ಅಂತರಾಷ್ಟ್ರೀಯ

ದುಬೈಯಲ್ಲಿ ‘ಕನ್ನಡಿಗ ವರ್ಲ್ಡ್’ ನ್ಯೂಸ್ ವೆಬ್‌ಸೈಟ್‌ನ ನೂತನ ಮೊಬೈಲ್ ಆ್ಯಪ್ ಬಿಡುಗಡೆ

Pinterest LinkedIn Tumblr

Kannadigaworld aap_Feb 12-2016-005

ಫೋಟೋ: ಅಶೋಕ್ ಬೆಳ್ಮಣ್

ದುಬೈ, ಫೆ.14: ಕಳೆದ ಮೂರು ವರ್ಷದ ಅವಧಿಯೊಳಗೆ ಅಂತರ್‌ಜಾಲದಲ್ಲಿ ಇತಿಹಾಸ ಸೃಷ್ಟಿಸಿರುವ ‘ಕನ್ನಡಿಗ ವರ್ಲ್ಡ್’ ಕನ್ನಡ-ಇಂಗ್ಲಿಷ್ ನ್ಯೂಸ್ ವೆಬ್‌ಸೈಟ್ ಇದೀಗ ತನ್ನದೇ ಆದ ಮೊಬೈಲ್ ಆ್ಯಪ್‌ನ್ನು ಹೊರತಂದಿದ್ದು, ಇದರ ಅಧಿಕೃತ ಬಿಡುಗಡೆ ಶುಕ್ರವಾರ ದುಬೈಯಲ್ಲಿ ನಡೆಯಿತು.

 Kannadigaworld aap_Feb 12-2016-001

Kannadigaworld aap_Feb 12-2016-002

Kannadigaworld aap_Feb 12-2016-003

Kannadigaworld aap_Feb 12-2016-004

Kannadigaworld aap_Feb 12-2016-006

Kannadigaworld aap_Feb 12-2016-007

Kannadigaworld aap_Feb 12-2016-008

Kannadigaworld aap_Feb 12-2016-009

Kannadigaworld aap_Feb 12-2016-010

Kannadigaworld aap_Feb 12-2016-011

Kannadigaworld aap_Feb 12-2016-013

Kannadigaworld aap_Feb 12-2016-014

ದುಬೈ ಜುಮೇರಾದ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಎಮಿರೇಟ್ಸ್ ಥಿಯೇಟರ್‌ನಲ್ಲಿ ದುಬೈಯ ಗಮ್ಮತ್ ಕಲಾವಿದೆರ್ ಆಯೋಜಿಸಿದ್ದ ‘ನಂಕ್ ಮಾತೆರ್ಲಾ ಬೋಡು’ ತುಳು ನಾಟಕದ ಮಧ್ಯೆ ‘ಕನ್ನಡಿಗ ವರ್ಲ್ಡ್’ ವೆಬ್‌ಸೈಟ್‌ನ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

‘ಕನ್ನಡಿಗ ವರ್ಲ್ಡ್’ ವೆಬ್‌ಸೈಟ್‌ನ ಪ್ರಧಾನ ಸಂಪಾದಕರೂ ಹಾಗೂ ದುಬೈ ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಸಮ್ಮುಖದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ ನೂತನ ಮೊಬೈಲ್ ಆ್ಯಪ್‌ನ್ನು ಅನಾವರಣಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನ ವಿವಿಧ ಮಾಧ್ಯಮ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ಕನ್ನಡಿಗ ವರ್ಲ್ಡ್’ ವೆಬ್‌ಸೈಟ್ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದು, ಕೆಲವೇ ಕೆಲವು ಸಮಯದೊಳಗೆ ಲಕ್ಷಾಂತರ ಮಂದಿ ಓದುಗ ಬಳಗವನ್ನೇ ಸೃಷ್ಟಿಸಿದೆ. ಫೇಸ್‌ಬುಕ್‌ನಲ್ಲಿ ಸುಮಾರು ನಾಲ್ಕು ಲಕ್ಷದಷ್ಟು ಲೈಕ್‌ಗಳನ್ನು ಹೊಂದುವ ಮೂಲಕ ಓದುಗರಿಗೆ ಇನ್ನಷ್ಟು ಹತ್ತಿರವಾಗಿದೆ.

Write A Comment