ಕರಾವಳಿ

ಬ್ರಹ್ಮಾವರದಲ್ಲಿ ವಾಸವಿದ್ದ ಚಿಕ್ಕಮಗಳೂರು ಮೂಲದ ಯುವತಿ ನಾಪತ್ತೆ

Pinterest LinkedIn Tumblr

ಉಡುಪಿ: ಬ್ರಹ್ಮಾವರದಲ್ಲಿ ಮನೆ ಕೆಲಸ ಹಾಗೂ ಅನಾರೋಗ್ಯದ ವ್ಯಕ್ತಿಗಳನ್ನು ನೋಡಿಕೊಳ್ಳುವ ಕೆಲಸ ಮಾಡಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ (ವಿಳಾಸ:NMDC ಕೈಮರ ಅಂಚೆ, ಚಿಕ್ಕಮಗಳೂರು) ಸುಮಾರು 20 ವರ್ಷ ಪ್ರಾಯದ ತಾರಾ ಎಂಬವರು ಫೆಬ್ರವರಿ ತಿಂಗಳಲ್ಲಿ ತನ್ನ ಊರಿಗೆಂದು ಹೋದವರು ಮನೆಗೂ ಹೋಗದೆ, ಕೆಲಸಕ್ಕೂ ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಬ್ರಹ್ಮಾ‌ಔರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Behamavara_Lady_Missing

ಗೋಧೀ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿ, 4 ಅಡಿ 10 ಇಂಚು ಎತ್ತರ ಇದ್ದು, ಕನ್ನಡ ತುಳು ಭಾಷೆ ಬಲ್ಲವರಾಗಿರುತ್ತಾರೆ. ಚೂಡಿದಾರ ಧರಿಸಿರುತ್ತಾರೆ.

ಸದರಿ ಹುಡುಗಿಯ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.