ಕರಾವಳಿ

ಹಳ್ಳಿ ಪ್ರದೇಶದ ಪಂಜರದ ಗಿಣಿ….ನಾಝಿಯಾ ಕೌಸರ್.

Pinterest LinkedIn Tumblr

naziya_kausar_photo_1

ಮಂಗಳೂರು : ಈಕೆ ಕನ್ನಡನಾಡಿನ ದಾವಣಗೆರೆ ಜಿಲ್ಲೆಯ ಹರಿಹರ ಎಂಬ ಒಂದು ಹಳ್ಳಿ ಪ್ರದೇಶದ ಪಂಜರದ ಗಿಣಿ…. ಈಕೆಯ ಬಗ್ಗೆ ಕಲೆ ಹಾಕಲು ಹೊರಟಾಗ ಸಿಕ್ಕಿದ್ದು ಮಾತ್ರ ವಜ್ರದ ಗಣಿ.ತಂದೆ ಖಲೀಂ ಬಾಷ ಮತ್ತು ಶಾಹೀನ್ ಕೌಸರ್ ಅವರ ಮುದ್ದಾದ ಮಗಳು..ತನ್ನ ಹೆತ್ತಬ್ಬೆಯ ಹೆಸರಿನೊಂದಿಗೆ ಇಡೀ ಕನ್ನಡ ನಾಡಿಗೆ ನಾಝಿಯಾ ಕೌಸರ್ ಎಂಬ ನಾಮದಲ್ಲಿ ಚಿರಪರಿಚಿತೆಯಾದವಳು..

ಈ ಕೌಸರ್ ದಾದ ಸೀದಾ ಹುಡುಗಿಯಲ್ಲ …ಸಕಲಕಲಾ ವಲ್ಲಬೆಯಂತೆ ಬಹುಮುಖ ಪ್ರತಿಭೆ ಈಕೆ ಯಲ್ಲಿದೆ..ತನ್ನ ಎಳೆ ವಯಸ್ಸಿನಲ್ಲಿಯೇ ಈಕೆಗೆ ಸಂಗೀತದ ಹುಚ್ಚು…ಸಂಗೀತದಲ್ಲಿ ತಾನೇನೊ ಸಾಧಿಸಬೇಕೆಂದು ಅಕ್ಕ ಪಕ್ಕ ರಲ್ಲಿರುವ ಸಂಗೀತ ವಿದುಷಿಗಳ ಪಡ ಸಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿತಳು..ಇಂಪಾದ ಮಧುರ ಕಂಠದಿಂದ ಕನ್ನಡ ನಾಡಿನಲ್ಲೆಲ್ಲಾ ಸಂಗೀತದ ಇಂಪನ್ನು ನೀಡಿ ಸಂಗೀತ ಪ್ರೇಮಿಗಳಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿದ್ದಲ್ಲದೆ ಪಾರಿತೋಷಕಗಳ ಸಾಲೆ ಇವರ ಮಡಿಲೇರಿಸುವಲ್ಲಿ ಈ ಕೌಸರ್ ಯಶಸ್ವಿಯಾದಳು..ಸಂಗೀತದ ಮಹಾಕಣಜ ದಿ: ಕೆ ಎಸ್ ಅಶ್ವತ್ ಅವರ ಜೊತೆ ಹಾಡಿದ ಹೆಗ್ಗಳಿಕೆ ಈ ನಮ್ಮ ಕೌಸರ್ ಮೇಡಂ ಗೆ ಇದೆ…ಇವರ ಜೊತೆ ಹಾಡುವುದು ಅದೊಂದು ಭಾಗ್ಯವೇ ಸರಿ..

Niziya_kausar_photo_4 Niziya_kausar_photo_5 Niziya_kausar_photo_6 Niziya_kausar_photo_7 Niziya_kausar_photo_9 Niziya_kausar_photo_10 Niziya_kausar_photo_11 Niziya_kausar_photo_12 Niziya_kausar_photo_13

ಸಂಗೀತ ಕ್ಷೇತ್ರದಲ್ಲಿ ಅಸ್ಟೊಂದು ಪರಿಣತ ಇಲ್ಲದವರು ಈ ಮಾಹಾನ್ ಅವರ ಜೊತೆ ಸೇರಿ ಹಾಡುವುದೇ ವಿರಳ..ಸದ್ಯ ನಾಝಿಯಾ ಕೌಸರ್ ಈ ಬಗ್ಗೆ ಕೇಳುವಾಗ ನಾನಿನ್ನು ಸಂಗೀತ ಕಲಿಯುತ್ತಿದ್ದೇನೆ ಎನ್ನುತಿದ್ದಾರೆ..ಈ ಮಾತಲ್ಲೆ ಅರ್ಥವಾಗುತೆ ನಾಝಿಯಾ ಮೇಡಂ ಸಂಗೀತ ತಜ್ಞೆ ಎಂದು ಈಕೆಯ ತಂದೆ DDPI ಕಛೇರಿಯಲ್ಲಿ ಕನ್ನಡ ವಿಭಾಗದ ಪರಿವೀಕ್ಷಕರಾಗಿ ದುಡಿದ ಮಹಾನ್ ವ್ಯಕ್ತಿ…ಕನ್ನಡ ಪರಿಣತರಾಗಿರುವ ಇವರು ಹಲವಾರು ರೀತಿಯ ಸಂಕಲನವನ್ನು ರಚಿಸಿದ ಹಲವು ರೀತಿಯ ಸಾಹಿತ್ಯ ಪ್ರಶಸ್ತಿ ಕೂಡ ಇವರ ಮನೆ ಬಾಗಿಲಿಗೆ ಬಂದೊದಗಿದರೂ.. ಇವರು ಓರ್ವ ಮಹಾನ್ ಸಾಹಿತಿ ಎನ್ನುವುದರಲ್ಲಿ ಎರಡು ಮಾತಿಲ್ಲ..

ತಾಯಿ ಶಾಹಿನ್ ಕೌಸರ್ ಕನ್ನಡ ಶಿಕ್ಷಕಿ..ಇವರಿಬ್ಬರ ಪ್ರೋತ್ಸಾಹದಿಂದ ಒಂದೊಂದಾಗಿ ಕಥೆ,ಕವನ,ಸಂಕಲನ ಬರೆಯ ತೊಡಗಿದರು..ಈಕೆಯ ಬರವಣಿಗೆಯ ಶೈಲಿಯನ್ನು ಕಂಡು ಕನ್ನಡ ಪಂಡಿತರಾದ ಮಾತಾ- ಪಿತಾಮಹ ಇನ್ನಷ್ಟು ಪ್ರೋತ್ಸಾಹ ನೀಡಿದರು..

ತಂದೆ ತಾಯಿಯವರ ಆಶೀರ್ವದೊಂದಿಗೆ ಕನ್ನಡ ನಾಡಿನಲ್ಲಿ ಪ್ರಸಾರವಾಗುವ ಬಹುತೇಕ ಪತ್ರಿಕೆ ಗಳಲ್ಲಿ ಈಕೆ ಯ ಲೇಖನಿ ಚಲಿಸ ತೊಡಗಿತು..ಕಾಲ ಉರುಳಿ ಹೋಗುವಂತೆ ನಾಝಿಯ ಕೌಸರ್ ಎಂಬ ಪಂಜರದ ಗಿಳಿ ಪತ್ರಿಕೊದ್ಯಮದಲ್ಲಿ ಪದವಿಯನ್ನೂ ಪಡೆದಳು..ಹಾಗೆ ತನ್ನ ಕಾರ್ಯ ಚಟುವಟಿಕೆ ನಡೆಯುತ್ತಿರುವಾಗ ಬೆಂಗಳೂರು ವಿ.ವಿ ಯಿಂದ ಇಲೆಕ್ಟ್ರಾನಿಕ್ ಮೀಡಿಯಾ MSC ಮಾಡಲು ಮುಂದಾದೆ..ಹಲವು ರೀತಿಯ ಅಡೆ ತಡೆ ಇದ್ದರೂ ಸಲೀಸಾಗಿ ನಿಭಾಯಿಸಿದಳು..

ಕಾಲ ಬದಲಾದಂತೆ ಮಾಧ್ಯಮಕ್ಕೆ ಬೇಕಾದ ಎಡಿಟಿಂಗ್,ಅ್ಯಂಕರಿಂಗ್,ಡೊಕ್ಯುಮೆಂಟರಿ,ರೈಟಿಂಗ್ ಎಲ್ಲದರಲ್ಲೂ ಪಳಗಿ ಸೈ ಎನಿಸಿಕೊಂಡರು..ನಂತರ ತಾನು ಏನಾದರು ಸಾಧೀಸಬೇಕೆಂದು ಪಣ ತೊಟ್ಟು ಕೆಲವೊಂದು ಕಾರ್ಯಕ್ರಮ ಕೊಡಲು ಮುಂದಾದಳು..

ಈಕೆಯ ಕಾರ್ಯಕ್ರಮವೋಂದನ್ನು ವೀಕ್ಷಿಸಿದ TV 9 ಮುಖ್ಯಸ್ತರು ಈಕೆಗೊಂದು ಆಫರ್ ನೀಡಿದರು…ಮೊದಲ ಬಾರಿಗೆ ಬಂದ ಆಪರ್ ಅನ್ನು ನಯವಾಗಿ ಸ್ವೀಕರಿಸಿ tv 9 ಕಛೇರಿಗೆ ಕಾಲೂರಿದರು..TV 9 ವಾಹಿನಿಯಲ್ಲಿ ತನ್ನ ಚಾಕಚಕ್ಯತೆಯನ್ನು ಕಂಡು ನಾಝಿಯ ಮೇಡಂ ಗೆ ಅಭಿಮಾನಿ ದೇವರುಗಳ ಅಭಿನಂದನೆಗಳ ಮಹಾ ಪೂರವೇ ಹರಿದು ಬಂತು..ನಾಝಿಯಾ ವಾರ್ತ ವಾಚಕಿಗಿಂತ ರೀಪೋರ್ಟಿಂಗ್ ಮಾಡಲು ಆಸಕ್ತಿ ಎಂದು ಸದ್ಯ ರಿಪೋರ್ಟರಾಗಿ ನೇಮಿಸಿದರು…

ಒಂದೊಂದೇ ವರದಿಯನ್ನು ಕಲೆ ಹಾಕುತ್ತಿದ್ದಂತೆ ಈಕೆ ಗೊಂದು ಬಲು ದೊಡ್ಡ ವೇಶ್ಯಾವಾಟಿಕೆ ಜಾಲವೊಂದು ನಗರದಲ್ಲಿ ಕಾರ್ಯಚರಿಸುತ್ತಿದೆ ಎಂಬ ವಾಸನೆ ಬರ ತೊಡಗಿತು..

ಪತ್ರಿಕೋದ್ಯಮ ಒಂದು ಸಮಾಜ ಸೇವೆ..ಕನ್ನಡ ನಾಡಿನ ಸೇವೆ ಮಾಡುವ ಕರ್ತವ್ಯ ನನ್ನದು ಎಂದರಿತು ವ್ಯಶ್ಯಾ ವಾಟಿಕೆ ನಡೆಯುವ ಅಡ್ಡೆಗೆ ಹೋಗಿ ಅಲ್ಲಿನ ಸ್ಥಿತಿ ಗತಿಯನ್ನು ಕದ್ದು ಮುಚ್ಚಿ ತನ್ನ ಕ್ಯಾಮರಾ ಕಣ್ಣಿನಲ್ಲಿ ವಿಡಿಯೋ ಮಾಡಿದಳು..ಈಕೆಯ ಕಣ್ಣಿಗೆ ಮೊದಲು ಗೊಚರಿಸಿದ್ದು ಖಾಕಿ ತೊಟ್ಟ ಪೋಲಿಸರು..ದಿಗ್ಭ್ರಮೆ ಗೊಂಡ ಈಕೆ ಮತ್ತೆ ಕ್ಯಾಮರ ಕಣ್ಣು ಚಲಾಯಿಸಿ ಎಲ್ಲವನ್ನೂ ಮಾದ್ಯಮದೆ ಮುಂದೆ ಬಿಚ್ಚಿಟ್ಟಳು…ಈಕೆಯ ವರದಿಯಿಂದ ಎಚ್ಚತ್ತ ಸರಕಾರ ಆ ಬಾರ್ ಗಳ ಪರಾವಣಿಗೆಯನ್ನೇ ಕ್ಯಾನ್ಸಲ್ ಮಾಡಿಸಿದರು….

ಈ ವರದಿಯಿಂದ ಹಲವು ರೀತಿಯಲ್ಲಿ ನನಗೆ ಬೆದರಿಕೆ ಬಂದಿದ್ದು ಯಾವುದನ್ನೂ ಲೆಕ್ಕಿಸದೆ ತಾಯ್ನಾಡನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂಬ ಒಂದೆ ಭಾವನೆಯಿಂದ ಮುನ್ನುಗಿದ್ದೆನೆ ಅನ್ನುತ್ತಾಳೆ ನಾಝಿಯಾ ಕೌಸರ್..ಈಕೆಯ ವರದಿಗಾರಿಕೆಯಲ್ಲಿ ಒಂದಲ್ಲ ಒಂದು ರೀತಿಯ ಥ್ರಿಲ್ ಇದ್ದೇ ಇರುತ್ತೆ..ಈಕೆಯ ಬೆಳವಣಿಗೆಯನ್ನು ಕಂಡು ಸಹಿಸದ ಕೆಲವರು ಈಕೆಯನ್ನು ಹಿಯಾಳಿಸ ತೊಡಗಿದರು..ನಿನ್ನ ಕನ್ನಡ ಸರಿ ಇಲ್ಲ.. ನಿನಗೆ ಕನ್ನಡ ಮಾತನಾಡಲು ಬರುವುದಿಲ್ಲ..ನೀನು ಸಾಹೇಬ ಕುಟುಂಬದವರಾ್ುದರಿಂದ ನಿನ್ನ ಸ್ಲಾಂಗ್ ಸರಿಯಾಗುವುದಿಲ್ಲ ಎಂದು ಹಿಯಾಳಿಸುತ್ತಿದ್ದರು…ಸಾಮನ್ಯ ಹುಡುಗಿ ಇಷ್ಟೆತ್ತರಕ್ಕೆ ಬೆಳೆಯುವಾಗ ಯಾರಿಗೆ ತಾನೆ ಸಹಿಸಲು ಸಾಧ್ಯ..? ಎಂದು ಅರಿತ ಈಕೆ ಹಿಯಾಳಿಸುವವರನ್ನು ಬದಿಗೊತ್ತಿ ತನ್ನ ಪ್ರತಿಭೆಯನ್ನು ಮುಕ್ಕೋಟಿ ಕನ್ನಡಿಗರ ಮುಂದೆ ಪ್ರದರ್ಶಿಸಿದಳು..ಹಲವು ರೀತಿಯ ಅಡೆ ತಡೆಗಳು ನನ್ನ ಪಾಲಿಗೆ ಬಂದದ್ದು ನಿಜವಾಗ್ಳೂ ನನಗೆ ತುಂಬಾ ಬೇಸರ ತಂದಿದೆ ಎನ್ನುತ್ತಾರೆ ನಾಝಿಯಾ..ಅಂದು ಹಿಯಾಳಿಸುತ್ತಿದ್ದ ಕೆಲವರು ಇಂದಿನ ಬೆಳವಣಿಗೆ ನೋಡಿ ಬೆನ್ನು ತಟ್ಟುತ್ತಿದ್ದಾರೆ…ಅಂದು ಹಾಕಿದ ಕಣ್ಣೀರು ಇಂದು ಆನಂದಬಾಷ್ಪವಾಗಿ ಪರಿಣಮಿಸಿದೆ.

ಸುಮಾರು ಎರಡು ವರ್ಷಗಳ ಸುದೀರ್ಘ ಸೇವೆ tv9 ಮಾದ್ಯಮೊಂದಿಗೆ ಮಾಡಿ..ತದ ನಂತರ ಸಮಯ ಟಿವಿ ಯ ವಾರ್ತ ವಾಚಕಿಯಾಗಿ ದುಡಿದಳು..ಈ ಎಲ್ಲಾ ಬೆಳವಣಿಗೆಗೆ ನನ್ನ ಪತಿ ಅಬೂಬಕ್ಕರ್ ಸಿದ್ದೀಕ್ ಅವರೇ ಕಾರಣ ಎನ್ನುತ್ತಾರೆ ನಮ್ಮ ನಾಝಿಯಾ ಮೇಡಂ…ಉತ್ತಮ ಭಾಂದವ್ಯದೊಂದಿಗೆ ಜೊತೆ ಗೂಡಿ ಹೋಗುವ ಈ ಜೋಡಿಯನ್ನು ಮೇಡಂ ಅವರ ಭಾಷೆಯಲ್ಲಿ ‘he is not my ATM….I am not his coock’ ಅನ್ನುತ್ತಾರೆ …ಈ ವಾಕ್ಯದಲ್ಲೆ ಅರ್ಥವಾಗುತ್ತೆ ಅವರೆಷ್ಟು ಅನ್ಯೊನ್ಯತೆಯಲ್ಲಿರಬೇಕು ಎಂದು…ನಮ್ಮದೊಂದೆ ಅಭಿಲಾಷೆ ದೀರ್ಘಾಯುಷ್ಯನು ಬವಾ …ಮಾಧ್ಯಮ ರಂಗದಲ್ಲಿ ದುಡಿದವರೂ ಚಿತ್ರ ರಂಗದಲ್ಲಿ ನಟನೆ ಮಾಡುವುದು ಮಾಮೂಲಾಗಿ ಬಿಟ್ಟಿದೆ…ಆದರೆ ನಮ್ಮವರಿಗೆ ಅದೆಲ್ಲಾ ಅರ್ಹತೆ ಇದ್ದರೂ ಚಿತ್ರ ರಂಗದಿಂದ ನಟನೆಗೆ ಬಂದ ಆಫರ್ ಮಾತ್ರ ಸಲೀಸಾಗಿ ತಿರಸ್ಕರಿಸಿ “ಮೋನಿಕಾ ಈಸ್ ಮಿಸ್ಸಿಂಗ್ “ಎಂಬ ಸಿನಿಮಾಕೆ ವಾಯ್ಸ್ ಡಬ್ವಿಂಗ್ ಕೊಟ್ಟಿದ್ದಾರೆ..ವಿದ್ಯಾಭ್ಯಾಸ ಎನ್ನುವುದು ದಡ ಇಲ್ಲದ ಸಮೂದ್ರದಂತೆ ಎಂದು ಭಾವಿಸಿ ಇನ್ನಷ್ಟು ಕಲಿಯಬೇಕೆಂದು ಮಾಧ್ಯಮ ರಂಗಕ್ಕೆ ವಿರಾಮ ಕೋರಿದ್ದಾರೆ..

ಸದ್ಯ ನಮ್ಮ ನಾಝಿಯಾ ಕೌಸರ್ ಸಮಯ ಟಿ.ವಿ ಗೂ ಬ್ರೇಕ್ ಹಾಕಿ ರಾಜಧಾನಿಯ ಹಝ್ರತ್ ಟಿಪ್ಪು ಸುಲ್ತಾನ್ ಕಾಲೇಜಿನಲ್ಲಿ PHD ಮಾಡ್ತಿದ್ದಾರೆ…ಕಲವೇ ದಿನಗಳಲ್ಲಿ ನಾಝಿಯಾ ಕೌಸರ್ ಹೊಸಾ ವಾಹಿನಿಯಲ್ಲಿ ತನ್ನ ನಗು ಮುಖದಿಂದ ಗೋಚರಿಸಲಿದ್ದಾರೆ ಎಂಬುವುದು ಅಭಿಮಾನಿಗಳ ಮಾತು…ಏನೇ ಇರಲಿ ನಾಝಿಯಾ ರಿಯಾಲಿ ಗ್ರೇಟ್..ಮೇಡಂ ನಿಮ್ಮ ಬಾಳು ಬಂಗಾರವಾಗಲಿ ಎಂಬುದೇ ನಮ್ಮ ಆಶಯ….ಗುಡ್ ಲಕ್ ನಾಝಿಯಾ ಕೌಸರ್…

✍?ಅನ್ಸಾರ್ ಬೆಳ್ಳಾರೆ

Comments are closed.