ಕರಾವಳಿ

ದುಬೈಯ‌ಲ್ಲಿ ಅದ್ದೂರಿಯಾಗಿ ಜ‌ರುಗಿದ‌ ಕೆ ಸಿ ಎಫ್ ದಿನಾಚ‌ರ‌ಣೆ

Pinterest LinkedIn Tumblr

IMG-20160220-WA0014

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ದುಬೈ ಝೋನ್ ವತಿಯಿಂದ ಮೂರನೇ ವರ್ಷದ ಕೆಸಿಎಫ್ ಡೇ ಪ್ರಯುಕ್ತ “ತಖದ್ದುಂ-16” ಕಾರ್ಯಕ್ರಮ ದುಬೈ ಅಬೂ ಹೈಲ್ ನಲ್ಲಿರುವ ಐಸಿಎಫ್ ಸಭಾಂಗಣದಲ್ಲಿ ನಡೆಯಿತು.

ಕೆಸಿಎಫ್ ದುಬೈ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಲತೀಫಿರವರ ಅಧ್ಯಕ್ಯ್ಶತೆಯಲಿ ನಡೆದ ಕಾರ್ಯಕ್ರಮವನ್ನು ಇಬ್ರಾಹಿಂ ಫೈಝಿ ಶಾಮಿಲಿ ಉದ್ಘಾಟಿಸಿದರು. ಮರ್ಕಝ್ ದುಬೈ ಅಧ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಕಟ್ಟಿಪ್ಪಾರ, ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಕಾಜೂರು ಶುಭ ಹಾರೈಕೆ ಭಾಷಣ ಮಾಡಿದರು.

IMG-20160220-WA0001

IMG-20160220-WA0005

IMG-20160220-WA0017

IMG-20160220-WA0018

IMG-20160220-WA0022

IMG-20160220-WA0023

IMG-20160220-WA0024

ದುಬೈ ಝೊನಲ್ ಆಡಳಿತ ವಿಭಾಗದ ಕಾರ್ಯದರ್ಶಿ ರಫೀಕ್ ಕಲ್ಲಡ್ಕ ಕೆಸಿಎಫ್ ನಡೆದು ಬಂದ ಹಾದಿ ಮತ್ತು ಸಾಧನೆಗಳ ಒಂದು ಪಕ್ಷಿನೋಟ ಈ ಸಂದರ್ಭದಲ್ಲಿ ನೀಡಿದರು. ಕೆಸಿಎಫ್ ಕಾರ್ಯಕರ್ತನಾದ ನಂತರ ತಾನು ಯಾವ ರೀತಿ ಬದಲಾದೆ ಮತ್ತು ಸಮಾಜದಲ್ಲಿ ತನಗೆ ಸಿಕ್ಕಿದ ಗೌರವ ಇದರ ಕುರಿತು ದುಬೈ ಝೋನ್ ಅಧೀನದ ಪ್ರತೀ ಸೆಕ್ಟರ್ ಕಾರ್ಯಕರ್ತರು ಮಂಡಿಸಿದ ಮನದಾಳದ ಮಾತು ಪ್ರತಿಯೊಬ್ಬ ಕಾರ್ಯಕರ್ತರಿಗೆ ಮತ್ತಷ್ಟು ಹುರುಪನ್ನು ನೀಡಿತು.

ರಾಜ್ಯ ಎಸ್ಸೆಸ್ಸೆಫ್ ಎಸ್ ಟೀಂ ಅಮೀರ್ ಉಮರ್ ಸಖಾಫಿ ಎಡಪಾಲರವರು ಸಂಘಟನೆಯ ಈ ವರ್ಷದ ಘೋಷ ವಾಕ್ಯವಾದ ತಖದ್ದುಂ (ಓದು, ಮುನ್ನಡೆಸು, ಯಶಸ್ವಿಯಾಗು) ಎಂಬ ವಿಷಯದ ಕುರಿತು ತರಗತಿ ನಡೆಸಿದರು. ಕೊನೆಯಲ್ಲಿ ಅಸ್ಮಾವುಲ್ ಹುಸ್ನಾ ಪಠಿಸಿ ದುಆ ನೆರವೇರಿಸಿ ಕೊಟ್ಟರು. ಕೆಸಿಎಫ್ ದುಬೈ ಝೋನ್ ನಿರ್ದೇಶಕರಾದ ಅಶ್ರಫ್ ಹಾಜಿ ಅಡ್ಯಾರ್, ಕೆಸಿಎಫ್ ಅಲ್ ಕೂಝ್ ಸೆಕ್ಟರ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕೊಳ್ನಾಡು, ನೈಫ್ ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಸಅದಿ ಕೊಳಕೇರಿ, ನಖೀಲ್ ಸೆಕ್ಟರ್ ಅಧ್ಯಕ್ಷರಾದ ಖಾಸಿಂ ಮದನಿ ತೆಕ್ಕಾರು ಸೇರಿದಂತೆ ಅನೇಕ ನಾಯಕರುಗಳು ಉಲಮಾಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ದುಬೈ ಝೋನ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಅಬ್ದುಲ್ ರಶೀದ್ ಪಡೀಲ್ ಸರ್ವರನ್ನು ಸ್ವಾಗತಿಸಿ, ದುಬೈ ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಜೆಪ್ಪು ಕೊನೆಯಲ್ಲಿ ವಂದಿಸಿದರು. ಆಡಳಿತ ವಿಭಾಗದ ಅದ್ಯಕ್ಷರಾದ ರಿಯಾಝ್ ಕೊಂಡಂಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment