ಮಂಗಳೂರು: ಶಾಲೆಯಲ್ಲಿ ಸ್ವಲ್ಪವೇ ನೀರು ಕುಡಿದು ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಿದ್ದು ನೆನಪಿದೆಯೇ? ಶೇ. 80ರಷ್ಟು ಜನರು ತಮ್ಮ ಶಾಲಾ ದಿನಗಳಲ್ಲಿ ಈ ರೀತಿ ಮಾಡಿರುತ್ತಾರೆ. ಈಗ ಅಂತಾರಾಷ್ಟ್ರೀಯ ಮಾನದಂಡಗಳನ್ನು ಹೊಂದಿದ್ದೇವೆಂದು ಹೇಳಿಕೊಳ್ಳುವ ಹೆಚ್ಚಿನ ಶಾಲೆಗಳಲ್ಲೂ ಪರಿಸ್ಥಿತಿ ಮಕ್ಕಳಿಗೆ ಭಿನ್ನವಾಗೇನೂ ಇಲ್ಲ.
ಶಾಲೆ ಮರು ಆರಂಭವಾಗುವಾಗ, ಮಕ್ಕಳ ನೀರು ಕುಡಿಯುವ ಪ್ರಮಾಣ ಅತ್ಯಂತ ಕಡಿಮೆಯಾಗಿದೆ, ಅದರಲ್ಲೂ ಶಾಲೆ ಸಮಯದಲ್ಲಿ ಮಕ್ಕಳು ತುಂಬಾ ಕಡಿಮೆ ನೀರು ಕುಡಿಯುತ್ತವೆ ಎಂಬುದು ಪಾಲಕರ ದೂರಾಗಿದೆ. ಬಹುತೇಕ ಮಕ್ಕಳು ಶೌಚಾಲಯಕ್ಕೆ ಹೋಗುವುದನ್ನು ಶಾಲಾ ಸಮಯದಲ್ಲಿ ದೂರವಿಡುತ್ತವೆ. ಯಾಕೆಂದರೆ ಸಾಮಾನ್ಯವಾಗಿ ಶಾಲೆಗಳಲ್ಲಿನ ಶುಚಿಯಿಲ್ಲದ ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಲು ಮಕ್ಕಳು ಬಯಸುವುದಿಲ್ಲ. ಅಲ್ಲದೆ ತರಗತಿಯಲ್ಲೇ ಮೂತ್ರ ವಿಸರ್ಜಿಸುವ ಅವಮಾನಕರ ಸಂಗತಿಯೂ ಕೆಲವೊಮ್ಮೆ ನಡೆಯುತ್ತದೆ.
ಶಾಲೆ ಅವಧಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆಹಿಡಿದುಕೊಳ್ಳುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. “ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅವಧಿಯಲ್ಲಿ ಮೂತ್ರನಾಳದಲ್ಲಿ ಸೋಂಕು ಮತ್ತು ಬ್ಯಾಕ್ಟೀರಿಯಾ ಸೋಂಕಿಗೆ ಕಾರಣವಾಗುತ್ತದೆ. ಮೂತ್ರದಲ್ಲಿರುವ ಕೀಟಾಣುಗಳು ತುಂಬಾ ಅವಧಿಯವರೆಗೆ ಮೂತ್ರಕೋಶದಲ್ಲಿ ಕುಳಿತುಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಕಾಲಕ್ರಮಿಸಿದಂತೆ ಈ ಸೋಂಕು ಕಿಡ್ನಿಗೂ ತಲುಪಬಹುದು ಮತ್ತು ಇನ್ನಷ್ಟು ಗಂಭೀರ ಸಮಸ್ಯೆಗೆ ಕಾರಣವಾಗಬಹುದು”
“ಈ ಅಸಹಜ ಕ್ರಿಯೆಯನ್ನು ಸಾಮಾನ್ಯವಾಗಿ “ವಿಸರ್ಜನೆ ಮುಂದೂಡಿಕೆ” ಎಂದು ಕರೆಯಲಾಗುತ್ತದೆ. ಇಂತಹ ಮಕ್ಕಳು ಮಾನಸಿಕ ಸಮಸ್ಯೆ ಅಥವಾ ವರ್ತನಾ ತೊಂದರೆಗಳನ್ನು ಅನುಭವಿಸಬಹುದು. ಈ ವಿಚಾರದಲ್ಲಿ ಇನ್ನೂ ಒಂದು ಅಂಶವಿದ್ದು, ಇದನ್ನು ಅಸಮರ್ಪಕ ವಿಸರ್ಜನೆ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಮಗು ವಿಸರ್ಜನೆಯ ವೇಳೆ ಮೂತ್ರನಾಳದ ಸಂಕೋಚನೆ ಉಂಟಾಗುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಕಿಡ್ನಿಗೆ ಹಾನಿ ಅಥವಾ ಪುನರಾವರ್ತಿತ ಮೂತ್ರಕೋಶದ ನಾಳ ಸೋಂಕು ಉಂಟಾಗುತ್ತದೆ” ಎಂದು ಅವರು ಹೇಳುತ್ತಾರೆ.
ಮಕ್ಕಳಲ್ಲಿ ವಿಸರ್ಜನೆ ಮುಂದೂಡಿಕೆಗೆ ಸಾಮಾನ್ಯ ಪರಿಹಾರವೆಂದರೆ ವರ್ತನೆಯಲ್ಲಿ ತಿದ್ದುಪಡಿ ಮಾಡುವುದಾಗಿದೆ. ಮಕ್ಕಳು ಸಾಮಾನ್ಯವಾಗಿ ಕೊಳಕ ಶೌಚಾಲಯ ಸೇರಿದಂತೆ ವಿವಿಧ ಕಾರಣಗಳಿಗೆ ಮೂತ್ರ ವಿಸರ್ಜನೆಯನ್ನು ದೂರವಿಡುತ್ತವೆ. ಆದಾಗ್ಯೂ, ಕೆಲವು ಪ್ರಕರಣಗಳಲ್ಲಿ ದೈಹಿಕ ಸಮಸ್ಯೆಗಳು, ಮೂತ್ರಕೋಶದ ಸಮಸ್ಯೆ ಅಥವಾ ಮಣಿಕಟ್ಟು ಸಮಸ್ಯೆ ಅಥವಾ ಹುಟ್ಟಿನಿಂದಲೇ ಸಮಸ್ಯೆಗಳೂ ಇರಬಹುದು. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಬೇಗ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.
“ಪ್ರತಿ 2-3 ಗಂಟೆಗಳಿಗೆ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಮೂತ್ರ ವಿಸರ್ಜನೆಗೆ ತೆರಳುವುದಕ್ಕೆ ಪ್ರೋತ್ಸಾಹಿಸಬೇಕು. ಇದರಿಂದ ಆಗಾಗ್ಗೆ ಶೌಚಾಲಯಕ್ಕೆ ತೆರಳುವ ಹವ್ಯಾಸವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ, ಮಗು ಇನ್ನೂ ವಿಸರ್ಜನೆಗೆ ಹೋಗದಿದ್ದರೆ, ವೈದ್ಯರನ್ನು ಕಾಣುವುದು ಉತ್ತಮ. ವರ್ತನೆಯ ಸಮಸ್ಯೆಯ ಹೊರತಾಗಿ ಇತರ ಕಾರಣಗಳೂ ಇರಬಹುದಾಗಿರುತ್ತದೆ.” ಎಂದು ಅವರು ಹೇಳುತ್ತಾರೆ.
“ಹಲವು ಸಂದರ್ಭಗಳಲ್ಲಿ ವಿಸರ್ಜನೆ ಮುಂದೂಡುವಿಕೆಯು ದೀರ್ಘಾವಧಿಯಲ್ಲಿ ಕಿಡ್ನಿ ಸಮಸ್ಯೆಗೂ ಕಾರಣವಾಗಬಹುದಾಗಿದೆ. ಮಗು 5-10 ವರ್ಷಗಳವರೆಗೆ ಮೂತ್ರ ವಿಸರ್ಜನೆಯನ್ನು ತಡೆಹಿಡಿದುಕೊಂಡರೆ, ಮಕ್ಕಳಲ್ಲಿ ದೀರ್ಘಕಾಲದ ಕಿಡ್ನಿ ವೈಪಲ್ಯಕ್ಕೂ ಕಾರಣವಾಗಬಹುದು” ಎಂದು ವೈದ್ಯರು ಹೇಳಿದ್ದಾರೆ.
Comments are closed.