ಅಂತರಾಷ್ಟ್ರೀಯ

ಬಿಸಿಲಿಗೆ `ಸೋತೆ’ ಅನ್ನೋರು ತಿನ್ನಿ `ಸೌತೆ’

Pinterest LinkedIn Tumblr

cucumber

ಮಾರ್ಚ್ ತಿಂಗಳ ಎರಡನೇ ವಾರದಲ್ಲಿದ್ದೇವೆ, ಆಗಲೇ ಬಿಲಿಸಿನ ಝಳ ಜಾಸ್ತಿಯಾಗಿದ್ದು, ಜನರು ಮನೆ, ಕಛೇರಿಗಳಿಂದ ಹೊರ ಬರಲಿಕ್ಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಎದುರಾಗಿದೆ.

ಬಿಸಿಲಿನ ಧಗೆಯಿಂದ ಪಾರಾಗಲು, ನೀರಿನ ದಾಹ ತೀರಿಸಿಕೊಳ್ಳಲು ಹಲವು ಮಾರ್ಗೋಪಾಯಗಳಿವೆ. ಪ್ರಮುಖವಾಗಿ ನಿಂಬೆ ಶರಬತ್ತು ಬೇಸಿಗೆಯಲ್ಲಿ ಕುಡಿಯಲು ಇದೊಂದು ಉತ್ತಮ ಪಾನೀಯ. ಅದೇ ರೀತಿ ಕಲ್ಲಂಗಡಿ ಹಣ್ಣು, ಕರ್ಬೂಜಾ, ಎಳೆ ಸೌತೆಕಾಯಿಗಳನ್ನು ತಿನ್ನುವುದರಿಂದ ರಣ ಬಿಸಿಲಿನ ದಾಹವನ್ನು ತಣಿಸಿಕೊಳ್ಳಬಹುದಾಗಿದೆ.

ಸೌತೆಕಾಯಿಯಲ್ಲಿ ಪುಷ್ಕಳವಾಗಿ ನೀರಿನ ಅಂಶಗಳಿದ್ದು, ಅವುಗಳ ಜತೆಗೆ ಉತ್ತಮ ಪ್ರಮಾಣದಲ್ಲಿ ವಿಟಮಿನ್‌ಗಳು ಮತ್ತು ಪೋಷಕಾಂಶಗಳೂ ಇವೆ. ಇದರ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಸೌತೆಕಾಯಿಗೆ ಬೇಸಿಗೆಯ ತರಕಾರಿ ಎಂಬ ಅನ್ವರ್ಥನಾಮವೂ ಇದೆ. ಇಡೀ ವರ್ಷ ಲಭ್ಯವಿರುವ ಈ ತರಕಾರಿಯನ್ನು ನಿತ್ಯ ಸೇವಿಸುವುದರಿಂದ ಆರೋಗ್ಯ ಸುಧಾರಣೆಗೆ ನೆರವಾಗಲಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಾಗಲಿವೆ.

ಸೌತೆಕಾಯಿಯನ್ನು ತರಕಾರಿ ಹಚ್ಚಿದಂತೆ ಕತ್ತರಿಸಿ, ನೀರಿನಲ್ಲಿ ಸೇರಿಸಿ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ವೃದ್ಧಿಯಾಗಲಿದೆ. ಬೇಸಿಗೆಯ ಝಳದಿಂದ ದೇಹದ ಚೈತನ್ಯ ಕುಸಿಯದಂತೆ ಕಾಪಾಡುತ್ತದೆ.

ಸೌತೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ನೆನೆಸಿಟ್ಟು ಮಾರನೆ ದಿನ ಕುಡಿದರೆ ಇನ್ನೂ ಒಳೆಯದಾಗುತ್ತದೆ. ಇಂತಹ ನೀರು ಕುಡಿಯುವುದರಿಂದ ಬಿಸಿಲಿನ ಧಗೆಯಿಂದ ದೇಹ ಕಳೆದುಕೊಂಡಿದ್ದ ನೀರು ಮತ್ತು ಇತರೆ ಪೋಷಕಾಂಶ ಖನಿಜಗಳನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಸೌತೆಕಾಯಿ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ವಿಟಮಿನ್-ಎ ಹಾಗೂ ವಿಟಮಿನ್-ಸಿ ಗಳಲ್ಲದೆ ಇತರೆ ಉಪಯುಕ್ತ ಖನಿಜಾಂಶಗಳು ಲಭ್ಯವಾಗುತ್ತದೆ. ಇದರಿಂದ ಬಿರುಬಿಸಿನಲ್ಲೂ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಸೌತೆಕಾಯಿಯಲ್ಲಿ ಕ್ಯಾಲೋರಿಗಳು ಇಲ್ಲದ ಕಾರಣ, ಹೊಟ್ಟೆ ಹಸಿದಾಗಲೆಲ್ಲಾ ತಿನ್ನಲು ಅತ್ಯಂತ ಸಮರ್ಪಕ ಆಹಾರವಾಗಿದೆ. ಸೌತೆಕಾಯಿ ತಿಂದರೆ ದೇಹದ ತೂಕ ಹೆಚ್ಚುತ್ತದೆಂಬ ಭಯ ಅನಗತ್ಯ ಸ್ಥೂಲದೇಹಿಗಳೂ ತಿನ್ನಬಹುದು.

ಸೌತೆಕಾಯಿ ನೆನೆಸಿದ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಇದರಲ್ಲಿರುವ ಸಿಲಿಕಾ ಎಂಬ ಅಂಶಗಳು, ಚರ್ಮದ ಜೊತೆಗೆ ಸ್ನಾಯುಗಳಿಗೂ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಸೌತೆಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಕಾರಿಯಾಗುತ್ತವೆ.

Write A Comment