ಉಡುಪಿ: ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ, ಕಡಲಿನಲ್ಲಿ ಅಲೆಗಳ ಅಬ್ಬರವೂ ಜೋರಾಗಿದೆ. ಇದರ ಪರಿಣಾಮ ಅನೇಕ ಕಡೆಗಳಲ್ಲಿ ಕಡಲಕೊರೆತದ ಭೀತಿ ಎದುರಾಗಿದ್ದು ಜನ ಆತಂಕದಲ್ಲಿದ್ದಾರೆ.

ಕಡಲಿನಲ್ಲಿ ಅಲೆಗಳ ಭೋರ್ಗೆರೆತ ಹೆಚ್ಚಾಗುತ್ತಿದೆ. ಕಡಲ ತಡಿಯ ಜನರು ಅಲೆಗಳ ಅಬ್ಬರದಿಂದ ನಿದ್ರೆ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಹೌದು ಪ್ರತೀ ವರ್ಷದಂತೆ ಈ ವರ್ಷವೂ ಕಡಲ ಅಬ್ಬರಕ್ಕೆ ಕಡಲಕೊರೆತ ಉಂತಾಗಿದ್ದು ರಸ್ತೆಯನ್ನು ದಾಟಿ ಮನೆಗೆ ನೀರು ನುಗ್ಗುತ್ತಿದೆ. ಪಡುಕೆರೆಯಲ್ಲಿ ಈಗಾಗಲೇ ಕಡಲ ಅಬ್ಬರ ಹೆಚ್ಚಾಗಿದ್ದು ಮೀನುಗಾರಿಕಾ ರಸ್ತೆ, ಭಜನಾ ಮಂದಿರ ಅಪಾಯದಲ್ಲಿದೆ. ಮಾತ್ರ ಅಲ್ಲ ಅನೇಕ ಮನೆಗಳು ಅಪಾಯದ ಭೀತಿ ಎದುರಿಸುತ್ತಿದೆ. ಕಡಲ ಅಲೆಗಳ ನೀರು ಈಗಾಗಲೇ ರಸ್ತೆ ದಾಟಿ ಬರುತ್ತಿದ್ದು ಯಾವಾಗ ಅಪಾಯ ಎದುರಾಗುತ್ತೆ ಅಂತ ಮನೆಯವರು ಆತಂಕದಲ್ಲೇ ದಿನ ಕಳೆಯಬೇಕಾಗಿದೆ. ಈ ಬಾರಿ ಮಳೆ ಹೆಚ್ಚಿದೆ ಎಂಬ ಕಾರಣಕ್ಕೆ ಮತ್ತಷ್ಟು ಆತಂಕ ಮನೆಮಂದಿಯನ್ನು ಆವರಿಸುತ್ತಿದೆ.
ಕಡಲಕೊರೆತಕ್ಕೆ ಎಷ್ಟೇ ಸರಕಾರ ಬದಲಾದರೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂಬ ದೂರು ಕಡಲ ತಡಿಯ ಜನರದ್ದು. ಮಾತ್ರವಲ್ಲದೇ ಕಡಲಕೊರೆತಕ್ಕೆ ಮಾಡುವ ತುರ್ತು ಪರಿಹಾರ ಅಂದರೆ ಕಲ್ಲುಗಳನ್ನು ಹಾಕುವುದು ಕೂಡಾ ಅವೈಜ್ಞಾನಿಕವಾಗಿದ್ದು ಕಲ್ಲುಗಳು ಕಡಲಪಾಲಾಗುತ್ತಿದೆ. ಕಡಲು ಪ್ರತೀ ವರ್ಷ ಮುನ್ನುಗ್ಗಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇಲ್ಲಿರುವ ಮನೆಗಳೇ ಮಾಯವಾದರೂ ಆಶ್ಚರ್ಯ ಇಲ್ಲ. ಈ ಬಾರಿ ಕಡಲಕೊರೆತವನ್ನು ತಡೆಗಟ್ಟಲು ೫ ಕೋಟಿ ರೂ ಪ್ರಸ್ತಾಪವನ್ನು ಸರಕಾರದ ಮುಂದಿಟ್ಟಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
ಈಗಾಗಲೇ ಕೆಲವು ಕಡೆಗಳಲ್ಲಿ ಕಡಲಕೊರೆತ ತೀವ್ರವಾಗಿ ಉಂಟಾಗಿದ್ದು ಶೀಘ್ರದಲ್ಲಿ ಗಮನ ಹರಿಸಬೇಕಾಗಿದೆ.
Comments are closed.