ಕರಾವಳಿ

ಉಡುಪಿ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ‘ಪೋಸ್ಟ್‌ಮಾರ್ಟಮ್’..!

Pinterest LinkedIn Tumblr

ಉಡುಪಿ: ಮಣಿಪಾಲ ಕೆ‌ಎಂಸಿ -ರೆನ್ಸಿಕ್ ಮೆಡಿಸಿನ್ ವಿಭಾಗದ ವಿಶ್ರಾಂತ ಮುಖ್ಯಸ್ಥ, ನಿರ್ದೇಶಕ ಡಾ| ನಾಗೇಶ್ ಕುಮಾರ್ ಜಿ. ರಾವ್ ಅವರ ‘ನ್ಯಾಯ ವೈದ್ಯ ಶಾಸ ಮರಣೋತ್ತರ ಶವ ಪರೀಕ್ಷೆ’ (ಮೆಡಿಕೋಲೀಗಲ್ ಪೋಸ್ಟ್‌ಮಾರ್ಟಮ್ ಎಕ್ಸಾಮಿನೇಷನ್) ಕನ್ನಡ ಕೃತಿಯನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ತಲುಪಿಸಲು ಸ್ವತಃ ಲೇಖಕರೇ ಪುಸ್ತಕ ದೇಣಿಗೆ ಸಂಗ್ರಹಿಸಿ ಖರೀದಿಸಿದ 300 ಪ್ರತಿಗಳನ್ನು ಶುಕ್ರವಾರ ಎಸ್ಪಿ ಕಚೇರಿಯಲ್ಲಿ ಎಸ್ಪಿ ಕೆ. ಅಣ್ಣಾಮಲೈ ಅವರಿಗೆ ಹಸ್ತಾಂತರಿಸಿದರು.

Udupi_SP_Office

ಲೇಖಕರ, ದೇಣಿಗೆ ನೀಡಿದವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಣ್ಣಾಮಲೈ, ಹಿರಿಯ ಪೊಲೀಸ್ ಅಧಿಕಾರಿಗಳ ಮುಖಾಂತರ ರಾಜ್ಯದ ಎಲ್ಲ ಠಾಣೆಗಳಿಗೆ ಕಳುಹಿಸುವ ಏರ್ಪಾಡು ಮಾಡಲಾಗುವುದು. ಎಸ್ಪಿಯಾಗಿ ತಾನು 100 ಪ್ರತಿಗಳನ್ನು ಇಲಾಖಾ ಅನುದಾನದಿಂದ ಖರೀದಿಸಿದ್ದೇನೆ ಎಂದರು.

ಮರಣೋತ್ತರ ಶವ ಪರೀಕ್ಷೆ ಬಗ್ಗೆ ಜನಸಾಮಾನ್ಯರಲ್ಲಿ ಇರಬಹುದಾದ ಊಹೆ, ತಪ್ಪುಕಲ್ಪನೆಗಳನ್ನು ನಿವಾರಿಸುವಲ್ಲಿ ಸೂಕ್ತ ಮಾರ್ಗದರ್ಶಿಯಾದ ಈ ಕೃತಿ ಸರಳ ಕನ್ನಡದಲ್ಲಿದ್ದು ಸುಲಭವಾಗಿ ಓದಬಹುದು ಎಂದರು. ಲೇಖಕರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಜಯದೇವ ಮೋಟಾರ್ಸ್ ಮಾಲಕಿ ರೇಣು ಜಯರಾಮ್, ರೋಟರಿ ಉಡುಪಿ- ಮಣಿಪಾಲ್ ಅಧ್ಯಕ್ಷ ಎಸ್.ಎ. ರಹಿಮಾನ್, ಹೊಟೇಲ್ ಉದ್ಯಮಿ ಯು. ವಿಶ್ವನಾಥ್ ಶೆಣೈ, ಪ್ರಕಾಶಕರಾದ ಕಿನ್ನರ ಪ್ರಕಾಶನ ಸೌಂಸ್ಥೆಯ ವಿಜಯ್‌ಕುಮಾರ್ ಉಪಸ್ಥಿತರಿದ್ದರು.

Comments are closed.