ಕರಾವಳಿ

ಜೂ.02: ಬೆಂಗಳೂರಿನಲ್ಲಿ ನಾಗೇಶ್ ಪೊಳಲಿ ನೇತೃತ್ವದ ವ್ಹಿಜ್ಯು‌ಅಲ್ ಜರ್ನಲಿಸಂ ಇನ್‌ಸ್ಟಿಟ್ಯೂಟ್ ಸ್ಥಾಪನೆ

Pinterest LinkedIn Tumblr

Nagesh_Polali_Studio

ಮುಂಬಯಿ, ಮೇ.31: ಬೆಂಗಳೂರು ಇಲ್ಲಿನ ಹೆಸರಾಂತ ಸುದ್ದಿ ಛಾಯಾಗ್ರಾಹಕ ನಾಗೇಶ್ ಪೊಳಲಿ ನೇತೃತ್ವದಲ್ಲಿ ಇದೇ ಜೂನ್.೦೨ರಂದು ಆರ್.ಟಿ ನಗರದಲ್ಲಿ ಜೆ.ಪಿ ಗ್ಲೋಬಲ್ ವ್ಹಿಜ್ಯು‌ಅಲ್ ಜರ್ನಲಿಸಂ ಇನ್‌ಸ್ಟಿಟ್ಯೂಟ್ ಸ್ಥಾಪಿಸಲ್ಪಡಲಿದೆ.

ಬೆಂಗಳೂರಿನ ಆರ್ ಟಿ ನಗರದ ಮುಖ್ಯ ರಸ್ತೆಯಲ್ಲಿನ ಆರ್‌ಟಿ ಪ್ಲಾಜ್ಹಾ ಕಟ್ಟಡದ ೩ನೇ ಮಹಡಿಯಲ್ಲಿನ ಟಿ‌ಎಫ್೪ನಲ್ಲಿ ಸೇವೆಯಲ್ಲಿ ತೊಡಗಿಸಲಿರುವ ಸ್ಥಂಸ್ಥೆಯು ಫೋಟೋ ಜರ್ನಲಿಸಂ, ಆರ್ಟ್ ಜರ್ನಲಿಸಂ ಮತ್ತು ಕಾರ್ಟೂನ್ ಜರ್ನಲಿಸಂಗಳ ಮೂರು ಪ್ರಮುಖ ವಿಷಯಗಳನ್ನೊಳಗೊಂಡು ಕಾರ್ಯತಃ (ಪ್ರ್ಯಾಕ್ಟಿಕಲಿ) ತರಬೇತಿ ನೀಡಲಿದೆ. ವಾರದ ಐದು ದಿನಗಳಲ್ಲಿ ನಿರಂತರವಾಗಿ ಆರು ತಿಂಗಳ, ಅಥವಾ ಸತತ ವಾರಂತ್ಯದ ಎರಡು ದಿನಗಳನ್ನೊಳ ಗೊಂಡು ಒಂದು ವರ್ಷದ ಕೋರ್ಸ್ ಮೂಲಕ ಈ ತರಬೇತಿ ನಡೆಸಲ್ಪಡುವುದು.

ಇದೀಗಲೇ ಸುಮಾರು ೪೨ ನಿರುದ್ಯೋಗಿ ಯುವಕರಿಗೆ ಛಾಯಾಚಿತ್ರಣದ ತರಬೇತಿ ನೀಡಿ ಸ್ವ‌ಉದ್ಯೋಗಕ್ಕ್ಕೆ ಪ್ರೇರಕರಾಗಿರುವ ನಾಗೇಶ್ ನಾಡಿನ ಹೆಸರಾಂತ ಸುದ್ದಿ ಛಾಯಾಗ್ರಾಹಕರೆಣಿಸಿದ್ದಾರೆ. ಮುಂಬಯಿ ಅಲ್ಲಿನ ಕರ್ನಾಟಕ ಮಲ್ಲ ದೈನಿಕದ ಆರಂಭಿಕ ಹಾಗೂ ಮ್ಯಾಂಗಳೂರು ಟುಡೇ ಆಂಗ್ಲ ಮಾಸಿಕದ ಪ್ರಥಮ ಸುದ್ದಿ ಛಾಯಾಗ್ರಾಹಕ, ಪ್ರಸ್ತುತ ಬೆಂಗಳೂರು ಅಲ್ಲಿನ ಇಂಡಿಯನ್ ಎಕ್ಸ್‌ಪ್ರೆಸ್ ಆಂಗ್ಲ ದೈನಿಕದ ಹಿರಿಯ ಫೋಟೋ ಜರ್ನಲಿಸ್ಟ್ ಆಗಿ ಸೇವಾ ನಿರತರಾಗಿರುವ ಪೊಳಲಿ ಅವರು ಉಜಿರೆಯ ಎಸ್‌ಡಿ‌ಎಂ ಕಾಲೇಜು, ಬೆಂಗಳೂರು ಜಲಹಳ್ಳಿಯ ಸೈಂಟ್ ಪ್ಲಾರೇಟ್ ವಿವಿ ಕಾಲೇಜು, ಗುಲ್ಬರ್ಗ ವಿಶ್ವವಿದ್ಯಾಲಯ, ರಾಯಚೂರುನ ಪೋಸ್ಟ್ ಗ್ರಾಜ್ಯುವೇಟ್ ಇತ್ಯಾದಿ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಲೈಫ್‌ಸ್ಟೈಲ್ ಮತ್ತು ಛಾಯಾಚಿತ್ರಗಳ ಬಗ್ಗೆ ಉಪನ್ಯಾಸಗಳನ್ನು ನೀಡಿರುವರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಕಳೆದ ಬಾರಿ ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಮೂರು ದಿನಗಳ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ಪೊಳಲಿ ಸಂಘದ ನಿಯೋಗವು ರಾಜಭವನಕ್ಕೆ ತೆರಳಿದಾಗ ನಿಯೋಗದೊಂದಿಗೆ ಆಗಮಿಸಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಸಿಹೆಚ್ ವಿದ್ಯಾಸಾಗರ್ ರಾವ್ ಅವರನ್ನು ಗೌರವಿಸಿದರು.

ಶೀಘ್ರದಲ್ಲೇ ಸಂಸ್ಥೆಯನ್ನು ಮುಂಬಯಿ ಮಹಾನಗರದಲ್ಲೂ ವಿಸ್ತಾರಿಸಲಾಗುವುದು. ಆಸಕ್ತರು ಇ-ಮೇಯ್ಲ್ nageshpolali@gmail.com ಮೂಲಕ ಸಂಪರ್ಕಿಸಿ ಪ್ರವೇಶ ಪಡೆಯ ಬಹುದು ಎಂದು ನಾಗೇಶ್ ಪೊಳಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.