ಕರಾವಳಿ

‘ಧೂಮ್ ಧಮಾಕ-2016’ರ ಕಾಮಿಡಿ ಶೋನಲ್ಲಿ ಹಾಸ್ಯದ ಹೊನಲು ಹರಿಸಲು ದುಬೈಗೆ ಆಗಮಿಸಿದ ನಟ ಜಾನಿ ಲಿವರ್: ಹರೀಶ್ ಶೇರಿಗಾರ್ ದಂಪತಿಯಿಂದ ಅದ್ದೂರಿ ಸ್ವಾಗತ

Pinterest LinkedIn Tumblr

Jony Dubai entry-Jan 7-2016-002

ದುಬೈ, ಜ.7: ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಜ.8ರಂದು ಮೂರನೇ ಬಾರಿಗೆ ನಡೆಯುತ್ತಿರುವ ‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಹಾಸ್ಯದ ಹೊನಲುಹರಿಸಲು ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಬಾಲಿವುಡ್ ನಟ ಜಾನಿ ಲಿವರ್ ಹಾಗೂ ಪುತ್ರಿ ಜಮಿ ಲಿವರ್ ಹಾಗೂ ಪತ್ನಿ ಸುಜಾತರೊಂದಿಗೆ ಬುಧವಾರ ಸಂಜೆ ದುಬೈಗೆ ಆಗಮಿಸಿದ್ದಾರೆ.

Jony Dubai entry-Jan 7-2016-003

Jony Dubai entry-Jan 7-2016-007

Jony Dubai entry-Jan 7-2016-009

Jony Dubai entry-Jan 7-2016-011

Jony Dubai entry-Jan 7-2016-013

Jony Dubai entry-Jan 7-2016-015

ಭಾರತದಿಂದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಾನಿ ಲಿವರ್ ಹಾಗೂ ಅವರ ಕುಟುಂಬದವರನ್ನು ಹರೀಶ್ ಶೇರಿಗಾರ್, ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಿಗ್ನೀಚರ್ ಈವೆಂಟ್ಸ್‌ನ ಆಡಳಿತ ನಿರ್ದೇಶಕ ಸುನಿಲ್ ಗ್ರೋವರ್ ಹಾಗೂ ಅವರ ಧರ್ಮಪತ್ನಿ, ಹರೀಶ್ ಶೇರಿಗಾರ್‌ರ ಸಹೋದರರಾದ ಪ್ರಕಾಶ್ ಶೇರಿಗಾರ್ ಹಾಗೂ ಶ್ರೀನಿವಾಸ್ ಶೇರಿಗಾರ್ ಹಾಜರಿದ್ದರು.

ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಜನವರಿ 8ರಂದು ಸಂಜೆ 6 ಗಂಟೆಗೆ ನಡೆಯಲಿರುವ ‘ಧೂಮ್ ಧಮಾಕ-2016’ ಕಾಮಿಡಿ ಶೋ ಪ್ರದರ್ಶನದಲ್ಲಿ ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ನಟ ಜಾನಿ ಲಿವರ್ ತಮ್ಮ ಪುತ್ರಿ ಜಮಿ ಲಿವರ್‌ರೊಂದಿಗೆ ಹಾಸ್ಯದ ಲೋಕವನ್ನೇ ತೆರೆದಿಡಲಿದ್ದಾರೆ.

ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂರನೇ ಬಾರಿಗೆ ಈ ಅದ್ದೂರಿಯ ಪ್ರದರ್ಶನ ನಡೆಯುತ್ತಿದ್ದು, ಇದರಿಂದ ಬರುವ ಹಣವನ್ನೆಲ್ಲಾ ತವರೂರಿನ(ಮಂಗಳೂರು) ಬಡವರಿಗೆ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ನೀಡುವ ಮಹತ್ತರ ಸದುದ್ದೇಶವನ್ನು ಹೊಂದಿದ್ದಾರೆ.

‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಅಂತಾರಾಷ್ಟ್ರೀಯ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ನೃತ್ಯರೂಪಕ ಕೂಡಾ ನಡೆಯಲಿದೆ. ಸಮ್ಮಿಲನದಲ್ಲಿ ವಿವಿಧ ಮಾದರಿ, ವಿನ್ಯಾಸಗಳು, ಭಾರತೀಯ ಶಾಸ್ತ್ರೀಯ ನೃತ್ಯ ಮಾದರಿಗಳು, ಕೂಚುಪುಡಿ ಮತ್ತು ಕಥಕ್‌ನಂತಹ ನೃತ್ಯ ರೂಪಗಳು ಪ್ರದರ್ಶನಗೊಳ್ಳಲಿದೆ.

‘ಧೂಮ್ ಧಮಾಕ-2016’ರ ಪ್ರದರ್ಶನದ ಟಿಕೆಟ್ ಶೇ.70ರಷ್ಟು ಈಗಾಗಲೇ ಖಾಲಿಯಾಗಿದ್ದು, ಜನ ಜಾನಿಲಿವರ್‌ನ ಶೋಗಾಗಿ ಮುಗಿಬೀಳುತ್ತಿದ್ದಾರೆ.

Online Tickets Available on:
And also available in Choithram super market Al Rais, Meena Bazar, Karama and Deira outlets.

Write A Comment