ಕರಾವಳಿ

ಅನುಪಮಾಗೆ ಬೆದರಿಕೆ ಇದೆ, ರಕ್ಷಣೆ ಬೇಕು; ಆಕೆ ರಾಜಕೀಯಕ್ಕೆ ಬರೊಲ್ಲ: ಉಡುಪಿಯಲ್ಲಿ ಅನುಪಮಾ ತಾಯಿ ಹೇಳಿಕೆ

Pinterest LinkedIn Tumblr

ಉಡುಪಿ: ಅನುಪಮಾ ಶೆಣೈ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸರಕಾರ ತಪ್ಪು ಮಾಡಿದೆ. ಸರಕಾರ ಮನವೊಲಿಸುತ್ತಿದ್ದರೆ ಅನುಪಮಾ ರಾಜೀನಾಮೆ ನೀಡುತ್ತಿರಲಿಲ್ಲ. ಇದೀಗ ಅನುಪಮಾಗೆ ಬೆದರಿಕೆ ಇದ್ದು ಆಕೆಗೆ ರಕ್ಷಣೆ ಬೇಕಾಗಿದೆ ಎಂದು ಅನುಪಮಾ ಶೆಣೈ ತಾಯಿ ನಳಿನಿ ಶೆಣೈ ತಿಳಿಸಿದ್ದಾರೆ.

anupama11111111

ಉಚ್ಚಿಲದಲ್ಲಿರುವ ತನ್ನ ನಿವಾಸದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ನಳಿನಿ ಶೆಣೈ , ಅನುಪಮಾ ಶೆಣೈ ರಾಜೀನಾಮೆ ವಿಚಾರದಲ್ಲಿ ಹಾಗೂ ಸರಕಾರ ನಡೆದುಕೊಂಡ ರೀತಿಯ ಬಗ್ಗೆ ಕಣ್ಣೀರು ಹಾಕಿದರು. ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸರಕಾರ ನಡೆದುಕೊಂಡ ರೀತಿ ಸರಿ ಇಲ್ಲ. ಸಮನ್ಸ್ ನೀಡದೇ ರಾಜೀನಾಮೆ ಅಂಗೀಕಾರ ಮಾಡಲಾಗಿದೆ. ಆಕೆಯ ಮನವೊಲಿಸುತ್ತಿದ್ದರೆ ರಾಜೀನಾಮೆ ನೀಡುತ್ತಿರಲಿಲ್ಲ. ಆಕೆ ಜೊತೆಗೆ ಇದ್ದಾಗ ಆಕೆಗೆ ರಾತ್ರಿ ಇಡೀ ಫೋನ್ ಮೂಲಕ ಬೆದರಿಕೆ ಹಾಕಲಾಗುತ್ತಿತ್ತು. ವರ್ಗಾವಣೆ ಮಾಡುವುದಲ್ಲ ನಿನ್ನನ್ನು ಕೆಲಸದಿಂದಲೇ ತೆಗಿಸುತ್ತೇನೆ ಎಂದು ಪರಮೇಶ್ವರ್ ನಾಯ್ಕ್ ಬೆದರಿಕೆ ಹಾಕುತ್ತಿದ್ದರು ಮಾತ್ರವಲ್ಲದೇ ಚಾಲೆಂಜ್ ಮಾಡಿದ್ದರು. ಅಲ್ಲದೇ ಅನೇಕ ಬೆದರಿಕೆ ಕರೆಗಳು ಬರುತ್ತಿದ್ದವು ಆಕೆ ಕಣ್ಣೀರು ಹಾಕುತ್ತಿದ್ದಳು, ನಾನು ಸಮಾಧಾನ ಪಡಿಸುತ್ತಿದ್ದೆ. ಆಕೆಯ ರಾಜೀನಾಮೆ ಅಂಗೀಕಾರದ ಮೊದಲು ಯಾವುದಾರರೂ ಕಡೆ ಅಥಾವಾ ತನ್ನ ಊರಿಗೆ ವರ್ಗಾವಣೆ ಮಾಡಬಹುದಿತ್ತು.

ಅನುಪಮಾಗೆ ಬೆದರಿಕೆ ಇದ್ದು ಆಕೆಗೆ ರಕ್ಷಣೆ ಬೇಕಾಗಿದೆ. ಆಕೆ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದ ಅವರು ಫೇಸ್ ಬುಕ್ ಅಪಡೇಟ್ ವಿಚಾರದ ಬಗ್ಗೆ ಮಾತನಾಡಿದ ನಳಿನಿ ಶೆಣೈ ಫೇಸ್ ಬುಕ್ ಆಕೆಯೇ ಅಪ್ ಡೇಟ್ ಮಾಡಿದ್ದ ಬಗ್ಗೆ ಸಂಶಯ ಇದೆ. ಆಕೆ ಹಾಗೆ ಮಾಡುವುದಿಲ್ಲ ಎಂದರು.

Comments are closed.