ಕರಾವಳಿ

ತೂಕ ಇಳಿಸಲು…ಮಧುಮೇಹದ ಹತೋಟಿಗೆ ಬಾಳೆ ಹೂವು ಬಳಸಿ …

Pinterest LinkedIn Tumblr

banana_blossom2

ಬಾಳೆಹಣ್ಣು ಸರ್ವಕಾಲಕ್ಕೂ, ಅಗ್ಗವಾಗಿ ಎಲ್ಲೆಡೆ ದೊರೆಯುವ ಹಣ್ಣು. ಹಣ್ಣಿನಂತೆಯೇ ಬಾಳೆ ಹೂವು ದಿಂಡುಗಳೂ ಆರೋಗ್ಯಕ್ಕೆ ಉತ್ತಮವಾಗಿವೆ. ಬಾಳೆದಿಂಡಿನ ಸೇವನೆ ತೂಕ ಶೀಘ್ರವಾಗಿ ಇಳಿಸಲು ನೆರವಾಗುತ್ತದೆ. ಅದರಂತೆ ವಾಸ್ತವವಾಗಿ ಬಾಳೆಹೂವಿನಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಒಂದರ್ಥದಲ್ಲಿ ಹಣ್ಣು, ಎಲೆ ಮತ್ತು ದಿಂಡುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಈ ಹೂವಿನಲ್ಲಿವೆ.

ಸಾಮಾನ್ಯವಾಗಿ ಮಹಾರಾಷ್ಟ ರಾಜ್ಯದಲ್ಲಿ ಈ ಹೂವನ್ನು ಎಸೆಯದೇ ವಿವಿಧ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಆಲು ಮತ್ತಿತರ ತರಕಾರಿಗಳೊಂದಿಗೆ ಪಲ್ಯ ಅಥವಾ ಸಬ್ಜಿಯ ರೂಪದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಕೆಲವರು ಈ ಹೂವುಗಳನ್ನು ಕೊಂಚ ಕಡ್ಲೆಹಿಟ್ಟು ಕಾರಪುಡಿ ಹಾಕಿ ಹುರಿದು ಒಣಮೀನಿನ ಬದಲಿಗೆ ನೆಂಜಿಕೊಳ್ಳಲು ಬಳಸುವುದೂ ಇದೆ. ಇದರ ರುಚಿ ಹಪ್ಪಳ, ಒಣಮೀನಿಗಿಂತಲೂ ರುಚಿಯಾಗಿರುತ್ತದೆ.

ನಮ್ಮ ಆಹಾರದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರುವಂತಿರಬೇಕು. ಅಕ್ಕಿ, ಹಣ್ಣುಗಳಲ್ಲಿ ಕರಗುವ ನಾರು ಹೆಚ್ಚಿದ್ದರೆ ಗೋಧಿ, ಹಸಿತರಕಾರಿಗಳಲ್ಲಿ ಕಗರದ ನಾರು ಹೆಚ್ಚಿರುತ್ತದೆ. ಆದರೆ ನಾವು ಗೋಧಿಯ ನಾರನ್ನು ನಿವಾರಿಸಿ ಮೈದಾ ರೂಪದಲ್ಲಿ ಬಳಸುವ ಮೂಲಕ ಅಗತ್ಯವಿರುವ ನಾರನ್ನು ಪಡೆಯದೇ ಹೋಗುತ್ತೇವೆ. ಇದರಿಂದ ಮಲಬದ್ಧತೆ ಪ್ರಾರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಡಲು ಸುಂದರವಾಗಿರುವ ಆಹಾರಗಳೆಲ್ಲವೂ ಈ ನಾರಿನಿಂದ ವಂಚಿತವಾಗಿರುವ ಕಾರಣ ಮಲಬದ್ದತೆ ಹೆಚ್ಚುತ್ತದೆ. ಬಾಳೆಹೂವಿನಲ್ಲಿ ಕರಗದ ನಾರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಸುಲಭ ಜೀರ್ಣಕ್ರಿಯೆ ಮತ್ತು ವಿಸರ್ಜನೆಯಲ್ಲಿ ನೆರವಾಗುತ್ತದೆ.

ಬಾಳೆಹೂವಿನಲ್ಲಿ ಪಾಲಿಫೆನಾಲ್ ಎಂಬ ಕಣಗಳಿದ್ದು ಇವುಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ವಿವಿಧ ಕ್ಯಾನ್ಸರ್ಗಳಿಂದ ರಕ್ಷಿಸುತ್ತದೆ ಹಾಗೂ ಒತ್ತಡದ ಮೂಲಕ ಎದುರಾಗಬಹುದಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಮಧುಮೇಹದ ಹತೋಟಿಗೆ ನೆರವಾಗುತ್ತದೆ
ಬಾಳೆಹೂವಿನಲ್ಲಿರುವ ಪೋಷಕಾಂಶಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಅಂದರೆ ಇದು ಹೊಟ್ಟೆಯಲ್ಲಿ ಜೀರ್ಣವಾಗಿ ಸಕ್ಕರೆ ಮತ್ತು ಇತರ ಪೋಷಕಾಂಶಗಳನ್ನು ರಕ್ತದಲ್ಲಿ ಸೇರಿಸಲು ಬಹಳ ಹೆಚ್ಚಿನ ಹೊತ್ತು ತೆಗೆದುಕೊಳ್ಳುತ್ತದೆ. ಈ ಗುಣ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕೆ ಬಾಳೆಹೂವಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಆಂಟಿಆಕ್ಸಿಡೆಂಟುಗಳೇ ಕಾರಣ. ಮಧುಮೇಹಿಗಳ ರಕ್ತದಲ್ಲಿ ಅತಿ ಸಾವಕಾಶವಾಗಿ ಸಕ್ಕರೆ ರಕ್ತಕ್ಕೆ ಬರುವ ಕಾರಣ ಇದನ್ನು ನಿಭಾಯಿಸಲು ದೇಹಕ್ಕೆ ಹೆಚ್ಚಿನ ಸಮಯಾವಕಾಶ ದೊರಕುತ್ತದೆ. ಇದರಿಂದ ಮಧುಮೇಹದ ಮೇಲೆ ಹತೋಟಿ ಸಾಧಿಸಲು ಸುಲಭವಾಗುತ್ತದೆ.

ವಿವಿಧ ಕಾರಣಗಳಿಂದ, ವಿಶೇಷವಾಗಿ ಜಂತುಗಳಿಂದ ಉಂಟಾದ ಆಮಶಂಕೆ, ಅತಿಸಾರದ ತೊಂದರೆಗಳು ಬಾಳೆಹೂವಿನ ಸೇವನೆಯಿಂದ ಶೀಘ್ರವಾಗಿ ಕಡಿಮೆಯಾಗುತ್ತದೆ. ಹಾಗೂ ಮಹಿಳೆಯರ ಮಾಸಿಕ ದಿನಗಳ ಸ್ರಾವದ ಪ್ರಮಾಣ ಒಂದು ವೇಳೆ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚಾಗಿದ್ದರೆ ಬಾಳೆಹೂವಿನ ಸೇವನೆ ಇದನ್ನು ಕಡಿಮೆಗೊಳಿಸಿ ಸಾಮಾನ್ಯ ಪ್ರಮಾಣಕ್ಕೆ ಇಳಿಸಲು ಸಮರ್ಥವಾಗಿವೆ.

Write A Comment