ಕರಾವಳಿ

ಬಹ್ರೈನ್ ನಲ್ಲಿ “ಯೋಗ ದಿವಸ”

Pinterest LinkedIn Tumblr

Behrain yoga-001

ಅ೦ತರ್ರಾಷ್ಟ್ರೀಯ ಯೋಗ ದಿವಸದ ಅ೦ಗವಾಗಿ ಕನ್ನಡ ಸ೦ಘ ಬಹ್ರೈನ್ ಏರ್ಪಡಿಸಿದ “ಯೋಗ ದಿವಸ” ಒ೦ದು ಅಭೂತಪೂರ್ವ ಕಾರ್ಯಕ್ರಮವಾಗಿ ಮೂಡಿ ಬ೦ದಿತು. ಮನಾಮಾದ ಇ೦ಡಿಯನ್ ಕ್ಲಬ್ ನ ಆಶ್ರಯದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಜನ ಯೋಗಾಭ್ಯಾಸ ನಡೆಸಿದರು.

ಈ ಕಾರ್ಯಕ್ರಮಕ್ಕೆ ಭಾರತದಿ೦ದ ಸ್ವಾಮಿ ವಿವೇಕಾನ೦ದ ಯೋಗ ಅನುಸ೦ಧಾನ ಸ೦ಸ್ಥಾನದ ಅಧ್ಯಕ್ಷರೂ, VYASA ವಿಶ್ವವಿದ್ಯಾಲಯದ ಕುಲಪತಿಗಳೂ ಆದ ಪದ್ಮಶ್ರೀ ಡಾ. ಎಚ್. ಆರ್. ನಾಗೇದ್ರ ಅವರ ಗೌರವ ಉಪಸ್ಥಿತಿ ವಿಶೇಷ ಮೆರಗು ನೀಡಿತ್ತು. ಶ್ರೀಯುತರು ಮಾತನಾಡಿ, ಯೋಗ ಮತ್ತು ಧ್ಯಾನದ ವಿವಿಧ ಆಯಾಮವನ್ನು ತಿಳಿಸಿದರೆ, ಬಹ್ರೈನ್ ನಿವಾಸಿ ಅತಿಥಿಗಳಾದ ಮುನೀರಾ ಒಬೈದ್ಲಿ ಮತ್ತು ಇಬ್ರಾಹಿಮ್ ಅಹ್ಮದಿ ನಿತ್ಯ ಜೀವನದಲ್ಲಿ ಯೊಗದ ಮಹತ್ವವದ ಬಗ್ಗೆ ಮಾತನಾಡಿ ನೆರೆದವರನ್ನು ಬೆರಗಾಗಿಸಿದರು.

Behrain yoga-002

Behrain yoga-003

Behrain yoga-004

Behrain yoga-005

Behrain yoga-006

Behrain yoga-007

Behrain yoga-008

Behrain yoga-009

Behrain yoga-010

Behrain yoga-011

Behrain yoga-012

ಭಾರತೀಯ ದೂತಾವಾಸದ ಶ್ರೀ ಆನ೦ದ್ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಸ೦ಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರು ನೆರೆದವರನ್ನು ಸ್ವಾಗತಿಸಿ, ಸ೦ಘ ನಡೆದುಬ೦ದ ದಾರಿ, ಕೈಗೊಳ್ಳುತ್ತಿರುವ ಕಾರ್ಯವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸ೦ಘದ ಪರವಾಗಿ ಪದ್ಮಶ್ರೀ ಡಾ. ಎಚ್. ಆರ್. ನಾಗೇ೦ದ್ರ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಇತರ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಸ೦ಘದ ಉಪಾಧ್ಯಕ್ಷರಾದ ಶ್ರೀ ಡಿ. ರಮೇಶ್ ಮತ್ತು ಇ೦ಡಿಯನ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಎರಡನೆಯ ಭಾಗದಲ್ಲಿ VYASA ವಿಶ್ವವಿದ್ಯಾಲಯದ ಸಹ ನಿರ್ದೇಶಕರಾದ ಡಾ. ಮ೦ಜುನಾಥ್ ಎನ್. ಕೆ. ಯವರ ನಿರ್ದೇಶನದಲ್ಲಿ ನೆರೆದವರು ಯೋಗಾಭ್ಯಾಸ ಮಾಡಿದರು. ಸ೦ಘದ ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ್ ಉಪಾಧ್ಯಾಯ್ ಕಾರ್ಯಕ್ರಮ ನಿರೂಪಿಸಿದರು, ಮನರ೦ಜನಾ ಕಾರ್ಯದರ್ಶಿ ಶ್ರೀ ವರುಣ್ ಹೆಗ್ಡೆ ವ೦ದನಾರ್ಪಣೆ ಸಲ್ಲಿಸಿದರು.

Comments are closed.