
ಮಂಗಳೂರು, ಜು.13: ಮಂಗಳೂರು ಮಹಾನಗರಪಾಲಿಕೆ ಅಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ನಗರಾಭಿವೃದ್ದಿ ಸಚಿವಾಲಯಕ್ಕೆ ವರ್ಗಾವಣೆ ಗೊಂಡಿದ್ದು, ಅವರ ಸ್ಥಾನಕ್ಕೆ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಅವರನ್ನು ನೇಮಕ ಮಾಡಲಾಗಿದೆ.
ಇದುವರೆಗೆ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿದ್ದ ಮುಹಮ್ಮದ್ ನಝೀರ್ ಅವರು ಇಂದು ಮಂಗಳೂರು ಮಹಾನಗರಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮುಹಮ್ಮದ್ ನಜೀರ್ ಅವರು ಬಿಇ (ಸಿವಿಲ್) ಪದವೀಧರರಾಗಿದ್ದು ಕೆಪಿಎಸ್ಸಿ ಮೂಲಕ ಸಾಂಖ್ಯಿಕ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ದ.ಕ ಜಿಲ್ಲಾ ಪಂಚಾಯತ್ ನಲ್ಲಿ ಯೋಜನಾಧಿಕಾರಿಯಾದ ಬಳಿಕ ಮುಡಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
Comments are closed.