ಕರಾವಳಿ

ಎಂ.ಕೆ. ಗಣಪತಿ ಆತ್ಮಹತ್ಯೆ ಹಿನ್ನೆಲೆ: ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಹಾಗೂ ಐಜಿಪಿ ಹೇಮಂತ ನಿಂಬಾಳಕರ್ ಮಂಗಳೂರಿನಲ್ಲಿ ಪರಿಶೀಲನೆ

Pinterest LinkedIn Tumblr

Adjp_visit_mlr_1

ಮಂಗಳೂರು : ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ಡಿವೈಎಸ್‌ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಹಸ್ತಾಂತರಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದ ಸಿಐಡಿ ತಂಡ ಶನಿವಾರ ಸಂಜೆ ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಆಗಮಿಸಿದೆ.

ಐಜಿಪಿ ಕಚೇರಿಯಲ್ಲಿ ಇರುವ ಡಿವೈಎಸ್‌ಪಿ ಎಂ.ಕೆ. ಗಣಪತಿ ಕಚೇರಿಯ ಎಲ್ಲ ಕೋಣೆಗಳನ್ನು ಪ್ರತಾಪ್ ರೆಡ್ಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆಯ ಬಳಿಕ ಅವರ ಕಚೇರಿಗೆ ಬೀಗಮುದ್ರೆ ಹಾಕಲಾಗಿತ್ತು. ಅದನ್ನು ಪ್ರತಾಪ್ ರೆಡ್ಡಿ ಪರಿಶೀಲನೆ ವೇಳೆ ಶನಿವಾರ ತೆರೆಯಲಾಯಿತು. ಪರಿಶೀಲನೆ ವೇಳೆ ಪ್ರತಾಪ್ ರೆಡ್ಡಿ ಭೇಟಿ ನೀಡಿ ಅವರು ಕೆಲವೊಂದು ಕಡತಗಳನ್ನು ಕೂಡ ನೋಡಿದ್ದು, ಯಾವುದೇ ಮಹತ್ವದ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

Adjp_visit_mlr_2 Adjp_visit_mlr_3 Adjp_visit_mlr_4 Adjp_visit_mlr_5 Adjp_visit_mlr_6 Adjp_visit_mlr_7 Adjp_visit_mlr_8 Adjp_visit_mlr_9 Adjp_visit_mlr_10 Adjp_visit_mlr_11

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಡಿಜಿಪಿ ಪ್ರತಾಪ್ ರೆಡ್ಡಿ , ಎಂ.ಕೆ.ಗಣಪತಿ ಅವರು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಲು ಮಂಗಳೂರಿಗೆ ಆಗಮಿಸಿರುವುದಾಗಿ ತಿಳಿಸಿದರು.

ಸರಕಾರ ಪ್ರಕರಣವನ್ನು ಸಿಐಡಿ ವಹಿಸಿದ್ದರಿಂದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರತಿಯೊಂದನ್ನೂ ಪರಿಶೀಲಿಸುತ್ತಿದ್ದೇವೆ. ಆತ್ಯಹತ್ಯೆಗೆ ಸಂಬಂಧಿಸಿ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದರು.ಈ ಪ್ರಕರಣದ ಸಂಪೂರ್ಣ ತನಿಖೆಯ ನಂತರ ಗೃಹ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಆಘಾತದಿಂದ ಹೊರಬಂದ ಬಳಿಕ ಎಂ.ಕೆ. ಗಣಪತಿ ಕುಟುಂಬದ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಐಜಿಪಿ ಹೇಮಂತ ನಿಂಬಾಳಕರ್ ಭೇಟಿ :

ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಭೇಟಿ ನೀಡಿದ ಸ್ವಲ್ಪ ಹೊತ್ತಿನಲ್ಲೇ ಐಜಿಪಿ ಹೇಮಂತ ನಿಂಬಾಳಕರ್ ಐಜಿ ಕಚೇರಿಗೆ ಭೇಟಿ ನೀಡಿದರು.

Comments are closed.