ಮಂಗಳೂರು: ಮಗು ಮಾರಾಟ ಮಾಡುವ ಜಾಲವೊಂದನ್ನು ಪತ್ತೆಹಚ್ಚಿರುವ ಉರ್ವ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಗು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಂಗಳದೇವಿ ಸಮೀಪದ ಮಂಕಿಸ್ಟಾಂಡ್ ನಿವಾಸಿಗಳಾದ ಜಲೀಲ್ (43) ಹಾಗೂ ಆತನ ಪತ್ನಿ ಮೈಮುನಾ ಮತ್ತು ಭದ್ರಾವತಿಯ ರೇಶ್ಮಾ (22) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ರೇಶ್ಮಾಳಿಗೆ ಆರು ತಿಂಗಳ ಹಿಂದೆ ಅರಸೀಕೆರೆಯಲ್ಲಿ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವೊಂದು ಸಿಕ್ಕಿದ್ದು, ಅದನ್ನು ಆರೋಪಿಗಳಾದ ಜಲೀಲ್ ಹಾಗೂ ಆತನ ಪತ್ನಿ ಮೈಮುನಾ ಅವರ ಸಹಾಯದಿಂದ 90 ಸಾವಿರ ರೂ.ಗೆ ಮಾರಾಟ ಮಾಡಲು ನಗರದ ಚಿಲಿಂಬಿ ಕೆನರ ಬ್ಯಾಂಕ್ ಬಳಿ ಮಗು ಹಿಡಿದುಕೊಂಡು ನಿಂತಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೊಪ್ಪಿಸಲಾಗಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಉರ್ವ ನಿರೀಕ್ಷಕರಾದ ರವೀಶ್ ನಾಯ್ಕ್ ಹಾಗೂ ಅವರ ಸಿಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.