆ. ಡಿಸಿ ಕಚೇರಿ ಆವರಣದಲ್ಲಿ ಇವುಗಳಿಗೆ ನೀರು ಸಿಗುತ್ತಿಲ್ಲ. ಹೀಗಾಗಿ ಅಲ್ಲಿ ಇಲ್ಲಿ ಕಸದ ತೊಟ್ಟಿಯಲ್ಲಿ ಬಿಸಾಡಿದ ಖಾಲಿ ಸ್ಕಾಚ್, ವಿಸ್ಕಿ, ಮಧ್ಯ ಬಾಟಲಿಗಳನ್ನು ಆಯ್ದು ತಂದು ಅಳಿದುಳಿದ ಮದ್ಯ ಹೀರುತ್ತವೆ. ಬಾಯಾರಿಕೆ ಈಡೇರಿಸಿಕೊಳ್ಳಲು ಕುಡಿದ ಈ ಮಧ್ಯ ಕಿಕ್ಕೇರಿಸಿದಾಗ ಕಪಿಗಳ ಚೇಷ್ಟೆ ಜೋರಾಗುತ್ತದೆ.

ಅದೇನೆ ಇರಲಿ, ಟೆನ್ಶನ್ ಬಂದಾಗ ಮದ್ಯದ ದಾಸರಾಗುವ ಜನರನ್ನು ನೋಡಿದ್ದೇವೆ. ಆದರೆ ಇಲ್ಲಿ ನೀರಿಲ್ಲ ಅನ್ನೋ ಕಾರಣಕ್ಕೆ ಕೋತಿಗಳು ಕುಡಿತಕ್ಕೆ ಅಂಟಿಕೊಳ್ಳುತ್ತಿರುವುದು ಬೇಸರದ ಸಂಗತಿ.

Comments are closed.