ಕರಾವಳಿ

ಕೋಟ ಎಸ್.ಐ. ಕಬ್ಬಾಳ್ ರಾಜ್ ರಾಜಿನಾಮೆ ನೀಡಿಲ್ಲ; ಎಸ್ಪಿ ಕೆ. ಅಣ್ಣಾಮಲೈ ಸ್ಪಷ್ಟನೆ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಪೊಲೀಸ್‌ ಠಾಣೆಯ ಪಿಎಸ್‌ಐ ಕಬ್ಬಾಳ್‌ ರಾಜ್‌ ಅವರು ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಶಶಿಧರ್‌ ಬಂಧನದ ಹಿನ್ನೆಲೆ ರಜಿನಾಮೆ ನೀಡಲು ಮುಂದಾಗಿದ್ದಾರೆ ಮತ್ತು ರಾಜಿನಾಮೆ ನೀಡಿದ್ದಾರೆ ಎಂಬ ಗೊಂದಲಕಾರಿ ವಿಚಾರವು ಗಾಳಿಸುದ್ದಿಯಾಗಿದೆ ಎಂದು ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.

Kota S.I.- Kabbalraj

ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು ಕಬ್ಬಾಳ್ ರಾಜ್ ಅವರು ಪಿಎಸ್‌ಐ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲದಲ್ಲಿ ಸುದ್ದಿಗಳು ಹರಡುತ್ತಿರುವುದುಗಮನಕ್ಕೆ ಬಂದಿದ್ದು, ಕಬ್ಬಾಳ್‌ ರಾಜ್‌ ಅವರು ರಾಜೀನಾಮೆಯ ಯಾವುದೇ ಪತ್ರವನ್ನು ತನಗೆ ನೀಡಿರುವುದಿಲ್ಲ ಇದು ಕೇವಲ ಗಾಳಿಸುದ್ದಿ ಎಂದು ಎಸ್‌ಪಿ ತಿಳಿಸಿದ್ದಾರೆ.

ಇನ್ನು ಕೋಟ ಠಾಣೆಯಲ್ಲಿ ಕಬ್ಬಾಳ್ ರಾಜ್ ಅವರು ಎಂದಿನಂತೆ ತಮ್ಮ ನಿತ್ಯದ ಕಾರ್ಯವನ್ನು ಮಾಡುತ್ತಿದ್ದು ಸದ್ಯ ಎಲ್ಲಾ ಗೊಂದಲಗಳಿಗೂ ತೆರೆಬಿದ್ದಿದೆ.

Comments are closed.