ಕರಾವಳಿ

ಡಿ. 11 . ಕೆಐಸಿ ಕ್ರಿಸ್ಟಲ್ ಜುಬಿಲಿ ಮೀಟ್ ಶಾರ್ಜಾದಲ್ಲಿ ಪ್ರಚಾರ ಅಭಿಯಾನಕ್ಕೆ ಚಾಲನೆ

Pinterest LinkedIn Tumblr

IMG-20151201-WA0015(1)

ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ ) ತನ್ನ ಹದಿನೈದು ವರ್ಷಗಳ ಪೂರೈಕೆಯ ಸಲುವಾಗಿ ಡಿ. 11 ರಂದು ಇರಾನಿಯನ್ ಕ್ಲಬ್ ಸಭಾಂಗನದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಆ ಪ್ರಯುಕ್ತ ಕಾರ್ಯಕ್ರಮದ ಪ್ರಚಾರ ಅಭಿಯಾನಕ್ಕೆ ಕೆ ಐ ಸಿ ಸ್ಥಾಪಕ ಸದಸ್ಯರು ಶಾರ್ಜಾ ನ್ಯಾಷನಲ್ ಪೈಂಟ್ ಸಮಿತಿ ಕೋಶಾಧಿಕಾರಿ ಆದ ಹಾಜಿ ಅಬ್ದುಲ್ ರಝಾಕ್ ಸೊಂಪಾಡಿ , ಹಾಗೂ ಅಬ್ಬಾಸ್ ಕೇಕುಡೆ ರವರಿಗೆ ಕ್ರಿಸ್ಟಲ್ ಜುಬಿಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಶರೀಫ್ ಬಿ ಕೆ ಕಾವು ರವರು ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

12299395_884441138293325_4609299321722347779_n

12313736_882464061824366_1656935570470654534_n

IMG-20151126-WA0103

ಈ ಸಂಧರ್ಭದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ , ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಪ್ರಧಾನ ಕಾರ್ಯದರ್ಶಿ ಹಮೀದ್ ಮಣಿಲ ರವರು ಉಪಸ್ತಿತರಿದ್ದು ಮುಂದೆ ಶಾರ್ಜಾ ಪ್ರದೇಶದಲ್ಲಿ ಕೆ ಐ ಸಿ ಹಮ್ಮಿಕೊಂಡಿರುವ ಈ ಬೃಹತ್ ಕಾರ್ಯಕ್ರಮದ ಪ್ರಚಾರ ಅಭಿಯಾನವನ್ನು ಮುಂದುವರೆಸಿಕೊಂಡು , ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕೆ ಐ ಸಿ ಹಿತೈಷಿಗಳು ಭಾಗವಹಿಸುವಲ್ಲಿ ಸಹಕರಿಸುವಂತೆ ಕೇಳಿಕೊಳ್ಳಲಾಯಿತು. ಇದೆ ಸಂಧರ್ಭದಲ್ಲಿ ಶಾರ್ಜಾ ನ್ಯಾಷನಲ್ ಪೈಂಟ್ ಸಮಿತಿ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾಗಿ ಆ ಮೂಲಕ ಅವರಿಗೆ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಲಾಯಿತು. ಅಲ್ಲದೆ ದಿನಾಂಕ 03.12.2015 ರ ಗುರುವಾರದಂದು ಶಾರ್ಜಾ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಪ್ರಚಾರ ಸಭೆ ಶಾರ್ಜಾ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಯೂಸುಫ್ ಹಾಜಿ ಬೇರಿಕೆಯವರ ವಿವಾಸದಲ್ಲಿ ನಡೆಯಲಿದ್ದು , ಕೆ ಐ ಸಿ ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಕೆ ಐ ಸಿ ಶಾರ್ಜ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮಣಿಲ ಹಾಗೂ ಪ್ರಧಾನ ಕಾರ್ಯದರ್ಶಿ ಸಾಜಿದ್ ಆರ್ಲಪದವು ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Write A Comment