ಕೆಲ ದಿನಗಳ ಹಿಂದಷ್ಟೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಶಾ ರೆಸ್ಟೋರೆಂಟ್ ಒಂದ್ರಲ್ಲಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ಲು. ಮತ್ತೊಬ್ಬ ಮಗಳು ಮಲಿಯಾ ಧಂ ಹೊಡೆಯುವಾಗ ಸಿಕ್ಕಿಬಿದ್ದಿದ್ಲು.
ಇದೀಗ ಮಲಿಯಾ ಮತ್ತೊಮ್ಮೆ ಒಬಾಮಾಗೆ ಮುಜುಗರ ತರಿಸುವಂಥ ಕೆಲಸ ಮಾಡಿದ್ದಾಳೆ. 18 ವರ್ಷದ ಮಲಿಯಾ ಬೋಸ್ಟನ್ ನಲ್ಲಿ ಕುಟುಂಬದವರ ಜೊತೆ ರಜೆ ಕಳೆಯಲು ಹೋಗಿದ್ಲು. ಈ ವೇಳೆ ವೆಸ್ಟ್ ಟಿಸ್ಬರಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾಳೆ.
ಮ್ಯೂಸಿಕ್, ಡಾನ್ಸ್ ಅಂತಾ ಎಲ್ಲರೂ ಗದ್ದಲ ಎಬ್ಬಿಸಿದ್ದಾರೆ. ಈ ಪಾರ್ಟಿಯ ಗದ್ದಲ ತಾಳಲಾರದೆ ಅಕ್ಕಪಕ್ಕದ ಮನೆಯವರು ಪೊಲೀಸರನ್ನು ಕರೆಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸ್ರು ಒಬಾಮಾ ಪುತ್ರಿ ಮಲಿಯಾ ಸೇರಿದಂತೆ ಪಾರ್ಟಿಯಲ್ಲಿ ಎಂಜಾಯ್ ಮಾಡ್ತಿದ್ದ ಎಲ್ಲರನ್ನೂ ಅಲ್ಲಿಂದ ಹೊರಕ್ಕೆ ಕಳುಹಿಸಿದ್ದಾರೆ.
ಈ ಗದ್ದಲದ ಪಾರ್ಟಿಗೂ ಮುನ್ನ ಸೆಕ್ಸಿ ಡ್ರೆಸ್ ಒಂದ್ರಲ್ಲಿ ಕಾಣಿಸಿಕೊಂಡಿದ್ದ ಒಬಾಮಾ ಪುತ್ರಿ ಮಲಿಯಾ ಇಂಟರ್ನೆಟ್ ನಲ್ಲಿ ಸುದ್ದಿಯಾಗಿದ್ಲು.


Comments are closed.