ಅಂತರಾಷ್ಟ್ರೀಯ

ತಾಯಿಯ ಪ್ರೀತಿ-ಮಮತೆ ಮಗುವಿನ ಮೆದುಳಿನ ಉತ್ತಮ ಬೆಳವಣಿಗೆಗೆ ಸಹಕಾರಿ

Pinterest LinkedIn Tumblr

Baby

ವಾಷಿಂಗ್ಟನ್: ತಾಯಿಯ ಪ್ರೀತಿ ಹಾಗೂ ಮಮತೆ ಹೆಚ್ಚಾದಂತೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ಅಧ್ಯಾಯನವೊಂದು ಹೇಳಿದೆ.

ವಾಷಿಂಗ್ಟನ್ ವಿಶ್ವವಿದ್ಯಾಲಯವೊಂದು ನಡೆಸಿದ್ದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯ ನಡೆಸಿದ್ದ ಸಂಶೋಧನೆಯಲ್ಲಿ ಸುಮಾರು 127 ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಇದರಂತೆ ಎಲ್ಲಾ ಮಕ್ಕಳ ಮಿದುಳನ್ನು ಸ್ಕ್ಯಾನಿಂಗ್ ಮಾಡಿ ಪರೀಕ್ಷೆಗೊಳಪಡಿಸಲಾಗಿದೆ.

ಮಕ್ಕಳನ್ನು ಅವಲೋಕನದಲ್ಲಿರಿಸಿದ್ದ ಸಂಶೋಧಕರು ಮಕ್ಕಳಿಗೆ ಆಟವೊಂದನ್ನು ನೀಡಿದ್ದಾರೆ. ತಾಯಿಯ ಮಮತೆ ಹಾಗೂ ಪ್ರೀತಿಯನ್ನು ಹೆಚ್ಚಾಗಿ ಪಡೆದ ಮಕ್ಕಳು ತಮ್ಮ ಟಾಸ್ಕ್ ನ್ನು ವೇಗವಾಗಿ ಪೂರ್ಣಗೊಳಿಸಿದ್ದಾರೆ. ತಾಯಿಯ ಪ್ರೀತಿಯಲ್ಲಿ ಕೊರತೆಯಿದ್ದ ಮಕ್ಕಳು ಟಾಸ್ಕ್ ಪೂರ್ಣಗೊಳಿಸಲು ಕಷ್ಟ ಪಟ್ಟಿರುವುದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ. ಇದಲ್ಲದೆ, ತಾಯಿಯ ಪ್ರೀತಿ ಹೆಚ್ಚಾಗಿ ಪಡೆದ ಮಕ್ಕಳ ಮೆದುಳು ದ್ವಿಗುಣ ಮಟ್ಟದಲ್ಲಿ ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತಿರುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಈ ಸಂಶೋಧನೆಯ ಅಧ್ಯಯನವನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆರ್ಲಿ ಎಡಿಷನ್ ಪ್ರಕಟಿಸಿದ್ದು, ಮಕ್ಕಳ ಬೆಳವಣಿಗೆಯಲ್ಲಿ ಕೆಲವು ಸೂಕ್ಷ್ಮ ಅವಧಿಗಳಿರುತ್ತವೆ. ಈ ಅವಧಿಯಲ್ಲಿ ಮಕ್ಕಳ ಮಿದುಳಿನ ಬೆಳವಣಿಗೆ ಹೆಚ್ಚಾಗಿದ್ದು, ತಾಯಿಯ ಪ್ರೀತಿಯನ್ನು ಹೆಚ್ಚಾಗಿ ನೀಡಬೇಕಾಗುತ್ತದೆ. ಮಗುವಿನ ಅವಧಿಯಲ್ಲಿ ಪೋಷಕರ ಪ್ರೀತಿ ಅತ್ಯಂತ ಅವಶ್ಯವಾಗಿರುತ್ತದೆ. ಮಕ್ಕಳು ಬೆಳವಣಿಗೆಯಾದ ನಂತರ ಸಿಗುವ ಪ್ರೀತಿಗಿಂತ ಮಗುವಿನ ಅವಧಿಯಲ್ಲಿ ಪ್ರೀತಿಯ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂದು ಹೇಳಿಕೊಂಡಿದೆ.

ಹಿಪೊಕ್ಯಾಂಪಸ್ ಭಾವನಾತ್ಮಕ ಆರೋಗ್ಯಕರ ಕ್ರಿಯೆಗಳಿಗೆ ಸಂಬಂಧಿಸಿದ್ದಾಗಿದ್ದು, ಮಕ್ಕಳು ವಯಸ್ಕ ಅವಧಿಗೆ ಬಂದಾಗ ಇದು ಬಹಳ ಮುಖ್ಯವಾಗುತ್ತದೆ. ಮಗು ಹುಟ್ಟಿದಾಗ ತಾಯಿಯ ಪ್ರೀತಿಯನ್ನು ಹೆಚ್ಚಾಗಿ ಪಡೆದ ಮಕ್ಕಳ ಮಿದುಳಿನ ಬೆಳವಣಿಗೆ ಹೆಚ್ಚಾಗಿರುತ್ತದೆ ಎಂದು ಡಾ.ಲುಬಿ ಹೇಳಿದ್ದಾರೆ.

ಶಾಲೆಗೆ ಹೋಗುವುದಕ್ಕೂ ಮುನ್ನ ತಾಯಿಯ ಪ್ರೀತಿಯನ್ನು ಹೆಚ್ಚಾಗಿ ಪಡೆದ ಮಕ್ಕಳ ಹಿಪೋಕ್ಯಾಂಪನ್ (ಕಲಿಕೆ, ಸ್ಮರಿಕೆ, ಭಾವನೆ ಗಳಿಗೆ ಸಂಬಂಧಿಸಿದ್ದು) ಹೆಚ್ಚಾಗಿ ಬೆಳವಣಿಗೆಯಾಗುತ್ತದೆ. ಮಗುವಿನಲ್ಲಿ ತಾಯಿಯ ಪ್ರೀತಿ ಕೊರತೆಯುಂಟಾದರೆ ಮಕ್ಕಳ ಮಿದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಒಂದು ಬಾರಿ ಮಿದುಳಿನ ಮೇಲೆ ಪರಿಣಾಮ ಬೀರಿದರೆ, ಮಕ್ಕಳು ಶಾಲೆಗೆ ಹೋದ ನಂತರ ಪ್ರೀತಿ ಕೊಟ್ಟರೂ ಈ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಮಗುವಿನ ಅವಧಿಯಲ್ಲೇ ಮಕ್ಕಳಿಗೆ ತಾಯಿ ಹೆಚ್ಚಾಗಿ ಪ್ರೀತಿಯನ್ನು ಕೊಡಬೇಕು. ಇದು ಮಕ್ಕಳ ಧನಾತ್ಮಕ ಚಿಂತನೆ ಹಾಗೂ ಮಿದುಳಿನ ಪರಿಪಕ್ವತೆಗೆ ಕಾರಣವಾಗುತ್ತದೆ ಎಂದು ವಾಷಿಂಗ್ಟನ್ ಮಕ್ಕಳ ಮನೋರೋಗ ತಜ್ಞ ಡಾ. ಲುಬಿ ಹೇಳಿದ್ದಾರೆ.

Write A Comment