ಕರಾವಳಿ

ಜೂನ್.10 ರಂದು ದುಬೈಯಲ್ಲಿ ನಡೆಯಲಿರುವ ಬ್ಯಾರೀಸ್ ಕಲ್ಚರಲ್ ಫೋರಮ್ ನ ಬೃಹತ್ ಇಫ್ತಾರ್ ಕೂಟದ ಆಹ್ವಾನ ಪತ್ರ ಬಿಡುಗಡೆ

Pinterest LinkedIn Tumblr

BCF-2016-IMG_7666-009

ದುಬೈ: ಯು.ಎ.ಇ ಬ್ಯಾರೀಸ್ ಕಲ್ಚರಲ್ ಫೋರಮ್(ಬಿಸಿಯಫ್) ಪ್ರತಿವರ್ಷವೂ ಹಮ್ಮಿಕೊಂಡು ಬರುತ್ತಿರುವ ಬೃಹತ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿವೇತನ ವಿತರಿಸುವ ದಿನಾಂಕ ಘೋಷಣಾ ಕಾರ್ಯಕ್ರಮದ ಆಹ್ವಾನ ಪತ್ರ ವನ್ನು ಇತ್ತೀಚಿಗೆ ಬಿಡುಗಡೆಗೊಳಿಸಲಾಯಿತು.

IMG-20160528-WA0038

IMG-20160528-WA0039

ಜೂನ್.10 ರಂದು ಸಂಜೆ 4:30ಕ್ಕೆ ಆರಂಭಗೊಳ್ಳುವ ಬೃಹತ್ ಇಫ್ತಾರ್ ಕೂಟದ ಆಹ್ವಾನ ಪತ್ರವನ್ನು ಅತಿಥಿಯಾಗಿ ಆಗಮಿಸಿದ ಮಂಗಳೂರು ಎಂ.ಕೆ ಪ್ಲೈಬೋರ್ಡ್ಸ್ ವ್ಯವಸ್ಥಾಪಕ ಪಾಲುದಾರರಾದ ಅಬ್ದುಲ್ ಖಾದರ್ ಎಂ.ಕೆ ಅವರು ಬಿ.ಸಿ.ಎಫ್ ಅಧ್ಯಕ್ಷ ಡಾ.ಯೂಸುಫ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಮಾಡಿದರು.

BCF-2016-IMG_7650-001

BCF-2016-IMG_7652-002

BCF-2016-IMG_7653-003

BCF-2016-IMG_7660-004

BCF-2016-IMG_7661-005

BCF-2016-IMG_7663-006

BCF-2016-IMG_7664-007

BCF-2016-IMG_7665-008

ಬಿ.ಸಿ.ಎಫ್ ಅಧ್ಯಕ್ಷ ಡಾ.ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಇಫ್ತಾರ್ ಕೂಟದ ಛೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ಅವರು ಇಫ್ತಾರ್ ಕಾರ್ಯಕ್ರಮದ ವಿವರಣೆ ನೀಡಿ ಯಶಸ್ವಿಗೆ ಎಲ್ಲಾ ಪದಾಧಿಕಾರಿಗಳಲ್ಲಿ ಮತ್ತು ಮಾಧ್ಯಮ ಮಿತ್ರರಲ್ಲಿ ಸಹಕರಿಸುವಂತೆ ಕೇಳಿಕೊಂಡರು. ಅದೇ ರೀತಿ ವಿದ್ಯಾರ್ಥಿವೇತನ ಬಗ್ಗೆ ಅದರ ಉಸ್ತುವಾರಿ ಎಂ.ಇ ಮೂಳೂರು ಅವರು ವಿವರಣೆ ನೀಡುತ್ತಾ ವಿದ್ಯಾರ್ಥಿವೇತನ ಬಯಸುವವರು ಸಂಬಂಧಪಟ್ಟ ಅರ್ಜಿಯನ್ನು ಜೂನ್.15 ರ ಮುಂಚಿತವಾಗಿ ತಲುಪಿಸುವಂತೆ ತಿಳಿಸಿದರು. ಬಿ.ಸಿ.ಎಫ್ ಯುಎಇ ಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಹಮ್ಮಿಕೊಂಡು ಬಂದಿರುವ ಸಾಮಾಜಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಅಧ್ಯಕ್ಷರಾದ ಡಾ. ಯೂಸುಫ್ ರವರು ಪ್ರಸ್ತಾಪಿಸಿದರು.

ಈ ವೇಳೆ ಪತ್ನಿ ಸಮೇತ ಮಕ್ಕಾದಲ್ಲಿ ಪವಿತ್ರ ಉಮ್ರಾ ನಿರ್ವಹಿಸಿ ಆಗಮಿಸಿದ ಮಂಗಳೂರು ಎಂ.ಕೆ ಪ್ಲೈಬೋರ್ಡ್ಸ್ ವ್ಯವಸ್ಥಾಪಕ ಪಾಲುದಾರರಾದ ಅಬ್ದುಲ್ ಖಾದರ್ ಎಂ.ಕೆ, ಅವರ ಸಹೋದರ ಎಂ.ಕೆ ಜಲೀಲ್ ಅವರಿಗೆ ಬಿ.ಸಿ.ಎಫ್ ವತಿಯಿಂದ ಅಧ್ಯಕ್ಷರಾದ ಡಾ.ಯೂಸುಫ್ ಅವರು ಹೂಗುಚ್ಛ ಹಾಗೂ ಆತ್ಮೀಯ ಕಾಣಿಕೆ ನೀಡಿ ಸನ್ಮಾನಿಸಿದರು. ಅವರ ಪತ್ನಿಯಂದಿರಿಗೆ ಲೇಡೀಸ್ ವಿಂಗ್ ಅಧ್ಯಕ್ಷರಾದ ಮುಮ್ತಾಝ್ ಮತ್ತು ಪದಾಧಿಕಾರಿಗಳು ಹೂಗುಚ್ಛ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅಬ್ದುಲ್ ಖಾದರ್ ಎಂ.ಕೆ ಅವರು ಬಿ.ಸಿ.ಎಫ್ ನಡೆಸುತ್ತಿರುವ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದರು.

BCF-2016-IMG_7667-010

BCF-2016-IMG_7668-011

BCF-2016-IMG_7673-012

BCF-2016-IMG_7676-013

BCF-2016-IMG_7677-014

BCF-2016-IMG_7678-015

BCF-2016-IMG_7680-016

BCF-2016-IMG_7681-017

BCF-2016-IMG_7682-018

BCF-2016-IMG_7688-019

ಬಿ.ಸಿ.ಎಫ್ ಉಪಾಧ್ಯಕ್ಷರಾದ ಎಂ.ಇ ಮೂಳೂರು, ಅಫೀಕ್ ಹುಸ್ಸೈನ್, ಅಮೀರುದ್ದೀನ್ ಹುಸ್ಸೈನ್, ಬಿ.ಸಿ.ಎಫ್ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿ ಅಕ್ಬರ್ ಅಲಿ ಮಠ, ಕಾರ್ಯಕಾರಿ ಸದಸ್ಯ ಯಾಕೂಬ್ DEWA, ನವಾಝ್ ಕೊಟೆಕ್ಕಾರ್, ಲೇಡೀಸ್ ವಿಂಗ್ ಅಧ್ಯಕ್ಷರಾದ ಮುಮ್ತಾಝ್ ಕಾಪು ಹಾಗೂ ತಂಡದವರು ಹಾಜರಿದ್ದರು. ಬಿ.ಸಿ.ಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್ ಅವರು ಸ್ವಾಗತಿಸಿ, ನಿರೂಪಿಸಿದರು. ಅಕ್ಬರ್ ಅಲಿ ಮಠ ಅವರು ಧನ್ಯವಾದ ಸಲ್ಲಿಸಿದರು.

ಇಫ್ತಾರ್ ಕೂಟದ ಎಲ್ಲಾ ರೀತಿಯ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
050 6983095
055 9576465
050 4567862
050 7649016
050 3584256

Comments are closed.