ಉಡುಪಿ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಉಡುಪಿಯ ತಮ್ಮ ಉಚ್ಚಿಲದ ಮನೆಗೆ ಭಾನುವಾರ ತಡರಾತ್ರಿ ಬಂದಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಅನುಪಮಾ ಮನಬಿಚ್ಚಿ ಮಾತನಾಡಿದ್ದಾರೆ. ಪರಮೇಶ್ವರ್ ನಾಯ್ಕ್ ನನ್ನ ಗುರಿಯಲ್ಲ. ಅವರ ಜೊತೆ ಇನ್ನಷ್ಟು ಪ್ರಭಾವಿಗಳು ನನ್ನ ರಾಜೀನಾಮೆಗೆ ಕಾರಣವಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಎಲ್ಲಾ ವಿವರಗಳನ್ನು ದಾಖಲಿಸಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವುದಾಗಿಯೂ ಹೇಳಿದ್ದಾರೆ.

ರಾಜೀನಾಮೆ ಅಂಗೀಕಾರದ ಬಳಿಕ ಬಳ್ಳಾರಿಯಲ್ಲೇ ತಂಗಿದ್ದ ಅನುಪಮಾ ಉಡುಪಿಯ ಉಚ್ಚಿಲದಲ್ಲಿರುವ ತನ್ನ ನಿವಾಸಕ್ಕೆ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮನಬಿಚ್ಚಿ ಮಾತ್ನಾಡಿದ್ದಾರೆ.
ನನ್ನ ರಾಜಿನಾಮೆಗೆ ಪರಮೇಶ್ವರ್ ನಾಯ್ಕ್ ನೆಪ ಮಾತ್ರ. ಅವರು ಅಂತಹಾ ಕೆಟ್ಟ ವ್ಯಕ್ತಿ ಅಲ್ಲ ಎಂದು ನಾಯ್ಕ್ ರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಬಗ್ಗೆ ಅನುಪಮಾ ವ್ಯಂಗ್ಯವಾಡಿದ್ದಾರೆ.ಮಾತ್ರವಲ್ಲ ನನ್ನ ರಾಜೀನಾಮೆಯಲ್ಲಿ ಇನ್ನಷ್ಟು ಪ್ರಭಾವಿಗಳ ಕವಾಡವಿದೆ.ನೀತಿ ಸಂಹಿತೆ ಮೀರಿ ಅಂದು ನನ್ನನ್ನು ಒ ಒ ಡಿ ಮೇಲೆ ಕಳುಹಿಸಿದ್ದರು.ಇದರ ಇದರ ಹಿಂದಿರುವವರು ಯಾರು? ಡಿಜಿಪಿಯವರೇ ಈ ಪ್ರಶ್ನೆಗೆ ಉತ್ತರಿಸಬೇಕು ಎಂದು ಡಿಜಿಪಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಎಲ್ಲಾ ವಿಚಾರಗಳ ಬಗ್ಗೆ ಸವಿವರವಾಗಿ ಮಹಿಳಾ ಅಯೋಗಕ್ಕೆ ಪತ್ರ ಬರೆದಿದ್ದೇನೆ. ಈ ಪ್ರಭಾವಿಗಳ ಹೆಸರು ಅದರಲ್ಲಿದೆ. ಪರಮೇಶ್ವರ ನಾಯ್ಕ್ ಗೆ ಆದ ಶಿಕ್ಷೆ ಆ ವ್ಯಕ್ತಿಗೂ ಆಗಬೇಕು . ಈ ಬಗ್ಗೆ ಹೆಚ್ಚೇನು ಹೇಳಲ್ಲ ಎಂದಿದ್ದಾರೆ.
ರಾಜೀನಾಮೆ ನಂತರ ಪೊಲೀಸರು ನನ್ನ ಮನೆಯವರಿಗೆ ಕಿರುಕುಳ ನೀಡಿದ್ದಾರೆ. ಮಾಜಿ ಮಹಿಳಾ ಅಧಿಕಾರಿಯನ್ನು ಎದುರಿಸುವ ಧೈರ್ಯ ಇಲ್ಲವೇ ಎಂದು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ಅಪಡೇಟ್ ಗಳ ಬಗ್ಗೆ ಗೊಂದಲಕಾರಿ ಹೇಳಿಕೆಯನ್ನು ಮುಂದುವರಿಸಿದ ಶೆಣೈ ಈ ಅಕೌಂಟ್ ನನ್ನದಲ್ಲ. ಇಲಾಖೆ ಮಾಡಿದಷ್ಟು ತೇಜೋವದೆ ಫೇಸ್ ಬುಕ್ ಮಾಡಿಲ್ಲ. ಆದರೆ ಅಲ್ಲಿ ಬರುತ್ತಿರುವ ವಿಷಯಗಳು ಸರಿಯಾಗಿಯೇ ಇವೆ.
ಪೊಲೀಸ್ ಅನ್ನೋದು ನನ್ನ ಕನಸಾಗಿತ್ತು. ಆದರೆ ವ್ಯವಸ್ಥೆ ನನಗೆ ಕೆಲಸ ಮಾಡಲು ಬಿಟ್ಟಿಲ್ಲ. ಉಪನ್ಯಾಸಕಿ ಅಥವಾ ಎನ್ ಜಿಒ ಮೂಲಕ ಸಮಾಜಸೇವೆ ಮಾಡುತ್ತೇನೆ. ರಾಜಕೀಯ ಸೇರಲ್ಲ ಅಂತ ಸ್ಪಷ್ಟಪಡಿಸಿದರು.
Comments are closed.