
ಮಂಗಳೂರು, ಜುಲೈ.11 : ಹಳೆಯಂಗಡಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಹಾಗೂ ಹಳೆಯಂಗಡಿಯ ನವಮಿ ಫೈನಾನ್ಸ್ ಮಾಲೀಕ ಸನತ್ ಕುಮಾರ್ (28) ಎಂಬವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಳೆಯಂಗಡಿ ಸಮೀಪದ ರಾಮ ನಗರದಲ್ಲಿ ಸೋಮವಾರ ನಡೆದಿದೆ
ಹಣದ ಮುಗ್ಗಟ್ಟು ಎದುರಿಸುತ್ತಿದ್ದರು ಎನ್ನಲಾದ ಸನತ್ ಕುಮಾರ್ ತಮ್ಮ ಪಕ್ಕದ ಮನೆಯದ ಶ್ರೀನಿವಾಸ್ ಭಟ್ ಎಂಬುವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಹೊರಗಡೆ ತೆರಳುವಾಗ ಒಂದು ಕೀಯನ್ನು ಸನತ್ ಕುಮಾರ್ ಅವರ ಮನೆಯಲ್ಲಿ ನೀಡಿ ತೆರಳುತ್ತಿದ್ದರು. ಇಂದು ಮಧ್ಯಾಹ್ನದವರೆಗೆ ಫೈನಾನ್ಸ್‌ನಲ್ಲೇ ಇದ್ದ ಸನತ್ ತಮ್ಮ ಮನೆಗೆ ಬಂದಿದ್ದು, ಬಳಿಕ ಪಕ್ಕದ ಮನೆಯ ಕೀ ತೆಗೆದುಕೊಂಡು ಮನೆಗೆ ತೆರಳಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಇವರು ಹಳೆಯಂಗಡಿ ಪೇಟೆಯಲ್ಲಿ ನವಮಿ ಎಂಬ ಫೈನಾನ್ಸ್ ನಡೆಸುತ್ತಿದ್ದರು. ಎಂದಿನಂತೆಯೇ ಇಂದು ಮಧ್ಯಾಹ್ನದ ವರೆಗೂ ಫೈನಾನ್ಸ್ ನಲ್ಲಿ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಧ್ಯಾಹ್ನದ ಬಳಿಕ ತನ್ನ ನೆರೆಮನೆಯ ಶ್ರೀನಿವಾಸ್ ಭಟ್ ಎಂಬವರ ಮನೆಯ ದೇವರ ಕೋಣೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ನನ್ನ ಮನೆಯವರಿಗೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಶ್ರೀನಿವಾಸ ಭಟ್ ಅವರ ಮನೆಯವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆನ್ನಲಾಗಿದೆ.
ಶ್ರೀನಿವಾಸ್ ಭಟ್ ಅವರ ಮನೆಯ ಒಂದು ಕೀ ನೆರೆಮನೆಯ ಸನತ್ ಕುಮಾರ್ ಅವರ ಮನೆಯಲ್ಲಿ ಇರಿಸುತ್ತಿದ್ದರು. ಅದನ್ನು ಉಪಯೋಗಿಸಿಕೊಂಡು ನೆರೆಮನೆಯ ಬಾಗಿಲು ತೆರೆದು ಫ್ಯಾನ್ ಗೆ ನೈಲನ್ ರೋಪ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶ್ರೀನಿವಾಸ್ ಭಟ್ ಅವರ ಪತ್ನಿ ಆಶಾ ಸಂಜೆ 4:20 ಸುಮಾರಿಗೆ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಯ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮುಲ್ಕಿ ಪೊಲೀಸರು ಸ್ಥಳ ಪರಿಶೀಲಿಸಿ ಶವ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮುಲ್ಕಿ ಸಮುದಾಯ ಆರೋಗ್ಯ ಕೆಂದ್ರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Comments are closed.