ಕರಾವಳಿ

ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟ್ರೀಯ ಸಮಿತಿ ವತಿಯಿಂದ ನಡೆದ ಬ್ರಹತ್ ಇಪ್ತಾರ್ ಸಂಗಮ

Pinterest LinkedIn Tumblr

IMG_2483

ದುಬೈ:- ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ)ಮಂಗಳೂರು ಯು.ಎ.ಇ ರಾಷ್ಟ್ರೀಯ ಸಮಿತಿ ವತಿಯಿಂದ ಬ್ರಹತ್ ಇಫ್ತಾರ್ ಕೂಟವೂ ಇತ್ತೀಚೆಗೆ ಬಾರ್ ದುಬೈ ಮುಸಲ್ಲ ಟವರ್ ನಲ್ಲಿ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ಪವಿತ್ರ ರಂಝಾನಿನಲ್ಲಿ ಬಾರಿ ಮಟ್ಟದ ಬ್ರಹತ್ ಇಫ್ತಾರ್ ಕೂಟವನ್ನು ಡಿ.ಕೆ.ಎಸ್.ಸಿ ಆಯೋಜಿಸುತ್ತಾ ಬರುತ್ತಿದೆ ಈ ಬಾರಿ ನಡೆದ ಕಾರ್ಯಕ್ರಮದಲ್ಲಿ ಯು.ಎ.ಇ ಯ ವಿವಿಧ ಕಡೆಗಳಿಂದ ಮಹಿಳೆಯರು ಮಕ್ಕಳೂ ಸೇರಿದಂತೆ ಸುಮಾರು ಒಂಬೈನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

IMG_2497

IMG_2498

IMG_2500

IMG_2503

IMG_2505

IMG_2506

IMG_2512

ಇಫ್ತಾರ್ ನ ಸಭಾ ಕಾರ್ಯಕ್ರಮದಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಅಧ್ಯಕ್ಷರಾದ ಹುಸೈನ್ ಹಾಜಿ ಕಿನ್ಯರವರು ಅಧ್ಯಕ್ಷತೆ ವಹಿಸಿದರು. ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಫಾಕಿ ತಂಙಳ್ ದುವಾ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಿ.ಕೆ.ಎಸ್.ಸಿ. ಸಂಘಟನೆಯ ಅಧೀನ ಸಂಸ್ಥೆ ಯಾದ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೂಳೂರು ಇದರ ಜನರಲ್ ಮ್ಯಾನೇಜರ್ ಆದ ಮೌಲಾನ ಹಾಜಿ ಮುಸ್ತಫಾ ಸಅದಿಯವರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಕುಟುಂಬದ ಪಾಲನೆಗಾಗಿ ದುಡಿಯಲು ಬಂದು ಕೇವಲ ತಮ್ಮ ದುಡಿಮೆ ಕುಟುಂಬಕ್ಕೆ ಮೀಸಲಿಡದೆ ತಮ್ಮ ಸಮುದಾಯಕ್ಕೆ ಕಿರು ಸೇವೆಗೈಯಲು ಡಿ.ಕೆ.ಎಸ್.ಸಿ. ಎಂಬ ಸಂಘಟನೆಯನ್ನು ರೂಪಿಗರಿಸಿ ಪ್ರಸ್ತುತ ಸಂಘಟಕರಾದ ತಮ್ಮೆಲ್ಲರ ಅವಿರತ ಪರಿಶ್ರಮದಂದ ನಡೆಯುತ್ತಿರುವ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಮೂಳೂರು ಇದರ ಶೈಕ್ಷಣಿಕ ಹಾಗೂ ಧರ್ಮ ಜಾಗ್ರತಿಯ ಚಟುವಟಿಕೆಗಳ ಬಗ್ಗೆ ಹಾಗೂ ಡಿ.ಕೆ.ಎಸ್.ಸಿ. ಎಂಬ ಸಂಘಟನೆ ಹಾಗೂ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಗೆ ನೇತೃತ್ವವನ್ನು ನೀಡುತ್ತಿರುವ ಅಧ್ಯಕ್ಷರಾದ ಸಯ್ಯದ್.ಕೆ.ಎಸ್.ಆಟಕ್ಕೋಯ ತಂಙಳ್ ರವರು ಹಾಗೂ ಕುಂಬೋಲ್ ಸಾದಾತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸುತ್ತಾ ಡಿ.ಕೆ.ಎಸ್.ಸಿ ಯ ವಿವಿಧ ಯೋಜನೆಗಳಿಗೆ ಎಲ್ಲರೂ ಕೈ ಜೋಡಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಮೌಲಾನ ಹಾಜಿ ಮುಸ್ತಫಾ ಸಅದಿಯವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟ್ರೀಯ ಸಮಿತಿಯ ಸಲಹೆಗಾರರಾದಂತಹ ಜನಾಬ್ ಮೊಯಿದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಸಯ್ಯದ್ ಆಸ್ಕರ್ ಅಲಿ ತಂಙಳ್ ಕೋಲ್ಪೆ, ಜನಾಬ್ ಇಬ್ರಾಹಿಂ ಸಖಾಫಿ ಕೆದಂಬಾಡಿ, ಜನಾಬ್ ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು, ಜನಾಬ್ ಅಬೂಬಕ್ಕರ್ ಮದನಿ ಕೆಮ್ಮಾರ ಹಾಗೂ ಹಿತೈಷಿಗಳಾದ ಜನಾಬ್. ಹಾಜಿ ಅಬ್ದುಲ್ ರಜಾಕ್ (ದೀವಾ), ಜನಾಬ್ ಅಝೀಮ್ ಉಚ್ಚಿಲ, ಜನಾಬ್.ಎ.ಕೆ.ಸುಲೈಮಾನ್ ಹಾಜಿ ಉಚ್ಚಿಲ, ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಜನಾಬ್ ಎಂ.ಇ ಮೂಳೂರು, ಜನಾಬ್ ಲತೀಫ್ ಮುಲ್ಕಿ ಉಪಸ್ಥಿತರಿದ್ದರು. ಅಲ್ಲದೆ ಕಾರ್ಯಕ್ರಮದಲ್ಲಿ ಯು.ಎ.ಇ. ಯ ವಿವಿಧ ಸಂಘಟನೆ ಗಳ ಪದಾಧಿಕಾರಿಗಳು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಡಿ.ಕೆ.ಎಸ್.ಸಿ ಇಫ್ತಾರ್ ಕೂಟ ಚೇರ್ ಮೇನ್ ಜನಾಬ್ ನವಾಝ್ ಕೋಟೆಕ್ಕಾರ್ ರವರ ಮುಂದಾಳುತ್ವದ ಸಮಿತಿ ಹಾಗೂ ಡಿ.ಕೆ.ಎಸ್.ಸಿ. ರಾಷ್ಟ್ರೀಯ ಸಮಿತಿ ಹಾಗೂ ಯುನಿಟ್ ಪದಾಧಿಕಾರಿಗಳು ಇಪ್ತಾರ್ ಕೂಟಕ್ಕೆ ಆಗಮಿಸಿದ ಪ್ರತಿಯೊಬ್ಬರನ್ನು ಆದರದಿಂದ ಸ್ವೀಕರಿಸಿ ಸುಸಜ್ಜಿತವಾಗಿ ಕಾರ್ಯಕ್ರಮವು ನಡೆಯಲು ಸ್ವಯಂ ಸೇವಕರಾಗಿ ಶ್ರಮಿಸಿದರು.

ಕಾರ್ಯಕ್ರಮಕ್ಕೆ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಇಕ್ಬಾಲ್ ಕಣ್ಣಂಗಾರ್ ಸ್ವಾಗತಿಸಿ ಇಫ್ತಾರ್ ಚೇರ್ ಮೇನ್ ಜನಾಬ್ ನವಾಝ್ ಕೋಟೆಕ್ಕಾರ್ ವಂದನಾರ್ಪಣೆ ಗೈದರು, ಜನಾಬ್ ಯೂಸುಫ್ ಆರ್ಲಪದವು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಯೂಸುಫ್ ಆರ್ಲಪದವು

Comments are closed.