ಅಂತರಾಷ್ಟ್ರೀಯ

ಕೊತ್ತಂಬರಿ ಸೊಪ್ಪು ಸೇವಿಸುದರಿಂದ ಆರೋಗ್ಯಕ್ಕೆ ಏನು ಲಾಭ…ಇಲ್ಲಿದೆ ನೋಡಿ….

Pinterest LinkedIn Tumblr

coriander-benefits2

ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ. ಸಾಲಾಡ್, ಚಟ್ನಿ ಮೊದಲಾದವುಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಪ್ರಯೋಜನ ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ದೇಹದ ಆರೈಕೆಗೂ ವ್ಯಾಪಿಸಿದೆ. ಎಷ್ಟೋ ತೊಂದರೆಗಳ ಚಿಕಿತ್ಸೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದ್ದುದು ಕೊತ್ತಂಬರಿಯಿಂದ ಅಲ್ಪವೆಚ್ಚದಲ್ಲಿ ಗುಣವಾಗಿದೆ.

ಇದರಲ್ಲಿರುವ ವಿವಿಧ ಪೋಷಕಾಂಶಗಳು, ವಿಶೇಷವಾಗಿ ಪೊಟ್ಯಾಶಿಯಂ ಹಲವು ರೀತಿಯಲ್ಲಿ ದೇಹಕ್ಕೆ ಅನುಕೂಲಕರವಾಗಿದೆ. ಉಳುಕು, ಸುಟ್ಟಗಾಯ ಮೊದಲಾದವುಗಳಿಗೆ ದೇಹದ ಹೊರಗಿನಿಂದ ಆರೈಕೆ ನೀಡಿದರೆ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಇನ್ನೂ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಬನ್ನಿ,

ಕೂದಲು ಉದುರುವುದನ್ನು ತಪ್ಪಿಸುತ್ತದೆ
ಕೊತ್ತಂಬರಿಯಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದ್ದು ವಿಶೇಷವಾಗಿ ಕೂದಲ ಉದುರುವಿಕೆಗೆ ಕಾರಣವಾಗುವ ಕೂದಲ ಬುಡ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ಒಂದು ಕಪ್ ಅಥವಾ ಉದ್ದ ಕೂದಲಿದ್ದರೆ ಇನ್ನೂ ಹೆಚ್ಚು ಕೊತ್ತಂಬರಿ ಎಲೆಗಳನ್ನು ಅರೆಯಿರಿ. ಇದರೊಂದಿಗೆ ಸಮಪ್ರಮಾಣದಲ್ಲಿ ನೆನೆಸಿಟ್ಟ ಮೆಂತೆ ಮತ್ತು ಈಗತಾನೇ ಹಿಂಡಿದ ತೆಂಗಿನ ಹಾಲನ್ನು ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಕೂದಲ ಬುಡಕ್ಕೆ ತಗಲುವಂತೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿ.

ಅರ್ಧ ಗಂಟೆಯ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ ಸ್ನಾನ ಮಾಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ. ಕೆಲವೇ ದಿನಗಳಲ್ಲಿ ಕೂದಲು ಉದುರುವುದು ನಿಂತಿರುವುದೂ ಕೇಶ ಕಾಂತಿಯುಕ್ತವಾಗಿರುವುದನ್ನೂ ಗಮನಿಸಬಹುದು.

ಮೊಡವೆಗಳನ್ನು ಇಲ್ಲವಾಗಿಸುತ್ತದೆ
ಹದಿಹರೆಯದಲ್ಲಿ ಕಾಡುವ ಮೊಡವೆಗಳಿಗೆ ಕೊತ್ತಂಬರಿಯ ಬಳಿ ತಕ್ಕ ಪರಿಹಾರವಿದೆ. ದುಬಾರಿ ಪ್ರಸಾದನಗಳೂ ಕೊತ್ತಂಬರಿಯಷ್ಟು ಸಮರ್ಥವಾಗಿ ಮೊಡವೆಗಳನ್ನು ಕಲೆಯಿಲ್ಲದೇ ನಿವಾರಿಸಲಾರವು. ಇದಕ್ಕಾಗಿ ಕೊಂಚ ಕೊತ್ತಂಬರಿ ಎಲೆಗಳನ್ನು ದಂಟು ಸಹಿತ ನುಣ್ಣಗೆ ಅರೆಯಿರಿ. ಈ ಲೇಪನವನ್ನು ನೇರವಾಗಿ ಮೊಡವೆಗಳ ಮೇಲೆ ದಪ್ಪನಾಗಿ ಹಚ್ಚಿ. ಮೊಡವೆಗಳು ಹೆಚ್ಚಿದ್ದರೆ ಇಡಿಯ ಮುಖಕ್ಕೆ ಹಚ್ಚಿ. ಹದಿನೈದು ನಿಮಿಷಗಳವರೆಗೆ ಈ ಲೇಪನ ಒಣಗಲು ಬಿಡಿ.

ಬಳಿಕ ತಣ್ಣೀರಿನಿಂದ ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸರ್ವಥಾ ಸೋಪು ಹಚ್ಚಬೇಡಿ. ಉಗುರನ್ನಂತೂ ತಾಕಿಸಲೇ ಬಾರದು. ಮುಂದಿನ ದಿನಗಳಲ್ಲಿ ಮೊಡವೆ ಇನ್ನೂ ಕೆಂಪಗಾಗಿ ದೊಡ್ಡದಾಗುತ್ತದೆ. ಆದರೆ ನಿಧಾನವಾಗಿ ಕರಗುತ್ತಾ ಕಲೆಯಿಲ್ಲದೇ ಮಾಯವಾಗುತ್ತದೆ. ಈ ಭಾಗದ ಚರ್ಮ ಕಲೆಯಿಲ್ಲದಂತಿರುತ್ತದೆ. ಅಪ್ಪಿ ತಪ್ಪಿ ಎಲ್ಲಾದರೂ ಮೊಡವೆಯನ್ನು ಒಡೆದರೆ ಅಲ್ಲಿ ಶಾಶ್ವತವಾದ ಕಲೆ ಉಳಿಯುವ ಸಾಧ್ಯತೆಯಿದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಇದೆ. ಈ ಊಟದ ಕೊನೆಯಲ್ಲಿ ಕೊತ್ತಂಬರಿ ಸೇರಿಸಿದ ಮಜ್ಜಿಗೆ ಸಹಾ ಇದೆ. ಏಕೆಂದರೆ ಜೀರ್ಣಕ್ರಿಯೆ ಉತ್ತಮಗೊಳಿಸಲು ಕೊತ್ತಂಬರಿ ಸಹಕಾರಿಯಾಗಿದೆ. ಆದರೆ ಮಜ್ಜಿಗೆಗಿಂತಲೂ ಕೊತ್ತಂಬರಿ ನೆನೆಸಿಟ್ಟ ನೀರು ಹೆಚ್ಚು ಪರಿಣಾಮಕಾರಿ. ಇದಕ್ಕಾಗಿ ಒಂದ್ ಜಗ್ ಭರ್ತಿ ನೀರು ತುಂಬಿಸಿ ಇದಕ್ಕೆ ಕೆಲವು ದಂಡು ಕೊತ್ತಂಬರಿ ಸೊಪ್ಪು ಮತ್ತು ಅಡ್ಡಲಾಗಿ ಕೊಯ್ದ ಲಿಂಬೆಹಣ್ಣಿನ ಬಿಲ್ಲೆಗಳನ್ನು ಸೇರಿಸಿ ಇಡಿಯ ರಾತ್ರಿ ನೆನೆಸಿಡಿ. ಈ ನೀರನ್ನು ಮರುದಿನ ಹಲವು ಬಾರಿ ಕುಡಿದು ಸಂಜೆಯ ಒಳಗೆ ಖಾಲಿ ಮಾಡಿ.

Write A Comment